ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಿನ ತಿಂಗಳು 39ನೇ ವಸಂತಕ್ಕೆ ಕಾಲಿಡಲಿದ್ದಾರೆ.
ತಮ್ಮ ನಾಯಕ ಹಾಗೂ ನೆಚ್ಚಿನ ಸ್ನೇಹಿತನಾಗಿರುವ ಧೋನಿ ಹುಟ್ಟುಹಬ್ಬಕ್ಕೆ ಅವರ ಹೆಸರಿನಲ್ಲೇ ವಿಂಡೀಸ್ ತಂಡದ ಮಾಜಿ ನಾಯಕ ಡ್ವೇನ್ ಬ್ರಾವೋ 'ನಂಬರ್ 7' ಎಂಬ ಸಾಂಗ್ವೊಂದನ್ನು ಸಿದ್ಧಪಡಿಸಿದ್ದು, ಅದರ ಟೀಸರ್ಅನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ರಿಲೀಸ್ ಮಾಡಿದ್ದಾರೆ.
- " class="align-text-top noRightClick twitterSection" data="
">
ಕಳೆದ 10 ವರ್ಷಗಳಿಂದ ಸಿಎಸ್‌ಕೆ ಭಾಗವಾಗಿರುವ ಡ್ವೇನ್ ಬ್ರಾವೋ ಸ್ವತಃ ಡ್ಯಾನ್ಸರ್ ಆಗಿದ್ದು, ಈ ಹಿಂದೆ ಡಿಜೆ.. ಬ್ರಾವೋ... ಚಾಂಪಿಯನ್ ಎಂಬ ಪಾಪ್ ಸಾಂಗ್ ಮಾಡಿದ್ದರು. ಅದು ಯೂಟ್ಯೂಬ್ನಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಧೋನಿ ಜನ್ಮದಿನಕ್ಕೆ ಉಡುಗೊರೆಯಾಗಿ ಮತ್ತೊಂದು ಅದ್ಬುತ ಸಾಂಗ್ ಸಿದ್ಧಪಡಿಸಿದ್ದಾರೆ. ಸದ್ಯಕ್ಕೆ ಸಾಂಗ್ ಟೀಸರ್ಅನ್ನು ಮಾತ್ರ ನೀಡಿರುವ ಬ್ರಾವೋ ಪೂರ್ಣ ಸಾಂಗ್ಗಾಗಿ ಜುಲೈ 7ರ ತನಕ ಕಾಯುವಂತೆ ತಿಳಿಸಿದ್ದಾರೆ.
ಡ್ವೇನ್ ಬ್ರಾವೋ 2011 ರಿಂದ ಸಿಎಸ್‌ಕೆ ತಂಡದಲ್ಲಿದ್ದಾರೆ. ಒಟ್ಟು 104 ಪಂದ್ಯಗಳನ್ನು ಆಡಿದ್ದು, 121 ವಿಕೆಟ್‌ಗಳನ್ನು ಪಡೆದಿದ್ದಾರೆ. 2013-2015 ನೇ ಆವೃತ್ತಿಯಲ್ಲಿ ಎರಡು ಬಾರಿ ಪರ್ಪಲ್ ಕ್ಯಾಪ್ ಪಡೆದಿದ್ದರು. ಸಿಎಸ್‌ಕೆ ಧೋನಿ ನಾಯಕತ್ವದಲ್ಲಿ 2010, 2011 ಮತ್ತು 2018 ರಲ್ಲಿ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿತ್ತು.