ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್ರೌಂಡರ್ ಎಲ್ಟನ್ ಚಿಗುಂಬುರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲಿದ್ದಾರೆ.
ಚಿಗುಂಬರ ಜಿಂಬಾಬ್ವೆ ಪರ 14 ಟೆಸ್ಟ್, 213 ಏಕದಿನ ಹಾಗೂ 54 ಟಿ20 ಪಂದ್ಯಗಳನ್ನಾಡಿದ್ದಾರೆ. ಅವರು ಕ್ರಮವಾಗಿ 569, 4340 ಹಾಗೂ 844 ರನ್ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 2 ಶತಕ ಕೂಡ ದಾಖಲಿಸಿದ್ದಾರೆ. ಬೌಲಿಂಗ್ನಲ್ಲಿ ಟೆಸ್ಟ್ನಲ್ಲಿ 21, ಏಕದಿನ ಕ್ರಿಕೆಟ್ನಲ್ಲಿ 101 ಹಾಗೂ ಟಿ20ಯಲ್ಲಿ 14 ವಿಕೆಟ್ ಪಡೆದಿದ್ದಾರೆ.
-
JUST IN: Zimbabwe stalwart Elton Chigumbura will retire from international cricket at the end of the ongoing #PAKvZIM T20I series.
— ICC (@ICC) November 7, 2020 " class="align-text-top noRightClick twitterSection" data="
Over a 16-year career he has made 281 appearances for Zimbabwe before today, scoring 5761 runs and taking 138 wickets 👏 pic.twitter.com/7AYQ8XAD5P
">JUST IN: Zimbabwe stalwart Elton Chigumbura will retire from international cricket at the end of the ongoing #PAKvZIM T20I series.
— ICC (@ICC) November 7, 2020
Over a 16-year career he has made 281 appearances for Zimbabwe before today, scoring 5761 runs and taking 138 wickets 👏 pic.twitter.com/7AYQ8XAD5PJUST IN: Zimbabwe stalwart Elton Chigumbura will retire from international cricket at the end of the ongoing #PAKvZIM T20I series.
— ICC (@ICC) November 7, 2020
Over a 16-year career he has made 281 appearances for Zimbabwe before today, scoring 5761 runs and taking 138 wickets 👏 pic.twitter.com/7AYQ8XAD5P
ಚಿಗುಂಬುರ 2004ರಲ್ಲಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಇದೀಗ ತಮ್ಮ 16 ವರ್ಷಗಳ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸುತ್ತಿದ್ದು, ಪಾಕ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವೇ ಅವರ ಪಾಲಿನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.
ಚಿಗುಂಬುರ ಜಿಂಬಾಬ್ವೆ ತಂಡದ ಪರ 80 ಪಂದ್ಯಗಳಲ್ಲಿ ನಾಯಕರಾಗಿದ್ದಾರೆ. ಅಲ್ಲದೆ ಗ್ರ್ಯಾಂಡ್ ಫ್ಲವರ್ ನಂತರ ಏಕದಿನಕ್ರಿಕೆಟ್ನಲ್ಲಿ 4000 ರನ್ ಹಾಗೂ 100 ವಿಕೆಟ್ ಪಡೆದ ಏಕಮಾತ್ರ ಜಿಂಬಾಬ್ವೆ ಬ್ಯಾಟ್ಸ್ಮನ್ ಎಂಬ ದಾಖಲೆ ಹೊಂದಿದ್ದಾರೆ.