ನವದೆಹಲಿ: ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ 2-1ರಲ್ಲಿ ಟೆಸ್ಟ್ ಸರಣಿ ಗೆದ್ದ ಆತ್ಮವಿಶ್ವಾಸದಲ್ಲಿರುವ ಭಾರತ ತಂಡದ ವಿರುದ್ಧ ಮುಂದಿನ ಸರಣಿಯಲ್ಲಿ ತನ್ನ ಅತ್ಯಂತ ಬಲಿಷ್ಠ ತಂಡವನ್ನು ಕಣಕ್ಕಿಳಿಸಬೇಕೆಂದು ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಇಸಿಬಿಗೆ ಸಲಹೆ ನೀಡಿದ್ದಾರೆ.
ಟ್ವಿಟರ್ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರುವ ಪೀಟರ್ಸನ್, ಇಂಗ್ಲೆಂಡ್ ತಂಡ ಒಂದು ವೇಳೆ ತನ್ನ ಅತ್ಯುತ್ತಮ ತಂಡವನ್ನು ಕಣಕ್ಕಿಳಿಸದಿದ್ದರೆ ಅದು ಬಿಸಿಸಿಐಗೆ, ಇಂಗ್ಲೆಂಡ್ ಅಭಿಮಾನಿಗಳಿಗೆ ಮಾಡಿದ ಅಗೌರವ ಎಂದು ಹೇಳಿದ್ದಾರೆ.
-
The BEST England players will want to play as many games as possible against India, in India.
— Kevin Pietersen🦏 (@KP24) January 24, 2021 " class="align-text-top noRightClick twitterSection" data="
PICK THEM!
Then they go to IPL & earn everything they deserve. Cash is king for every sportsman. They’re a business!
They can have a break after that!
">The BEST England players will want to play as many games as possible against India, in India.
— Kevin Pietersen🦏 (@KP24) January 24, 2021
PICK THEM!
Then they go to IPL & earn everything they deserve. Cash is king for every sportsman. They’re a business!
They can have a break after that!The BEST England players will want to play as many games as possible against India, in India.
— Kevin Pietersen🦏 (@KP24) January 24, 2021
PICK THEM!
Then they go to IPL & earn everything they deserve. Cash is king for every sportsman. They’re a business!
They can have a break after that!
"ಮೊದಲ ಟೆಸ್ಟ್ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ತನ್ನ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡಿಕೊಂಡಿದೆಯೇ ಎಂಬುದು ದೊಡ್ಡ ಚರ್ಚೆಯಾಗಿದೆ. ಏಕೆಂದರೆ ಭಾರತದಲ್ಲಿ ಸರಣಿ ಗೆಲ್ಲುವುದು ಆಸ್ಟ್ರೇಲಿಯಾದಲ್ಲಿ ಸರಣಿ ಗೆದ್ದಷ್ಟೇ ಸಮನಾಗಿರುತ್ತದೆ. ಹಾಗಾಗಿ ನೀವು ಬಲಿಷ್ಠ ತಂಡದೊಂದಿಗೆ ಆಡದಿದ್ದರೆ ಅದು ಇಂಗ್ಲೆಂಡ್ ಅಭಿಮಾನಿಗಳಿಗೆ ಹಾಗೂ ಬಿಸಿಸಿಐಗೆ ಅಗೌರವ ತೋರಿದಂತೆ. ಮೊದಲ ಟೆಸ್ಟ್ನಲ್ಲಿ ಬೈರ್ಸ್ಟೋವ್ ಆಡಬೇಕಿದೆ, ಆ್ಯಂಡರ್ಸನ್ ಅಥವಾ ಬ್ರಾಡ್ ಆಡಬೇಕಾಗಿದೆ ಎಂದು ಇಂಗ್ಲೆಂಡ್ ಮಾಜಿ ನಾಯಕ ತಿಳಿಸಿದ್ದಾರೆ.
-
Big debate on whether ENG have picked their best team to play India in the 1st Test.
— Kevin Pietersen🦏 (@KP24) January 24, 2021 " class="align-text-top noRightClick twitterSection" data="
Winning IN India is as good a feeling as winning in Aus.
It’s disrespectful to ENG fans & also @BCCI to NOT play your best team.
Bairstow has to play!
Broad/Anderson have to play!
">Big debate on whether ENG have picked their best team to play India in the 1st Test.
— Kevin Pietersen🦏 (@KP24) January 24, 2021
Winning IN India is as good a feeling as winning in Aus.
It’s disrespectful to ENG fans & also @BCCI to NOT play your best team.
Bairstow has to play!
Broad/Anderson have to play!Big debate on whether ENG have picked their best team to play India in the 1st Test.
— Kevin Pietersen🦏 (@KP24) January 24, 2021
Winning IN India is as good a feeling as winning in Aus.
It’s disrespectful to ENG fans & also @BCCI to NOT play your best team.
Bairstow has to play!
Broad/Anderson have to play!
ಇದರ ಜೊತೆಗೆ ಇಂಗ್ಲೆಂಡ್ ತಂಡದ ಅತ್ಯುತ್ತಮ ಆಟಗಾರರು ಭಾರತದ ವಿರುದ್ಧ ಅವರ ನೆಲದಲ್ಲಿ ಸಾಧ್ಯವಾದಷ್ಟು ಪಂದ್ಯಗಳನ್ನು ಆಡಬೇಕು. ನಂತರ ಅವರು ಐಪಿಎಲ್ಗೆ ಹೋಗಬೇಕು. ಅವರು ಅರ್ಹತೆಗೆ ತಕ್ಕಂತೆ ಎಲ್ಲವನ್ನು ಗಳಿಸಿಕೊಳ್ಳಬೇಕು. ಎಲ್ಲಾ ಕ್ರೀಡಾಪಟುಗಳಿಗೆ ದುಡ್ಡೇ ರಾಜ. ಅದು ಅವರ ವ್ಯವಹಾರ. ಐಪಿಎಲ್ ಮುಗಿದ ನಂತರ ಬೇಕಾದರೆ ಅವರು ಬ್ರೇಕ್ ತೆಗೆದುಕೊಳ್ಳಲಿ ಎಂದಿದ್ದಾರೆ.
ಇನ್ನು ಬೈರ್ಸ್ಟೋವ್ರನ್ನು ಮೊದಲೆರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡದಿದ್ದಕ್ಕೆ ಪೀಟರ್ಸನ್ ಜೊತೆಗೆ ಮಾಜಿ ನಾಯಕ ಮೈಕಲ್ ವಾನ್ ಕೂಡ ಇಸಿಬಿಯನ್ನು ಟೀಕಿಸಿದ್ದಾರೆ. ಶ್ರೀಲಂಕಾ ವಿರುದ್ಧ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬೈರ್ಸ್ಟೋವ್ ವಿಕೆಟ್ ಉಳಿಸಿಕೊಂಡು 7 ವಿಕೆಟ್ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ಆಯ್ಕೆ ಸಮಿತಿಯನ್ನು ಟೀಕಿಸಿದ್ದಾರೆ.
ಇದನ್ನು ಓದಿ:ಪೀಟರ್ಸನ್ ಹಿಂದಿಕ್ಕಿ ಟೆಸ್ಟ್ನಲ್ಲಿ 4ನೇ ಗರಿಷ್ಠ ಸ್ಕೋರರ್ ಆದ ಜೋ ರೂಟ್