ನವದೆಹಲಿ: ಭಾರತ ತಂಡದ ಮಾಜಿ ನಾಯಕ ಹಾಗೂ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧೋನಿ ತನ್ನ ಸುತ್ತಲಿರುವ ಪ್ರತಿಯೊಬ್ಬರು ಉತ್ತಮ ಕ್ರಿಕೆಟಿಗರಾಗಲು ಹಾಗೂ ಉತ್ತಮ ಮನುಷ್ಯರಾಗಲು ಪ್ರೇರಣೆ ನೀಡುವ ವ್ಯಕ್ತಿಯಾಗಿದ್ದರು ಎಂದು ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಸೋಮವಾರ ಧೋನಿ ನಿವೃತ್ತಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಶನಿವಾರ ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂಎಸ್ ಧೋನಿ ತಮ್ಮ 16 ವರ್ಷದ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದರು. ಧೋನಿ ನಿವೃತ್ತಿಗೆ ದೇಶ ವಿದೇಶದ ಹಾಗೂ ಹಾಲಿ ಮಾಜಿ ಕ್ರಿಕೆಟಿಗರು ಶುಭಕೋರಿದ್ದರು. ಇದೀಗ ಮಹಿಳಾ ತಂಡದ ಸ್ಫೋಟಕ ಆಟಗಾರ್ತಿ ಸ್ಮೃತಿ ಮಂಧಾನ ಕೂಡ ಧೋನಿಗೆ ಶುಭ ಹಾರೈಸಿದ್ದಾರೆ.
2011ರ ವಿಶ್ವಕಪ್ ಫೈನಲ್ನಲ್ಲಿ ಮಾಹಿ ಸರ್ ಅವರ ಬ್ಯಾಟಿಂಗ್ ಮಾಡಲು ಹೊರ ಬಂದ ಕ್ಷಣ ನನಗೆ ಈಗಲು ನೆನಪಿದೆ. ಅವರ ಮುಖದಲ್ಲಿ ಕಂಡು ಬರುವ ಆತ್ಮವಿಶ್ವಾಸ ನನಗೆ ಸದಾ ಸ್ಪೂರ್ತಿಯನ್ನು ತಂದುಕೊಡುತ್ತದೆ. ಅವರು ತಮ್ಮ ಸುತ್ತಮುತ್ತಲಿರುವ ಪ್ರತಿಯೊಬ್ಬರನ್ನು ಉತ್ತಮ ಕ್ರಿಕೆಟಿಗರನ್ನಾಗಿ ಹಾಗೂ ಉತ್ತಮ ವ್ಯಕ್ತಿಗಳಾಗಿ ಇರಲು ಪ್ರೇರೇಪಿಸುತ್ತಾರೆ ಎಂದು ಬಿಸಿಸಿಐ ಮಹಿಳೆಯರ ಅಧಿಕೃತ ಟ್ವಿಟರ್ ಶೇರ್ ಮಾಡಿರುವ ವಿಡಿಯೋದಲ್ಲಿ ಮಂಧಾನ ಹೇಳಿಕೊಂಡಿದ್ದಾರೆ..
-
“He has inspired everyone around him to be a better cricketer, leader and most importantly, a better human being,” #TeamIndia batter @mandhana_smriti hails “inspirational” @msdhoni.#ThankYouMSDhoni pic.twitter.com/7fh3LKTvDI
— BCCI Women (@BCCIWomen) August 17, 2020 " class="align-text-top noRightClick twitterSection" data="
">“He has inspired everyone around him to be a better cricketer, leader and most importantly, a better human being,” #TeamIndia batter @mandhana_smriti hails “inspirational” @msdhoni.#ThankYouMSDhoni pic.twitter.com/7fh3LKTvDI
— BCCI Women (@BCCIWomen) August 17, 2020“He has inspired everyone around him to be a better cricketer, leader and most importantly, a better human being,” #TeamIndia batter @mandhana_smriti hails “inspirational” @msdhoni.#ThankYouMSDhoni pic.twitter.com/7fh3LKTvDI
— BCCI Women (@BCCIWomen) August 17, 2020
2011ರ ವಿಶ್ವಕಪ್ ಫೈನಲ್ನಲ್ಲಿ ಧೋನಿ ಅವರ ಆಟವನ್ನು ಮಂಧಾನ ಮೆಚ್ಚಿ ಮಾತನಾಡಿದ್ದಾರೆ. ಫೈನಲ್ವರೆಗೂ ಉತ್ತಮ ಬ್ಯಾಟಿಂಗ್ ನಡೆಸದ ಧೋನಿ ಫೈನಲ್ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟ ಕ್ಷಣವನ್ನು ಅವರು ಸ್ಮರಿಸಿಕೊಂಡಿದ್ದಾರೆ.
ಧೋನಿ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ 5ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದು ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಆಕರ್ಷಕ 91ರನ್ ಸಿಡಿಸಿ ಭಾರತಕ್ಕೆ 28 ವರ್ಷಗಳ ಬಳಿಕ ಪ್ರಶಸ್ತಿ ತಂದುಕೊಟ್ಟಿದ್ದರು.