ಜೋಹಾನ್ಸ್ಬರ್ಗ್(ದಕ್ಷಿಣ ಆಫ್ರಿಕಾ): ಇಲ್ಲಿ ನಡೆದ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಹರಿಣಗಳ ಪಡೆ 8 ವಿಕೆಟ್ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಆರಂಭಿಕ ಆಘಾತ ಎದುರಿಸಿತು. 23 ರನ್ ಗಳಿಸುವಷ್ಟರಲ್ಲಿ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಜೊತೆಯಾದ ಕುಶಾಲ್ ಪೆರೆರಾ ಮತ್ತು ಫೆರ್ನಾಂಡೋ ತಂಡಕ್ಕೆ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ಕುಶಾಲ್ ಮೆಂಡಿಸ್ ಅರ್ಧಶತಕ ಸಿಡಿಸಿ ಉತ್ತಮ ಕಾಣಿಕೆ ನೀಡಿದ್ರು.
ಅಂತಿಮವಾಗಿ ಲಂಕಾ ತಂಡ 47 ಓವರ್ಗಳಿಗೆ 231 ರನ್ ಗಳಿಸಿ ಆಲೌಟ್ ಆಯ್ತು. ಲಂಕಾ ಪರ ಕುಶಾಲ್ ಮೆಂಡಿಸ್ 60, ಫೆರ್ನಾಂಡೋ 49, ಮತ್ತು ಧನಂಜಯ ಡಿ ಸಿಲ್ವಾ 39 ರನ್ ಗಳಿಸಿದ್ರು. ದ.ಆಫ್ರಿಕಾ ಪರ ಇಮ್ರಾನ್ ತಾಹಿರ್, ಲುಂಗಿ ಎನ್‌ಗಿಡಿ ತಲಾ 3 ವಿಕೆಟ್ ಪಡೆದು ಮಿಂಚಿದ್ರು.
232 ರನ್ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವನ್ನ ಕಟ್ಟಿ ಹಾಕುವಲ್ಲಿ ಲಂಕಾ ಬೌಲರ್ಗಳು ವಿಫಲರಾದರು. ಭರ್ಜರಿಯಾಗಿ ಬ್ಯಾಟ್ ಬೀಸಿದ ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ಡು ಪ್ಲೆಸಿಸ್ ಉತ್ತಮವಾಗಿ ರನ್ ಕಲೆಹಾಕಿದ್ರು. ಲಂಕಾ ಬೌಲರ್ಗಳನ್ನ ದಂಡಿಸಿದ ಡು ಪ್ಲೆಸಿಸ್ ಭರ್ಜರಿ ಶತಕ ಭಾರಿಸಿದ್ರು
ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 38.5 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 232 ರನ್ ಗಳಿಸಿ ಗೆಲುವಿನ ನಗೆ ಬೀರಿತು. ದ.ಆಫ್ರಿಕಾ ಪರ ಡಿ ಕಾಕ್ 81 ರನ್ ಗಳಿಸಿದ್ರೆ, ಡು ಪ್ಲೆಸಿಸ್ 112 ರನ್ ಗಳಿಸಿದ್ರು. ಈ ಮೂಲಕ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಹರಿಣಗಳ ಪಡೆ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.