ETV Bharat / sports

ರೈನಾ ಇಲ್ಲದ ಸಿಎಸ್​ಕೆ ತಂಡದಲ್ಲಿ ಧೋನಿ 3ನೇ ಕ್ರಮಾಂದಲ್ಲಿ ಬ್ಯಾಟಿಂಗ್​ ಮಾಡಬೇಕು: ಗಂಭೀರ್​ ಸಲಹೆ - Dhoni bat at number 2

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಾಗೂ ಐಪಿಎಲ್​ನಲ್ಲಿ ತಮ್ಮ ಬಹುಪಾಲು ಪಂದ್ಯಗಳಲ್ಲಿ ಕೆಳ ಕ್ರಮಾಂಕದಲ್ಲೇ ಬ್ಯಾಟಿಂಗ್​ ನಡೆಸಿದ್ದಾರೆ. ಆದರೆ ರೈನಾ ಈ ಬಾರಿ ಟೂರ್ನಿಗೆ ಅಲಭ್ಯರಾಗುತ್ತಿರುವುದರಿಂದ ಧೋನಿ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆಯಬೇಕು ಎಂದು ಗಂಭೀರ್​ ಅಭಿಪ್ರಾಯಪಟ್ಟಿದ್ದಾರೆ.

ಎಂಎಸ್​ ಧೋನಿ -ಗೌತಮ್​ ಗಂಭೀರ್​
ಎಂಎಸ್​ ಧೋನಿ -ಗೌತಮ್​ ಗಂಭೀರ್​
author img

By

Published : Sep 1, 2020, 5:14 PM IST

ನವದೆಹಲಿ: ಚೆನ್ನೈ ಸೂಪರ್​ ಕಿಂಗ್ಸ್​ನ ಇಷ್ಟು ವರ್ಷದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸುರೇಶ್​ ರೈನಾ ವೈಯಕ್ತಿಕ ಕಾರಣಗಳಿಂದ ತಂಡದಿಂದ ಹೊರ ಬಂದಿರುವುದರಿಂದ ಎಂ.ಎಸ್​.ಧೋನಿಗೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡುವುದಕ್ಕೆ ಒಳ್ಳೆಯ ಅವಕಾಶ ದೊರೆತಿದೆ ಎಂದು ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಹೇಳಿದ್ದಾರೆ.

ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಹಾಗೂ ಐಪಿಎಲ್​ನಲ್ಲಿ ತಮ್ಮ ಬಹುಪಾಲು ಪಂದ್ಯಗಳಲ್ಲಿ ಕೆಳ ಕ್ರಮಾಂತದಲ್ಲೇ ಬ್ಯಾಟಿಂಗ್​ ನಡೆಸಿದ್ದಾರೆ. ಆದರೆ ರೈನಾ ಈ ಬಾರಿ ಟೂರ್ನಿಗೆ ಅಲಭ್ಯರಾಗುತ್ತಿರುವುದರಿಂದ ಧೋನಿ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆಯಬೇಕು ಎಂದು ಗಂಭೀರ್​ ಅಭಿಪ್ರಾಯಪಟ್ಟಿದ್ದಾರೆ.

ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ

ಸ್ಟಾರ್​ ಸ್ಪೋರ್ಟ್ಸ್​ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಗಂಭೀರ್​, ಧೋನಿಗೆ ಮೂರನೇ ಕ್ರಮಾಂದಲ್ಲಿ ಬ್ಯಾಡಿಂಗ್​ ಮಾಡುವುದಕ್ಕೆ ಇದೊಂದು ಉತ್ತಮ ಅವಕಾಶ. ಅವರು ಒಂದು ವರ್ಷದಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಹಾಗಾಗಿ ಮೇಲಿನ ಕ್ರಮಾಂಕದಲ್ಲಿ ಆಡಿದರೆ ಹೆಚ್ಚು ಎಸೆತಗಳು ದೊರೆಯಲಿವೆ. ಜೊತೆಗೆ ಇಷ್ಟು ವರ್ಷಗಳ ಕಾಲ ಭಾರತ ತಂಡಕ್ಕೆ ಆಸರೆಯಾಗಿದ್ದ ಮಾದರಿಯಲ್ಲಿಯೇ ಅವರು ಸಿಎಸ್​ಕೆ ತಂಡಕ್ಕೂ ನೆರವಾಗಬಹುದು ಎಂದಿದ್ದಾರೆ.

ಸುರೇಶ್​ ರೈನಾ
ಸುರೇಶ್​ ರೈನಾ

" ಧೋನಿ ಮೂರನೇ ಕ್ರಮಾಂಕದಲ್ಲಿ ಆಡಿದರೆ ಕೇದಾರ್‌ ಜಾಧವ್, ಡ್ವೇನ್​ ಬ್ರಾವೋ ಮತ್ತು ಸ್ಯಾಮ್ ಕರ್ರನ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದು, ಅವರು ಕೂಡ ಬ್ಯಾಟಿಂಗ್​ ಮಾಡಲು ಸಮರ್ಥರಾಗಿದ್ದಾರೆ. ಆದ್ದರಿಂದ ಧೋನಿಯಂತಹ ಆಟಗಾರನಿಗೆ 3ನೇ ಕ್ರಮಾಂಕ ಉತ್ತಮ ಅವಕಾಶ ಎಂದು ನಾನು ಭಾವಿಸುತ್ತೇನೆ. ಮತ್ತು ಅದನ್ನು ಧೋನಿ ಕೂಡ ಆನಂದಿಸಲಿದ್ದಾರೆ ಎಂದುಕೊಂಡಿದ್ದೇನೆ ಎಂದು ಗೌತಿ ವಿವರಿಸಿದ್ದಾರೆ.

ಸುರೇಶ್​ ರೈನಾ ತಂಡದಲ್ಲಿ ಇಲ್ಲ. ಹಾಗಾಗಿ ಅವರಷ್ಟೇ ಅನುಭವವುಳ್ಳ ಆಟಗಾರ ಆ ಸ್ಥಾನಕ್ಕೆ ಅಗತ್ಯ. ನನ್ನ ಪ್ರಕಾರ ಅದು ಧೋನಿ ಆಗಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಗಂಭೀರ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.