ETV Bharat / sports

ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್​ಗೆ 8 ವಿಕೆಟ್​ಗಳ ಭರ್ಜರಿ ಜಯ​ ... 4ನೇ ಬಾರಿಗೆ ಫೈನಲ್​ಗೇರಿದ ಆಂಗ್ಲರು

ಆಸ್ಟ್ರೇಲಿಯಾ ವಿರುದ್ಧ 8 ವಿಕೆಟ್​ಗಳಿಂದ ಗೆದ್ದ ಇಂಗ್ಲೆಂಡ್​ ತಂಡ 12 ವಿಶ್ವಕಪ್​ ಇತಿಹಾಸದಲ್ಲಿ 4ನೇ ಬಾರಿಗೆ ಫೈನಲ್​ಗೇರಿದೆ.

England
author img

By

Published : Jul 11, 2019, 9:55 PM IST

Updated : Jul 11, 2019, 10:03 PM IST

ಬರ್ಮಿಂಗ್​ಹ್ಯಾಮ್​: ಆಸ್ಟ್ರೇಲಿಯಾ ನೀಡಿದ 224 ರನ್​ಗಳ ಸುಲಭಗುರಿ ಬೆನ್ನತ್ತಿದ ಇಂಗ್ಲೆಂಡ್​ ಜಾಸನ್​ ರಾಯ್​ ಅವರ ಅಬ್ಬರದ ಬ್ಯಾಟಿಂಗ್​ ನೆರವಿನಿಂದ 8 ವಿಕೆಟ್​ಗಳ ಸುಲಭ ಜಯ ಸಾಧಿಸಿ 4 ನೇ ಬಾರಿಗೆ ಫೈನಲ್​ಗೇರಿದೆ.

ಬರ್ಮಿಂಗ್​ ಹ್ಯಾಮ್​ನಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ್ದ ಆಸ್ಟ್ರೇಲಿಯಾ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಕೇವಲ 223 ರನ್​ಗಳಿಗೆ ಆಲೌಟ್​ ಆಯಿತು. 224ರನ್​ಗಳ ಸುಲಭ ಗುರಿ ಪಡೆದ ಇಂಗ್ಲೆಂಡ್​ ಮೊದಲ ವಿಕೆಟ್​ಗೆ ಜಾಸನ್​ ರಾಯ್ ಹಾಗೂ ಬ್ಯಾರ್ಸ್ಟೋವ್​ 124 ರನ್​ಗಳ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿಕೊಟ್ಟರು.

65 ಎಸೆತಗಳನ್ನೆದುರಿಸಿದ 9 ಬೌಂಡರಿ ಹಾಗೂ 5 ಸಿಕ್ಸರ್​ ಸಹಿತ 85 ರನ್​ಗಳಿಸಿ ಪ್ಯಾಟ್​ ಕಮ್ಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು. ಇವರ ಬೆನ್ನಲ್ಲೇ ಮತ್ತೊಬ್ಬ ಆರಂಭಿಕ ಬ್ಯಾಟ್ಸ್​ಮನ್ ​ಬೈರ್ಸ್ಟೋವ್​ ಕೂಡ 34 ರನ್​ಗಳಿಸಿ ಸ್ಟಾರ್ಕ್​ ಓವರ್​ನಲ್ಲಿ ಕ್ಲೀನ್​ ಬೌಲ್ಡ್​ ಆದರು.

ನಂತರ ಒಂದಾದ ನಾಯಕ ಮೊರ್ಗನ್​ ಹಾಗೂ ಜೊ ರೂಟ್​ ಮುರಿಯದ 3ನೇ ವಿಕೆಟ್​ ಜೊತೆಯಾಟದಲ್ಲಿ 79 ನ್​ಗಳಿಸಿ ಇಂಗ್ಲೆಂಡ್​ ತಂಡಕ್ಕೆ 8 ವಿಕೆಟ್​ಗಳ ಜಯ ತಂದಿತ್ತರು. ರೂಟ್​ 46 ಬಾಲಿನಲ್ಲಿ 8 ಬೌಂಡರಿ ಸಹಿತ 49 ಹಾಗೂ 39 ಬಾಲಿಗೆ 8 ಬೌಂಡರಿ ಸಹಿತ 45 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಈ ಜಯದೊಂದಿಗೆ ಇಂಗ್ಲೆಂಡ್​ ತಂಡ 12 ವಿಶ್ವಕಪ್​ ಇತಿಹಾಸದಲ್ಲಿ 4ನೇ ಬಾರಿಗೆ ಫೈನಲ್​ಗೇರಿತು.

ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ್ದ ಆಸ್ಟ್ರೇಲಿಯಾ ಕ್ರಿಸ್​ ವೋಕ್ಸ್​(3), ಜೋಫ್ರಾ ಆರ್ಚರ್​(2), ರಶೀದ್​(3) ಮಾರಕ ಬೌಲಿಂಗ್​ ದಾಳಿಗೆ ಸಿಲುಕಿ 233 ರನ್​ಗಳಿಗೆ ಆಲೌಟ್​ ಆಗಿತ್ತು. ಆಸೀಸ್​ ಮಾಜಿ ನಾಯಕ ಸ್ಮಿತ್​ 85 ರನ್​ಗಳಿಸಿ ತಂಡವನ್ನುಅಲ್ಪಮೊತ್ತಕ್ಕೆ ಕುಸಿಯದಂತೆ ತಡೆದು 200ರ ಗಡಿದಾಟುವಂತೆ ಮಾಡಿದ್ದರು.

Intro:Body:Conclusion:
Last Updated : Jul 11, 2019, 10:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.