ETV Bharat / sports

ನಾಟ್​ವೆಸ್ಟ್​ ಸರಣಿ ಗೆಲ್ಲಲು ದ್ರಾವಿಡ್​ ಸರ್​ ಕಾರಣ ಎಂದು ಕೈಮುಗಿದು ಧನ್ಯವಾದ ಹೇಳಿದ ಕೈಫ್​!

ಭಾರತದ ಕ್ರಿಕೆಟ್​ ಇತಿಹಾಸದಲ್ಲಿ ವಿಶ್ವಕಪ್​ ಗೆದ್ದಷ್ಟೇ ಖುಷಿ ಕೊಡುವ ವಿಚಾರ ಎಂದರೆ ಗಂಗೂಲಿ ನೇತೃತ್ವದಲ್ಲಿ ಭಾರತ ತಂಡ 2002ರಲ್ಲಿ ನಾಟ್​ವೆಸ್ಟ್​ ಸರಣಿ ಗೆದ್ದಿದ್ದು. ಈ ಪಂದ್ಯದಲ್ಲಿ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ್ದ ಮೊಹಮ್ಮದ್​ ಕೈಫ್​ 87 ರನ್​ ರನ್​ ಸಿಡಿಸಿ ಗಂಗೂಲಿ ಶರ್ಟ್​ ಬಿಚ್ಚಿ ಸಂಭ್ರಮಿಸುವಂತೆ ಮಾಡಿದ್ದರು.

author img

By

Published : Jun 26, 2019, 7:49 PM IST

Dravid

ಲಾರ್ಡ್ಸ್​: ನಾಟ್​ವೆಸ್ಟ್​ ಸರಣಿ ಗೆಲ್ಲಲು ದ್ರಾವಿಡ್​ ಸರ್​ ಕಾರಣ, ಅವರಿಗೆ ನಾನು ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ಅಂದಿನ ಪಂದ್ಯದ ಹೀರೋ ಮೊಹಮ್ಮದ್​ ಕೈಫ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಭಾರತದ ಕ್ರಿಕೆಟ್​ ಇತಿಹಾಸದಲ್ಲಿ ವಿಶ್ವಕಪ್​ ಗೆದ್ದಷ್ಟೇ ಖುಷಿ ಕೊಡುವ ವಿಚಾರ ಎಂದರೆ ಗಂಗೂಲಿ ನೇತೃತ್ವದಲ್ಲಿ ಭಾರತ ತಂಡ 2002ರಲ್ಲಿ ನಾಟ್​ವೆಸ್ಟ್​ ಸರಣಿ ಗೆದ್ದಿದ್ದು. ಈ ಪಂದ್ಯದಲ್ಲಿ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿದ್ದ ಮೊಹಮ್ಮದ್​ ಕೈಫ್​ 87 ರನ್​ ರನ್​ ಸಿಡಿಸಿ ಗಂಗೂಲಿ ಶರ್ಟ್​ ಬಿಚ್ಚಿ ಸಂಭ್ರಮಿಸುವಂತೆ ಮಾಡಿದ್ದರು.

17 ವರ್ಷಗಳ ಬಳಿಕ ದ್ರಾವಿಡ್​ ಜೊತೆ ಕ್ರಿಕೆಟ್​ ಡೈರೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೈಫ್​ ಅಂದು ಭಾರತ ತಂಡ ನಾಟ್​ವೆಸ್ಟ್​ ಸರಣಿ ಗೆಲ್ಲಲು ದ್ರಾವಿಡ್​ ಸರ್​ ಕಾರಣ, ಅವರು ವಿಕೆಟ್​ ಕೀಪಿಂಗ್​ ಜವಾಬ್ದಾರಿ ಹೊರಲು ಒಪ್ಪಿಕೊಂಡಿದ್ದರಿಂದ ನನಗೆ ಆಡುವ 11ರ ಬಳಗದಲ್ಲಿ ಅವಕಾಶ ಸಿಕ್ಕಿತ್ತು. ದ್ರಾವಿಡ್​ ಕೀಪಿಂಗ್​ ಜವಾಬ್ದಾರಿ ಒಪ್ಪಿಕೊಳ್ಳದಿದ್ದರೆ ನನ್ನ ಜಾಗದಲ್ಲಿ ಯಾರಾದರೂ ಆಲ್​ರೌಂಡರ್​ ಆಡಬೇಕಿತ್ತು. ನಾಟ್​ವೆಸ್ಟ್​ನಂತಹ ಸರಣಿಯಲ್ಲಿ ನನಗೆ ಅವಕಾಶ ನೀಡಿದ್ದಕ್ಕೆ ನಾನು ದ್ರಾವಿಡ್​ ಹಾಗೂ ಗಂಗೂಲಿಗೆ ಎಂದಿಗೂ ಚಿರಋಣಿಯಾಗಿರುತ್ತೇನೆ ಎಂದು ಹೇಳಿ ದ್ರಾವಿಡ್​ಗೆ ಕೈಮುಗಿದು ಧನ್ಯವಾದ ತಿಳಿಸಿದ್ದಾರೆ.

  • " class="align-text-top noRightClick twitterSection" data="">

​2002 ರಲ್ಲಿ 326 ರನ್​ಗಳ ಬೃಹತ್​ ಮೊತ್ತ ಬೆನ್ನೆತ್ತಿದ್ದ ಗಂಗೂಲಿ ಪಡೆ ಮೊದಲ ವಿಕೆಟ್​ಗೆ 106 ರನ್​ಗಳಿಸಿತ್ತು. ಗಂಗೂಲಿ 43 ಎಸೆತಗಳಲ್ಲಿ 60 ಹಾಗೂ 49 ಎಸೆತಗಳಲ್ಲಿ 45 ರನ್​ಗಳಿಸಿ ಭರ್ಜರಿ ಆರಂಭ ನೀಡಿದ್ದರು. ಆದರೆ ನಂತರ ಇಂಗ್ಲೆಂಡ್ ಬೌಲಿಂಗ್​ ದಾಳಿಗೆ ದಿಢೀರ್​ ಕುಸಿತ ಕಂಡ ಟೀಮ್​ಇಂಡಿಯಾ 146 ರನ್​ಗಳಾಗುವಷ್ಟರಲ್ಲಿ 5 ವಿಕೆಟ್​ ಕಳೆದುಕೊಂಡಿತು ಸೋಲಿನತ್ತ ಮುಖ ಮಾಡಿತ್ತು.

ಆದರೆ 7 ನೇ ವಿಕೆಟ್​ ಜೊತೆಯಾದ ಯುವ ಆಟಗಾರರಾದ ಯುವರಾಜ್​(69) ಹಾಗೂ (ಕೈಫ್​ ಔಟಾಗದೇ 87)121 ರನ್​ಗಳ ಜೊತೆಯಾಟ ನೀಡಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು.

Intro:Body:Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.