ETV Bharat / sports

ಇಂಗ್ಲೆಂಡ್​ಗೆ 2 ರನ್​ಗಳ ರೋಚಕ ಜಯ: ಗೆಲುವಿನ ದಡದಲ್ಲಿ ಎಡವಿದ ಆಸ್ಟ್ರೇಲಿಯಾ! - T 20 Match

ಆ್ಯಶ್ಟನ್ ಅಗರ್, ಕೇನ್ ರಿಚರ್ಡ್ಸನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ದಾಳಿಗೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಕಂಗೆಟ್ಟರು. ಆರಂಭಿಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ 44 ರನ್​​ (29 ಎಸೆತ, 2 ಸಿಕ್ಸರ್, 5 ಬೌಂಡರಿ) ಮತ್ತು 3ನೇ ಕ್ರಮಾಂಕದ ಡೇವಿಡ್ ಮಲಾನ್ 66 ರನ್​ (43 ಎ, 3 ಸಿ, 5 ಸಿ) ಮೂಲಕ ಪ್ರತ್ಯುತ್ತರ ನೀಡಿ ಸವಾಲಿನ ಮೊತ್ತವನ್ನು ಆಸ್ಟ್ರೇಲಿಯಾ ಮುಂದಿಟ್ಟರು.

England
ಇಂಗ್ಲೆಂಡ್
author img

By

Published : Sep 5, 2020, 7:27 AM IST

Updated : Sep 5, 2020, 7:50 AM IST

ಸೌತಾಂಪ್ಟನ್​: ಕೊರೊನಾ ಕಾಲದಲ್ಲಿ ವೆಸ್ಟ್​ ಇಂಡೀಸ್​, ಪಾಕಿಸ್ತಾನ ಹಾಗೂ ಐರ್ಲೆಂಡ್​ ವಿರುದ್ಧ ಪ್ರತಾಪ ಮೆರೆದಿದ್ದ ಇಂಗ್ಲೆಂಡ್​, ಆಸ್ಟ್ರೇಲಿಯಾ ವಿರುದ್ಧದ ಮೂರು ಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದೆ.

ಶುಕ್ರವಾರ ರೋಸ್‌ ಬೌಲ್‌ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್​​​ ತಂಡ ಎರಡು ರನ್​​ಗಳ ಜಯ ಸಾಧಿಸಿದೆ.

ಆ್ಯಶ್ಟನ್ ಅಗರ್, ಕೇನ್ ರಿಚರ್ಡ್ಸನ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ದಾಳಿಗೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಕಂಗೆಟ್ಟರು. ಆರಂಭಿಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ 44 ರನ್​​ (29 ಎಸೆತ, 2 ಸಿಕ್ಸರ್, 5 ಬೌಂಡರಿ) ಮತ್ತು 3ನೇ ಕ್ರಮಾಂಕದ ಡೇವಿಡ್ ಮಲಾನ್ 66 ರನ್​ (43 ಎ, 3 ಸಿ, 5 ಬೌ) ಮೂಲಕ ಪ್ರತ್ಯುತ್ತರ ನೀಡಿ ಸವಾಲಿನ ಮೊತ್ತವನ್ನು ಆಸ್ಟ್ರೇಲಿಯಾ ಮುಂದಿಟ್ಟರು.

163 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಉತ್ತಮಾವಾಗಿ ಆಡುತ್ತಿತ್ತು. 14 ಓವರ್‌ಗಳ ಬಳಿಕ 124 ರನ್​ಗಳಿಗೆ ಒಂದು ವಿಕೆಟ್​ ಕಳೆದುಕೊಂಡಿತ್ತು. ಈ ಬಳಿಕ ನಾಟಕೀಯವಾಗಿ 160 ರನ್ ಆಗುವಷ್ಟರಲ್ಲಿ 6 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. 14 ಎಸೆತಗಳಲ್ಲಿ ಒಂಭತ್ತು ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡ ನಂತರ, ಆಸ್ಟ್ರೇಲಿಯನ್ನರಿಗೆ ಅಂತಿಮ 3 ಓವರ್‌ಗಳಲ್ಲಿ ಗೆಲುವಿಗೆ 26 ರನ್​ಗಳು ಬೇಕಿದ್ದವು. ಕೊನೆಯ ಎರಡು ಓವರ್‌ಗಳಲ್ಲಿ 19 ರನ್ ಅಗತ್ಯವಿತ್ತು. ಟಾಮ್ ಕುರನ್ ಎಸೆದ ಕೊನೆಯ ಓವರ್​ನಲ್ಲಿ 15 ರನ್‌ಗಳ ಅಗತ್ಯವಿದ್ದು, 12 ರನ್​ ಗಳಿಸಿ 2 ರನ್​ಗಳಿಂದ ವಿರೋಚಿತ ಸೋಲು ಅನುಭವಿಸಿತು.

ಇಂಗ್ಲೆಂಡ್ ಸ್ಕೋರ್​: ಡೇವಿಡ್ ಮಲಾನ್ 66 ರನ್​ (43 ಎ), ಜೋಸ್ ಬಟ್ಲರ್ 44 ರನ್​​ (29 ಎಸೆತ) ಹಾಗೂ ಕ್ರಿಸ್​ ಜೋರ್ಡಾನ್​ 14 (18 ಔಟಾಗದೆ). 20 ಓವರ್‌ಗಳಲ್ಲಿ 7ಕ್ಕೆ 162 ರನ್​. ಆ್ಯಶ್ಟನ್ ಅಗರ್ 32ಕ್ಕೆ 2, ಕೇನ್ ರಿಚರ್ಡ್ಸನ್ 13ಕ್ಕೆ 2, ಗ್ಲೆನ್ ಮ್ಯಾಕ್ಸ್‌ವೆಲ್ 14ಕ್ಕೆ 2 ವಿಕೆಟ್​ ಪಡೆದರು.

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್ 58 (47), ಆ್ಯರನ್ ಫಿಂಚ್ 46 (32), ಮಾರ್ಕಸ್ ಸ್ಟೋನಿಸ್ 23 (18 ಔಟಾಗದೆ). 20 ಓವರ್​ಗಳಲ್ಲಿ 6 ವಿಕೆಟ್​ಗೆ 160 ರನ್​. ಆದಿಲ್ ರಶೀದ್ 29ಕ್ಕೆ 2, ಜೋಫ್ರಾ ಆರ್ಚರ್ 33ಕ್ಕೆ 2 ಹಾಗೂ ಮಾರ್ಕ್​ ವುಡ್​ 31ಕ್ಕೆ 1 ವಿಕೆಟ್​ ಪಡೆದರು.

ಭಾನುವಾರ ರೋಸ್ ಬೌಲ್‌ನಲ್ಲಿ ಎರಡನೇ ಪಂದ್ಯ ನಡೆಯಲಿದ್ದು, ಒಂದು ವೇಳೆ ಆ ಪಂದ್ಯ ಇಂಗ್ಲೆಂಡ್​ ಗೆದ್ದರೆ ಸರಣಿ ತನ್ನದಾಗಿಸಿಕೊಳ್ಳಲಿದೆ.

Last Updated : Sep 5, 2020, 7:50 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.