ETV Bharat / sports

ಧೋನಿ ಭಾರತ ತಂಡಕ್ಕೆ ಮರಳುವುದು ತುಂಬಾ ಕಠಿಣ: ವಿರೇಂದ್ರ ಸೆಹ್ವಾಗ್​ - ಟೀಂ ಇಂಡಿಯಾ

ಟೀಂ ಇಂಡಿಯಾದ ಸ್ಟಾರ್​ ಪ್ಲೇಯರ್​ ಮಹೇಂದ್ರ ಸಿಂಗ್​ ಧೋನಿ ಮತ್ತೊಮ್ಮೆ ತಂಡಕ್ಕೆ ಸೇರಿಕೊಳ್ಳುವುದು ಬಹಳ ಕಷ್ಟ ಎಂದು ವಿರೇಂದ್ರ ಸೆಹ್ವಾಗ್​ ಅಭಿಪ್ರಾಯಪಟ್ಟಿದ್ದಾರೆ.

MS Dhoni
ಎಂಎಸ್​ ಧೋನಿ
author img

By

Published : Mar 19, 2020, 4:32 AM IST

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದರೆ ಎಂಎಸ್​ ಧೋನಿ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂಬ ಮಾತು ಗಂಭೀರವಾಗಿ ಕೇಳಿ ಬಂದಿದ್ದವು. ಆದ್ರೆ ಐಪಿಎಲ್​ ಇದೀಗ ಮುಂದೂಡಿಕೆಯಾಗಿದ್ದರಿಂದ ಧೋನಿ ಭವಿಷ್ಯ ಮತ್ತಷ್ಟು ಗೊಂದಲದಲ್ಲಿ ಸಿಲುಕಿಕೊಂಡಿದೆ.

ಧೋನಿ ಕುರಿತು ಮಾತನಾಡಿರುವ ಟೀಂ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸಮನ್​ ವಿರೇಂದ್ರ ಸೆಹ್ವಾಗ್​, ಧೋನಿ ತಂಡಕ್ಕೆ ಕಮ್​ಬ್ಯಾಕ್​ ಮಾಡುವುದು ತುಂಬಾ ಕಠಿಣವಾಗಿದೆ ಎಂದಿದ್ದಾರೆ.

Virender sehwag
ಧೋನಿ-ಸೆಹ್ವಾಗ್

ವಿಕೆಟ್​ ಕೀಪರ್​ ರೂಪದಲ್ಲಿ ಕೆಎಲ್​ ರಾಹುಲ್​ ಹಾಗೂ ರಿಷಭ್​ ಪಂತ್​ ತಂಡದಲ್ಲಿದ್ದಾರೆ. ತಂಡದಲ್ಲಿ ಉತ್ತಮ ಪ್ರದರ್ಶನ ಮೂಡಿ ಬರುತ್ತಿರುವ ಕಾರಣ ಧೋನಿ ಅವರಿಗೆ ಏಕೆ ಅಂಟಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ ಎಂದು ಸೆಹ್ವಾಗ್​ ಹೇಳಿದ್ದಾರೆ.

ಇದೇ ವೇಳೆ ನ್ಯೂಜಿಲ್ಯಾಂಡ ಪ್ರವಾಸದಲ್ಲಿ ಟೀಂ ಇಂಡಿಯಾ ಟೆಸ್ಟ್​ ಹಾಗೂ ಏಕದಿನ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅವರೂ ನಮಗಿಂತಲೂ ಉತ್ತಮವಾದ ಕ್ರಿಕೆಟ್​ ಆಡಿದ್ದಾರೆ ಎಂದಿದ್ದಾರೆ. ಆದರೆ ಟಿ-20ಯಲ್ಲಿ ಆದಷ್ಟು ಬೇಗ ಕಮ್​ಬ್ಯಾಕ್​ ಮಾಡುವುದು ಕಷ್ಟ ಎಂದು ಅವರು ಹೇಳಿದ್ದಾರೆ.

ಗಾಯದಿಂದ ಗುಣಮುಖರಾಗಿ ತಂಡಕ್ಕೆ ಆಗಮಿಸಿರುವ ಹಾರ್ದಿಕ್​ ಪಾಂಡ್ಯ ತಂಡದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.