ETV Bharat / sports

ಕೊರೊನಾ: ಗುಣಮುಖರಾದರೂ ಶೇ 100 ರಷ್ಟು ಫಿಟ್​ ಆಗದ ಜುವೆಂಟರ್​ ಸ್ಟಾರ್​ ಡೈಬಾಲಾ

author img

By

Published : Jun 8, 2020, 12:56 PM IST

ಡೈಬಾಲಾ ಮತ್ತು ಅವರ ಸಂಗಾತಿ ಒರಿಯಾನಾ ಸಬಾಟಿನಿ ಅವರಿಗೆ ಕೊರೊನಾ ಪರೀಕ್ಷೆಯಲ್ಲಿ ಧನಾತ್ಮಕ ವರದಿ ದೃಢಪಟ್ಟಿತ್ತು. ನಂತರ ಒಂದು ತಿಂಗಳ ಕಾಲ ಐಸೊಲೇಷನ್​ನಲ್ಲಿದ್ದ ಅವರಿಗೆ ಮೇ 6 ರಂದು ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್​ ವರದಿ ಬಂದಿತ್ತು.

Dybala 'still not quite at 100 per cent' after overcoming coronavirus
ಪಾಲೋ ಡೈಬಾಲಾ

ಲೀಡ್ಸ್​: ಜುವೆಂಟಸ್​ನ ಅರ್ಜೆಂಟೈನಾದ ಸ್ಟ್ರೈಕರ್​ ಪಾಲೋ ಡೈಬಾಲಾ ಕೊರೊನಾ ವೈರಸ್​ ಸೋಂಕಿನಿಂದ ಗುಣಮುಖರಾಗಿ ನೆಗಿಟಿವ್ ವರದಿ ಬಂದು ತಿಂಗಳಾದರೂ ಸಂಪೂರ್ಣ ಫಿಟ್​ ಆಗಿಲ್ಲ ಎಂದು ಭಾನುವಾರ ಬಹಿರಂಗಪಡಿಸಿದ್ದಾರೆ.

ಡೈಬಾಲಾ ಮತ್ತು ಅವರ ಸಂಗಾತಿ ಒರಿಯಾನಾ ಸಬಾಟಿನಿ ಅವರಿಗೆ ಕೊರೊನಾ ಪರೀಕ್ಷೆಯಲ್ಲಿ ಧನಾತ್ಮಕ ವರದಿ ದೃಢಪಟ್ಟಿತ್ತು. ನಂತರ ಒಂದು ತಿಂಗಳ ಕಾಲ ಐಸೊಲೇಷನ್​ನಲ್ಲಿದ್ದ ಅವರಿಗೆ ಮೇ 6 ರಂದು ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್​ ವರದಿ ಬಂದಿತ್ತು.

ನಾನು ಕೊರೊನಾ ವೈರಸ್​ ಸೋಂಕಿಗೆ ಒಳಪಟ್ಟಿದ್ದೆ, ಈಗ ನನ್ನ ಆರೋಗ್ಯ ಉತ್ತಮವಾಗಿದೆ. ಆದರೆ, ನಾನು ಶೇ 100 ರಷ್ಟು ಫಿಟ್​ ಆಗಿಲ್ಲ. ನಾವು ಈಗಾಗಲೇ ತರಬೇತಿ ಆರಂಭಿಸಿದ್ದೇವೆ. ಫುಟ್ಬಾಲ್​​​​ ​ ಮರಳಿ ಬಂದಿದೆ. ಆದಷ್ಟು ಬೇಗ ನಾವು ಹೆಚ್ಚು ಇಷ್ಟಪಡುವುದನ್ನು ಮಾಡಲು ನಮಗೆ ಸಾಧ್ಯವಾಗುತ್ತದೆ ಎಂದು ಇನ್​​ಸ್ಟಾಗ್ರಾಂ​ ಲೈವ್​ನಲ್ಲಿ ಹೇಳಿಕೊಂಡಿದ್ದಾರೆ.

ಫುಟ್ಬಾಲ್​​​ ಆರಂಭವಾದ ಮೇಲೆ ನಾವು ಸಾಕಷ್ಟು ಆನಂದಿಸಬಹುದು ಮತ್ತು ಮನರಂಜಿಸಬಹುದು ಎಂದು ನಾನು ಭಾವಿಸುತ್ತೇವೆ. ನಾಬು ಸತತ ಅನೇಕ ಫುಟ್ಬಾಲ್​ ಪಂದ್ಯಗಳನ್ನು ಹೊಂದಿರುವುದರಿಂದ ತುಂಬಾ ಉಪಯೋಗವಾಗಲಿದೆ. ಮತ್ತು ಈ ಅದ್ಭುತ ಕ್ರೀಡೆಯನ್ನು ಇಷ್ಟಪಡುವ ನಮ್ಮಂತಹ ಜನರಿಗೆ ಪ್ರತಿದಿನ ಬೇರೆ ಆಟವನ್ನು ವೀಕ್ಷಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.