ಲಂಡನ್: 2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಗೆದ್ದ ಬಳಿಕ ಪಡೆದುಕೊಂಡಿದ್ದ ಚಿನ್ನದ ಪದಕ ಕಳೆದುಕೊಂಡಿರುವುದಾಗಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಹೇಳಿದ್ದಾರೆ.
ಸುಮಾರು ಒಂದು ವಾರದಿಂದ ನಾನು ಮನೆಯನ್ನೆಲ್ಲ ಹುಡುಕಾಡಿದ್ದೇನೆ ಆದರೆ ಚಿನ್ನದ ಪದಕ ಪತ್ತೆಯಗಿಲ್ಲ, ನನಗೆ ಯಾರೋ ಕಳುಹಿಸಿದ ಫೋಟೋದಲ್ಲಿ ಅದನ್ನು ಮನೆಯಲ್ಲೆ ತೂಗುಹಾಕಲಾಗಿತ್ತು. ಆದರೆ, ಈಗ ಆ ಸ್ಥಳದಲ್ಲಿಲ್ಲ ಎಂದು ರೇಡಿಯೋ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ
ಕೊರೊನಾ ಸೋಂಕು ತಡೆಯಲು ಲಾಕ್ಡೌನ್ ಘೋಷಣೆ ಮಾಡಿದ್ದು, ತಮ್ಮ ಲಾಕ್ಡೌನ್ನ ಹೆಚ್ಚು ಸಮಯವನ್ನು ಪದಕ ಹುಡುಕುವುದರಲ್ಲೇ ಕಳೆದಿದ್ದೇನೆ ಎಂದಿದ್ದಾರೆ.
2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದ ಆರ್ಚರ್ ಇಂಗ್ಲೆಂಡ್ಪರ ಅತಿಹೆಚ್ಚು ವಿಕೆಟ್ ಪಡೆದಿದ್ದರು. ಅಲ್ಲದೆ ಫೈನಲ್ ಪಂದ್ಯದ ಸೂಪರ್ ಓವರ್ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು