ಲಂಡನ್: ಜುಲೈ 30 ರಿಂದ ಐರ್ಲೆಂಡ್ ವಿರುದ್ಧ ಆರಂಭವಾಗಲಿರುವ ವಿಶ್ವಕಪ್ ಸೂಪರ್ ಲೀಗ್ನ ಉದ್ಘಾಟನಾ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 14 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಕ್ರಿಸ್ ವೋಕ್ಸ್ ಹಾಗೂ ಜೋ ರೂಟ್ ವೆಸ್ಟ್ ಹಾಗೂ ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಯಲ್ಲಿರುವುದರಿಂದ ಇಸಿಬಿ ಕೆಲವು ಆಟಗಾರರನ್ನು ಮರಳಿ ತಂಡಕ್ಕೆ ಸೇರ್ಪಡೆಗೊಳಿಸಿದೆ.
ಎಂದಿನಂತೆ ಇಯೋನ್ ಮಾರ್ಗನ್ ತಂಡವನ್ನು ಮುನ್ನಡೆಸಲಿದ್ದಾರೆ. ಬಟ್ಲರ್ ಅನುಪಸ್ಥಿತಿಯಲ್ಲಿ ಉಪನಾಯಕತ್ವವನ್ನು ಮೊಯಿನ್ ಅಲಿ ಪಡೆದಿದ್ದಾರೆ. ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ಜಾನಿ ಬೈರ್ಸ್ಟೋವ್, ಜೇಮ್ಸ್ ವಿನ್ಸ್ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
-
England have named a 14-man squad for their ODI series against Ireland 👇 pic.twitter.com/Z67GkYgLCO
— ICC (@ICC) July 27, 2020 " class="align-text-top noRightClick twitterSection" data="
">England have named a 14-man squad for their ODI series against Ireland 👇 pic.twitter.com/Z67GkYgLCO
— ICC (@ICC) July 27, 2020England have named a 14-man squad for their ODI series against Ireland 👇 pic.twitter.com/Z67GkYgLCO
— ICC (@ICC) July 27, 2020
ಸ್ಯಾಮ್ ಬಿಲ್ಲಿಂಗ್ಸ್ ಎರಡು ವರ್ಷದ ಬಳಿಕ ಏಕದಿನ ತಂಡಕ್ಕೆ ಮರಳಿದರೆ, ವೇಗಿ ರೀಸ್ ಟಾಪ್ಲೀ 4 ವರ್ಷಗಳ ಬಳಿಕ ಇಂಗ್ಲೆಂಡ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ರಿಸರ್ವ್ ಆಟಗಾರರಾಗಿ ಇನ್ನೂ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡದ ರಿಚರ್ಡ್ ಗ್ಲೀಸನ್, ಲೆವಿಸ್ ಗ್ರೆಗೊರಿ ಹಾಗೂ ಲೈಮ್ ಲಿವಿಂಗ್ಸ್ಟೋನ್ ಆಯ್ಕೆಯಾಗಿದ್ದಾರೆ.
ಇಂಗ್ಲೆಂಡ್ ತಂಡ ಐರ್ಲೆಂಡ್ ವಿರುದ್ಧ ಜುಲೈ 30, ಆಗಸ್ಟ್ 1 ಮತ್ತು ಆಗಸ್ಟ್ 4 ರಂದು 3 ಏಕದಿನ ಪಂದ್ಯಗಳನ್ನಾಡಲಿದೆ.
ಇಂಗ್ಲೆಂಡ್ ತಂಡ
ಇಯೊನ್ ಮೋರ್ಗಾನ್ ( ಕ್ಯಾಪ್ಟನ್), ಮೊಯಿನ್ ಅಲಿ , ಜಾನಿ ಬೈರ್‌ಸ್ಟೋವ್ , ಟಾಮ್ ಬ್ಯಾಂಟನ್ , ಸ್ಯಾಮ್ ಬಿಲ್ಲಿಂಗ್ಸ್ , ಟಾಮ್ ಕುರ್ರನ್ , ಲಿಯಾಮ್ ಡಾಸನ್ , ಜೋ ಡೆನ್ಲಿ, ಸಾಕಿಬ್ ಮಹಮೂದ್, ಆದಿಲ್ ರಶೀದ್, ಜೇಸನ್ ರಾಯ್, ರೀಸ್ ಟೋಪ್ಲೆ, ಜೇಮ್ಸ್ ವಿನ್ಸ್ , ಡೇವಿಡ್ ವಿಲ್ಲಿ.
ರಿಸರ್ವ್ ಆಟಗಾರರು: ರಿಚರ್ಡ್ ಗ್ಲೀಸನ್, ಲೆವಿಸ್ ಗ್ರೆಗೊರಿ ಹಾಗೂ ಲೈಮ್ ಲಿವಿಂಗ್ಸ್ಟೋನ್