ನವದೆಹಲಿ: ಭಾರತ ತಂಡದ ಮಾಜಿ ನಾಯಕ ಧೋನಿ ತಮ್ಮ ವೃತ್ತಿ ಜೀವನದುದ್ದಕ್ಕೂ ಸಾಧನೆ ಮತ್ತು ಮೈದಾನದಲ್ಲಿ ತೋರುವ ವರ್ತನೆಯಿಂದ ಸಾಕಷ್ಟು ಮನಸುಗಳನ್ನ ಗೆದ್ದಿದ್ದಾರೆ. ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ರಿಕಿ ಪಾಂಟಿಂಗ್ ಕೂಡ ಭಾರತೀಯ ಮಾಜಿ ನಾಯಕನನ್ನು ಮೆಚ್ಚಿಕೊಂಡಿದ್ದು, ಭಾವನೆಗಳನ್ನು ನಿಯಂತ್ರಿಸುವುದರಲ್ಲಿ ಧೋನಿಗಿಂತ ಬೇರೆ ವ್ಯಕ್ತಿಯನ್ನು ನಾನು ಕಂಡಿಲ್ಲ ಎಂದಿದ್ದಾರೆ.
ಧೋನಿ ತದ್ವಿರುದ್ಧದ ಮನೋಭಾವನೆಯುಳ್ಳ ನಾಯಕನಾಗಿದ್ದ ರಿಕಿ ಪಾಂಟಿಂಗ್, ಧೋನಿ ಅವರ ಮೇಲೆ ಅವರೇ ಸಂಪೂರ್ಣ ನಿಯಂತ್ರಣ ಹೊಂದಿದ್ದರು. ಅದು ಒಳ್ಳೆಯದು, ಆದರೆ ನನ್ನಿಂದ ಅದು ಎಂದಿಗೂ ಸಾಧ್ಯವಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
"ಅವರು( ಧೋನಿ) ತನ್ನ ಭಾವನೆಗಳನ್ನು( ಕೋಪ, ಅಸಮಾಧಾನ)ಉತ್ತಮಗೊಳಿಸಲು ಎಂದಿಗೂ ಅವಕಾಶ ನೀಡಲಿಲ್ಲ. ಇದು ನಾಯಕನಲ್ಲಿರಬೇಕಾದ ಒಳ್ಳೆಯ ಲಕ್ಷಣವಾಗಿದೆ. ಆದರೆ, ನಾನು ಮೈದಾನದಲ್ಲಿದ್ದಾಗ ಎಷ್ಟೇ ಪ್ರಯತ್ನಿಸಿದರೂ ನಿಯಂತ್ರಣ ಕಷ್ಟವಾಗುತ್ತಿತ್ತು. ಭಾವನೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ನನ್ನಿಂದ ಎಂದಿಗೂ ಸಾಧ್ಯವಾಗುತ್ತಿರಲಿಲ್ಲ " ಎಂದು ಪಾಂಟಿಂಗ್ ಕ್ರಿಕೆಟ್ ಆಸ್ಟ್ರೇಲಿಯಾ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಧೋನಿ ನಾಯಕನಾಗಿದ್ದಾಗ ಭಾರತ ತಂಡ ಯಾವಾಗಲೂ ಪ್ರಶಸ್ತಿ ಎತ್ತಿಹಿಡಿಯುವಂತೆ ಕಾಣುತ್ತಿತ್ತು. ಎಲ್ಲ ಆಟಗಾರರಿಂದಲೇ ಉತ್ತಮ ಪ್ರದರ್ಶನವನ್ನು ಅವರು ಹೊರ ತರಲು ಪ್ರಯತ್ನಿಸುತ್ತಿದ್ದರು. ನಿಮಗೆ ತಿಳಿದಿರಬಹದು ಧೋನಿ ಎಲ್ಲರ ಮೇಲೂ ನಿಯಂತ್ರಣ ಹೊಂದಿದ್ದರು. ಅವರ ಸಹ ಆಟಗಾರರು ಸಹ ಅವರನ್ನು ತುಂಬಾ ಪ್ರೀತಿಸುತ್ತಿದ್ದರು ಎಂದು ಪಾಂಟಿಂಗ್ ಹೇಳಿದ್ದಾರೆ.