ETV Bharat / sports

ಧೋನಿ ನಿವೃತ್ತಿ !!! ಟ್ವಿಟರ್​ನಲ್ಲಿ ನಂಬರ್ ​1 ಟ್ರೆಂಡ್​ ಆದ #DhoniRetires - ಧೋನಿ ಟ್ರೆಂಡಿಂಗ್​

ಸಾಮಾಜಿಕ ಜಾಲತಾಣಗಳಲ್ಲಿ ಆದ ದಿಢೀರ್​ ಬೆಳವಣಿಯಲ್ಲಿ #DhoniRetires ಎಂಬ ಹ್ಯಾಸ್​ಟ್ಯಾಗ್​ನೊಂದಿಗೆ ಹಲವಾರು ಮಂದಿ ಧೋನಿ ಚಿತ್ರಗಳನ್ನು ಪೋಸ್ಟ್​ ಮಾಡಿ ಧೋನಿ ನಿವೃತ್ತಿ ಘೋಷಿಸಿದ್ದಾರೆ ಎಂದು ಟ್ವೀಟ್​ ಮಾಡುತ್ತಿದ್ದಾರೆ.

Dhoni retires,ಧೋನಿ ನಿವೃತ್ತಿ
author img

By

Published : Oct 29, 2019, 12:12 PM IST

ಮುಂಬೈ: ಭಾರತ ಕ್ರಿಕೆಟ್​ ಕಂಡ ಶ್ರೇಷ್ಠ ನಾಯಕ ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿದ್ದಾರೆ ಎಂಬ ಗಾಸಿಪ್​ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆದ ದಿಢೀರ್​ ಬೆಳವಣಿಯಲ್ಲಿ #DhoniRetires ಎಂಬ ಹ್ಯಾಸ್​ಟ್ಯಾಗ್​ನೊಂದಿಗೆ ಹಲವಾರು ಧೋನಿ ಚಿತ್ರಗಳನ್ನು ಪೋಸ್ಟ್​ ಮಾಡಿ ಧೋನಿ ನಿವೃತ್ತಿ ಘೋಷಿಸಿದ್ದಾರೆ ಎಂದು ಟ್ವೀಟ್​ ಮಾಡುತ್ತಿದ್ದಾರೆ.

ವಿಶ್ವಕಪ್​ನಂತರ ಧೋನಿ ಭಾರತ ಆಡಿದ ವಿಂಡೀಸ್​, ದಕ್ಷಿಣ ಆಫ್ರಿಕಾ ಹಾಗೂ ಮುಂಬರುವ ಬಾಂಗ್ಲಾದೇಶದ ವಿರುದ್ಧದ ಸೀಮಿತ ಓವರ್​ಗಳ ಸರಣಿಯಿಂದ ದೂರ ಉಳಿದಿದ್ದರು. ಇನ್ನು ಧೋನಿ ಸ್ಥಾನದಲ್ಲಿ ಯುವ ವಿಕೆಟ್​ ಕೀಪರ್​ ರಿಷಭ್​ ಪಂತ್​ ಅವರನ್ನು ಆಯ್ಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಧೋನಿ ನಮ್ಮ ಮೊದಲ ಆಯ್ಕೆಯಲ್ಲ ಎಂದು ಹೇಳಿದ್ದರು.

ಇದೀಗ ಧೋನಿ ಕುರಿತು ಸಾಮಾಜಿಕ ಜಾಲಾತಾಣದಲ್ಲಿ ನಿವೃತ್ತಿ ಸುದ್ದಿ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಆಯ್ಕೆ ಸಮಿತಿ ಹೇಳಿಕೆಯಂತೆ ರಿಷಭ್​ ಪಂತ್​ ಅವರೇ ನಮ್ಮ ಮೊದಲ ಆಯ್ಕೆ ಎಂದಿರುವುದರಿಂದ ಧೋನಿ ಕೂಡ ನಿವೃತ್ತಿ ಘೋಷಿಸಲಿದ್ದಾರಾ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಆದರೆ, ಈ ವಿಚಾರ ಕುರಿತು ಬಿಸಿಸಿಐ ಅಥವಾ ಧೋನಿಯಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಧೋನಿ ಅಭಿಮಾನಿಗಳು ಕಿಡಿಕಾರಿದ್ದು, ಟ್ವೀಟ್​ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.