ETV Bharat / sports

ಇಂಗ್ಲೆಂಡ್‌-ಪಾಕ್‌ ಫಸ್ಟ್‌ ಟೆಸ್ಟ್: ಪ್ರವಾಸಿ ತಂಡದ ವಿರುದ್ಧ ಆತಿಥೇಯರಿಗೆ ಗೆಲುವಿನ ತವಕ

ಬುಧವಾರದಿಂದ ಇಂಗ್ಲೆಂಡ್​ ಮತ್ತು ವಿಂಡೀಸ್‌​ ವಿರುದ್ಧ 3 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಮ್ಯಾಚ್‌ ಮ್ಯಾಂಚೆಸ್ಟರ್​ನಲ್ಲಿ ಆರಂಭವಾಗಲಿದೆ.

ಇಂಗ್ಲೆಂಡ್​ -ಪಾಕಿಸ್ತಾನ ಟೆಸ್ಟ್​
ಇಂಗ್ಲೆಂಡ್​ -ಪಾಕಿಸ್ತಾನ ಟೆಸ್ಟ್​
author img

By

Published : Aug 4, 2020, 7:50 PM IST

Updated : Aug 4, 2020, 7:57 PM IST

ಮ್ಯಾಂಚೆಸ್ಟರ್ ​: ವೆಸ್ಟ್​ ಇಂಡೀಸ್ ವಿರುದ್ಧ ಟೆಸ್ಟ್​ ಸರಣಿ ಗೆದ್ದಿರುವ ಆತ್ಮವಿಶ್ವಾಸದಲ್ಲಿರುವ ಇಂಗ್ಲೆಂಡ್​ ತಂಡ ಯುವ ಪಾಕಿಸ್ತಾನ ತಂಡದ ವಿರುದ್ಧವೂ ತಮ್ಮ ಸ್ಥಿರ ಪ್ರದರ್ಶನ ನೀಡಲು ಸಜ್ಜಾಗಿದೆ. ಬುಧವಾರದಿಂದ ಉಭಯ ತಂಡಗಳ ಮಧ್ಯೆ​ ಮೂರು ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಪಂದ್ಯ ಮ್ಯಾಂಚೆಸ್ಟರ್​ನಲ್ಲಿ ಶುರುವಾಗಲಿದೆ.

ಪ್ರವಾಸಿ ಪಾಕಿಸ್ತಾನ ತಂಡ ಕೊರೊನಾದಿಂದ ಉಂಟಾಗಿದ್ದ ಸುದೀರ್ಘ ವಿಶ್ರಾಂತಿಯ ಬಳಿಕ ಮೊದಲ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುತ್ತಿದೆ. ಆದರೆ, ಆತಿಥೇಯ ಇಂಗ್ಲೆಂಡ್​ ಈಗಾಗಲೇ ಕೆರಿಬಿಯನ್ನರ​ ವಿರುದ್ಧ 3 ಪಂದ್ಯಗಳ ಸರಣಿಯನ್ನು 2-1ರಲ್ಲಿ ಗೆದ್ದು ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ. ಈ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಪಾಯಿಂಟ್​ ಟೇಬಲ್​ನಲ್ಲಿ 3ನೇ ಸ್ಥಾನಕ್ಕೆ ಎಂಟ್ರಿ ಕೊಟ್ಟಿದೆ. ಈ ಸರಣಿ ಗೆದ್ದರೆ ಆಸ್ಟ್ರೇಲಿಯಾವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರುವ ಸಾಧ್ಯತೆಯಿದೆ. ಪಾಕಿಸ್ತಾನ ತಂಡಕ್ಕೂ ನ್ಯೂಜಿಲ್ಯಾಂಡ್​ ಹಿಂದಿಕ್ಕಿ 4ನೇ ಸ್ಥಾನಕ್ಕೇರುವ ಅವಕಾಶವಿದೆ.

ಇಂಗ್ಲೆಂಡ್​ ತಂಡ
ಇಂಗ್ಲೆಂಡ್​ ತಂಡ

ಈ ಸರಣಿಯಲ್ಲಿ ಇಂಗ್ಲೆಂಡ್​ ವಿಸ್ಡನ್​ ಟ್ರೋಫಿ ಗೆದ್ದ ತಂಡವನ್ನೇ ಕಣಕ್ಕಿಳಿಸುತ್ತಿದೆ. ಮೊದಲ ಪಂದ್ಯದಲ್ಲಿ ಆಂಗ್ಲರ ಬೌಲಿಂಗ್​ ಕಾಂಬಿನೇಷನ್​ ಹೇಗಿರಲಿದೆ ಎಂಬುದು ಕುತೂಹಲಕಾರಿ ವಿಚಾರ. ಇಂಗ್ಲೆಂಡ್ ಟೀಂನ ಸೂಪರ್​ ಜೋಡಿ ಆ್ಯಂಡರ್ಸನ್​-ಬ್ರಾಡ್​ ಕಳೆದ ಸರಣಿಯಲ್ಲಿ ಒಮ್ಮೆಯೂ ಆಡಿರಲಿಲ್ಲ. ಈ ಸರಣಿಯಲ್ಲಾದರೂ ಒಂದಾಗಲಿದ್ದಾರಾ ಅನ್ನೋದನ್ನು ಕಾದು ನೋಡಬೇಕಿದೆ.

