ಮುಂಬೈ: ವಿವೋದಿಂದ ತೆರವಾಗಿದ್ದ ಐಪಿಎಲ್ ಟೈಟಲ್ ಪ್ರಾಯೋಕತ್ವದ ಬಿಡ್ನಲ್ಲಿ ಡ್ರೀಮ್ ಇಲೆವೆನ್ ಜಯ ಸಾಧಿಸಿದೆ. 2020ರ ಐಪಿಎಲ್ ಆವೃತ್ತಿಯ ಟೈಟಲ್ ಪ್ರಾಯೋಜಕತ್ವವನ್ನು ಡ್ರೀಮ್ ಇಲೆವೆನ್ 222 ಕೋಟಿ ರೂ. ನೀಡಿ ಖರೀದಿಸಿದೆ.
-
Dream11 wins IPL 2020 title sponsorship for Rs 222 crores: IPL Chairman Brijesh Patel
— ANI (@ANI) August 18, 2020 " class="align-text-top noRightClick twitterSection" data="
">Dream11 wins IPL 2020 title sponsorship for Rs 222 crores: IPL Chairman Brijesh Patel
— ANI (@ANI) August 18, 2020Dream11 wins IPL 2020 title sponsorship for Rs 222 crores: IPL Chairman Brijesh Patel
— ANI (@ANI) August 18, 2020
ಕಳೆದ 2 ವಾರಗಳಿಂದ ವಿವೋದಿಂದ ತೆರವಾಗಿದ್ದ ಟೈಟಲ್ ಪ್ರಾಯೋಜಕತ್ವಕ್ಕಾಗಿ ಅಮೇಜಾನ್, ಪತಂಜಲಿ, ಟಾಟಾ, ಜಿಯೋ, ಅನ್ ಅಕಾಡೆಮಿ ಹಾಗೂ ಬೈಜುಸ್ನಿಂತಹ ದೊಡ್ಡ ಸಂಸ್ಥೆಗಳು ಐಪಿಎಲ್ ಮೇಲೆ ಕಣ್ಣಿಟ್ಟಿದ್ದವು. ಆದರೆ ಡ್ರೀಮ್ ಇಲೆವೆನ್ ಅವೆಲ್ಲಕ್ಕೂ ಸಡ್ಡು ಹೊಡೆದು ಶ್ರೀಮಂತ ಕ್ರಿಕೆಟ್ ಲೀಗ್ ಪ್ರಾಯೋಜಕತ್ವ ಪಡೆದುಕೊಂಡಿದೆ.
2020ರ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾಯೋಜಕತ್ವವನ್ನು ಡ್ರೀಮ್ ಇಲೆವೆನ್ 222 ಕೋಟಿ ರೂ.ಗಳಿಗೆ ಖರೀದಿಸಿದೆ ಎಂದು ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.
ವಿವೋ ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಟೈಟಲ್ ಪ್ರಾಯೋಜಕತ್ವಕ್ಕಾಗಿ 440 ಕೋಟಿ ರೂ. ನೀಡುತ್ತಿತ್ತು. ಆದರೆ ಗಡಿ ಘರ್ಷಣೆಯ ನಂತರ 2020ರ ಆವೃತ್ತಿಯಿಂದ ಹಿಂದೆ ಸರಿದಿದೆ. ಡ್ರೀಮ್ ಇಲೆವೆನ್ ಪ್ರಯೋಜಕತ್ವದ ಅವಧಿ ಆಗಸ್ಟ್ 18ರಿಂದ ಡಿಸೆಂಬರ್ 31ರವರೆಗೆ ಇರಲಿದೆ ಎಂದು ಬಿಸಿಸಿಐ ಹೇಳಿಕೆ ನೀಡಿದೆ.