ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಫಾಪ್ ಡುಪ್ಲೆಸಿಸ್ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಬ್ಯಾಟ್ ಹಾಗೂ ಜರ್ಸಿ ದೇಣಿಗೆ ನೀಡಿದ್ದಾರೆ.
ದುರ್ಬಲ ಮಕ್ಕಳ ಸಂಕಷ್ಟಕ್ಕೆ ಸಹಾಯ ಮಾಡುವ ಉದ್ದೇಶದಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕ್ರಿಕೆಟ್ ಪಂದ್ಯಗಳಲ್ಲಿ ತಾವು ಬಳಕೆ ಮಾಡ್ತಿದ್ದ ಬ್ಯಾಟ್ ಹಾಗೂ ಏಕದಿನ ಪಂದ್ಯವೊಂದರಲ್ಲಿ ಈ ಹಿಂದೆ ಹಾಕಿಕೊಂಡಿದ್ದ ಗುಲಾಬಿ ಬಣ್ಣದ ಜೆರ್ಸಿ ದೇಣಿಗೆ ನೀಡಿದ್ದಾರೆ.
ಪ್ರಪಂಚದಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ಕಷ್ಟದಲ್ಲಿರುವ ಮಕ್ಕಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿರುವ ಅವರು, ಎಬಿ ಡಿವಿಲಿಯರ್ಸ್ ಹಾಕಿದ್ದ ಸವಾಲು ಸ್ವೀಕರಿಸಿದ್ದೇನೆ ಎಂದಿದ್ದಾರೆ.