ಇಂಗ್ಲೆಂಡ್​ ಪಾಕಿಸ್ತಾನ ತಂಡ
ಇಂಗ್ಲೆಂಡ್​ -ಪಾಕಿಸ್ತಾನ ಟೆಸ್ಟ್​

ಪ್ರವಾಸಿ ತಂಡ ಆಂಗ್ಲರ ನಾಡಿನಲ್ಲಿ ಹೆಚ್ಚು ಅಭ್ಯಾಸ ಪಂದ್ಯಗಳನ್ನಾಡದಿದ್ದರೂ ಒಂದು ತಿಂಗಳ ಮುಂಚೆಯೇ ಆಗಮಿಸಿರುವುದರಿಂದ ಅಲ್ಲಿನ ವಾತಾವರಣಕ್ಕೆ ಒಗ್ಗಿಕೊಂಡಿದ್ದಾರೆ ಎಂದು ಕೋಚ್​ ಮಿಸ್ಬಾ ಉಲ್​ ಹಕ್​ ಹೇಳಿದ್ದಾರೆ.

ಸುದೀರ್ಘ ವಿರಾಮದ ಬಳಿಕ ಕ್ರಿಕೆಟ್​ಗೆ ಮರಳುತ್ತಿರುವಾಗ ಸ್ವಲ್ಪಮಟ್ಟಿನ ಒತ್ತಡ ಇದ್ದೇ ಇರುತ್ತದೆ. ಆದರೆ, ನಮ್ಮ ಆಟಗಾರರು ಮೈದಾನಕ್ಕೆ ಕಾಲಿಡಲು ಕಾಯುತ್ತಿದ್ದಾರೆ. ಎಲ್ಲರೂ ತಾಜಾ ಹಾಗೂ ಉತ್ಸಾಹದಿಂದಿದ್ದಾರೆ ಅನ್ನೋದು ಅವರ ಮಾತು.

ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ

ತಂಡದಲ್ಲಿ ಯುವ ವೇಗಿಗಳಾದ ಶಾಹೀನ್​ ಅಫ್ರಿದಿ, ನಸೀಮ್​ ಶಾ ಅವರಿಂದ ಬೌಲರ್‌​ ಸ್ನೇಹಿ ಪಿಚ್​ನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆ ಇದೆ. ಮೊದಲ ಪಂದ್ಯದಲ್ಲಿ ಇಬ್ಬರು ಸ್ಪಿನ್​ ಬೌಲರ್​ಗಳೊಂದಿಗೆ ಆಡಲು ಪಾಕಿಸ್ತಾನ ಬಯಸಿದೆ.

ಪಾಕ್ ತಂಡ ಕಳೆದ ಎರಡು ಪ್ರವಾಸದಲ್ಲೂ ಇಂಗ್ಲೆಂಡ್​ ಎದುರು ಸರಣಿ ಸೋತಿಲ್ಲ. 2016ರ ಪ್ರವಾಸದಲ್ಲಿ 4 ಪಂದ್ಯಗಳ ಸರಣಿಯನ್ನು 2-2ರಲ್ಲಿ ಹಾಗೂ 2018ರ ಪ್ರವಾಸದಲ್ಲಿ 1-1ರಲ್ಲಿ ಸರಣಿ ಸಮಬಲ ಸಾಧಿಸಿದೆ. ಈ ಬಾರಿಯೂ ಎರಡು ತಂಡಗಳಿಂದ ಉತ್ತಮ ಪೈಪೋಟಿ ಕಂಡುಬರುವ ಸಾಧ್ಯತೆ ಇದೆ.

ಪಂದ್ಯ ನಡೆಯುವ ಸ್ಥಳ: ಓಲ್ಡ್​ ಟ್ರಾಫೋರ್ಡ್,​​​ ಮ್ಯಾಂಚೆಸ್ಟರ್​

ಸಮಯ: 3:30 (ಭಾರತೀಯ ಕಾಲಮಾನ)

ಇಂಗ್ಲೆಂಡ್ ತಂಡ :

ಜೋ ರೂಟ್ (ಸಿ), ಜೇಮ್ಸ್ ಆಂಡರ್ಸನ್, ಜೋಫ್ರಾ ಆರ್ಚರ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಒಲ್ಲಿ ಪೋಪ್, ಡಾಮ್ ಸಿಬ್ಲಿ, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಜೇಮ್ಸ್ ಬ್ರೇಸಿ, ಬೆನ್ ಫೋಕ್ಸ್, ಜ್ಯಾಕ್ ಲೀಚ್, ಡಾನ್ ಲಾರೆನ್ಸ್

ಪಾಕಿಸ್ತಾನ ತಂಡ :

ಅಜರ್ ಅಲಿ (ಸಿ), ಬಾಬರ್ ಅಜಮ್, ಅಬಿದ್ ಅಲಿ, ಅಸಾದ್ ಶಫೀಕ್, ಫಹೀಮ್ ಅಶ್ರಫ್, ಫವಾದ್ ಆಲಮ್, ಇಮಾಮ್ ಉಲ್ ಹಕ್, ಇಮ್ರಾನ್ ಖಾನ್, ಕಾಶಿಫ್ ಭಟ್ಟಿ, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸರ್ಫರಾಜ್ ಅಹ್ಮದ್, ಶದಾಬ್ ಖಾನ್, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಸೊಹೈಲ್ ಖಾನ್, ಉಸ್ಮಾನ್ ಶಿನ್ವಾರಿ, ವಹಾಬ್ ರಿಯಾಜ್, ಯಾಸಿರ್ ಶಾ.

Last Updated : Aug 4, 2020, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.