ಲಂಡನ್: ಮುಂದಿನ ತಿಂಗಳು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್ ಅಲಭ್ಯರಾಗಲಿದ್ದಾರೆ.
ರೂಟ್ ಅವರ ಪತ್ನಿ ಕ್ಯಾರಿ ಜುಲೈ ಆರಂಭದಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಲಿದ್ದು, ಈ ಕಾರಣದಿಂದಾಗಿ ರೂಟ್ ತಮ್ಮ ಜೀವಿತಾವಧಿಯಲ್ಲಿಯೇ ಮೊದಲ ಬಾರಿಗೆ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.
2017ರಲ್ಲಿ ನಾಯಕನಾಗಿ ನೇಮಕಗೊಂಡಾಗಿನಿಂದ ಟೆಸ್ಟ್ ತಪ್ಪಿಸದ 29 ವರ್ಷದ ರೂಟ್, ನಾಕ್-ಆನ್ ಕ್ರಿಕೆಟಿಂಗ್ ಪರಿಣಾಮಗಳನ್ನು ಲೆಕ್ಕಿಸದೆ ತಾನು ಉಪಸ್ಥಿತನಿರುತ್ತೇನೆ ಎಂದು ದೃಢಪಡಿಸಿದ್ದಾರೆ. ಇದರ ಜೊತೆಗೆ ಬೆನ್ ಸ್ಟೋಕ್ಸ್ ತಂಡವನ್ನು ಮುನ್ನಡೆಸಲು ಅನುಮೋದಿಸಿದ್ದಾರೆ.
"ಬೆನ್ ನಾಯಕನಾಗಿದ್ದರೆ ಅವನು ಅದ್ಭುತವಾಗಿ ಆಡಲಿದ್ದಾನೆ. ಉಪ-ನಾಯಕನಾಗಿ ಬೆನ್ ತನ್ನ ತರಬೇತಿಯ ವೇಳೆ ಸಾಗುವ ರೀತಿ, ಕಷ್ಟದ ಸಂದರ್ಭಗಳಲ್ಲಿ ಬೌಲಿಂಗ್ ಮಾಡುವ ತಂತ್ರಗಾರಿಕೆ, ವಿಭಿನ್ನ ಸನ್ನಿವೇಶಗಳಲ್ಲಿ ಬ್ಯಾಟ್ ಮೂಲಕ ಸಾಮರ್ಥ್ಯ ತೋರಿಸಿದ್ದಾನೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ vs ವಿಂಡೀಸ್ ನಡುವಣ ಮೊದಲ ಟೆಸ್ಟ್ ಪಂದ್ಯ ಸೌತಾಂಪ್ಟನ್ನಲ್ಲಿ ಜುಲೈ 8 ರಿಂದ ಪ್ರಾರಂಭವಾಗಲಿದೆ.