ETV Bharat / sports

’ನೀವು ಸಪೋರ್ಟ್​ ಮಾಡಿ, ನಾವು ಗೆಲ್ತಾ ಇರ್ತೀವಿ‘: ಕನ್ನಡಿಗರಿಗೆ ಕನ್ನಡದಲ್ಲೇ ಪಡಿಕ್ಕಲ್​ ಮನವಿ

author img

By

Published : Sep 22, 2020, 5:36 PM IST

ಸನ್​ರೈಸರ್ಸ್​ ಹೈದರಾಬಾದ್​​ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದಿದ್ದ ಪಡಿಕ್ಕಲ್​ 42 ಎಸೆತಗಳಲ್ಲಿ 8 ಬೌಂಡರಿ ಸಹಿತ 56 ರನ್​ ಸಿಡಿಸಿ ಪದಾರ್ಪಣ ಪಂದ್ಯವನ್ನೇ ಸ್ಮರಣೀಯವನ್ನಾಗಿಸಿಕೊಂಡರು.

ದೇವದತ್​ ಪಡಿಕ್ಕಲ್​
ದೇವದತ್​ ಪಡಿಕ್ಕಲ್​

ದುಬೈ: ಸೋಮವಾರ ನಡೆದ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ 10 ರನ್​ಗಳ ಜಯಸಾಧಿಸಿದೆ. ಕನ್ನಡಿಗ ದೇವದತ್​ ಪಡಿಕ್ಕಲ್​, ವಿಲಿಯರ್ಸ್​ ಅರ್ಧಶತಕ ಸಿಡಿಸಿದರೆ, ಚಹಾಲ್​ 3 ವಿಕೆಟ್​ ಪಡೆದು ಗೆಲುವಿನ ರೂವಾರಿಯಾದರು.

ಪಂದ್ಯದ ನಂತರ ಚಹಾಲ್ ಹಾಗೂ ಪಡಿಕ್ಕಲ್​ ತಮ್ಮನ್ನು ತಾವೇ ಸಂದರ್ಶನ ಮಾಡಿಕೊಂಡರು. ಈ ವೇಳೆ, ತಮಗೆ ನೆರವಾದ ಕೊಹ್ಲಿ, ಫಿಂಚ್ ಬಗ್ಗೆ ಮೆಚ್ಚುಗೆ ವ್ಯಕ್ತಡಿಸಿದ ಪಡಿಕ್ಕಲ್, ಚಹಾಲ್​ರ ಆಶಯದಂತೆ ಕನ್ನಡಿಗರಿಗೆ ಬೆಂಬಲ ನೀಡಬೇಕು ಎಂದು ಕನ್ನಡದಲ್ಲೇ ವಿನಂತಿಸಿಕೊಂಡಿದ್ದಾರೆ.

"ಎಲ್ಲರೂ ಆರ್‌ಸಿಬಿಗೆ ಸಪೋರ್ಟ್​ ಮಾಡ್ತಿರಿ, ಮೊದಲ ಪಂದ್ಯ ತುಂಬಾ ಚೆನ್ನಾಗಿತ್ತು. ಮುಂದೆಯೂ ಹೀಗೆ ಆಡ್ತೀವಿ. ನೀವು ಬೆಂಬಲ ನೀಡ್ತಾ ಇರೀ, ನಾವು ಹೀಗೆ ಆಡ್ತಾ ಇರ್ತೀವಿ" ಎಂದು ದೇವದತ್ ಪಡಿಕ್ಕಲ್ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

ಆರಂಭಿಕನಾಗಿ ಕಣಕ್ಕಿಳಿದಿದ್ದ ಪಡಿಕ್ಕಲ್​ 42 ಎಸೆತಗಳಲ್ಲಿ 8 ಬೌಂಡರಿ ಸಹಿತ 56 ರನ್​ ಸಿಡಿಸಿ ಪದಾರ್ಪಣ ಪಂದ್ಯವನ್ನೇ ಸ್ಮರಣೀಯವನ್ನಾಗಿಸಿಕೊಂಡರು. ಇವರ ಅರ್ಧಶತಕ ಮತ್ತು ವಿಲಿಯರ್ಸ್​ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಆರ್​​​​​ಸಿಬಿ 163 ರನ್​ಗಳಿಸಿತ್ತು. ಬೌಲಿಂಗ್​ನಲ್ಲೂ ಉತ್ತಮ ಪ್ರದರ್ಶನ ತೋರಿ ಹೈದರಾಬಾದ್​ ತಂಡವನ್ನು 153 ರನ್​ಗಳಿಗೆ ಆಲೌಟ್​ ಮಾಡಿ​ 10 ರನ್​ಗಳ ಗೆಲುವು ಪಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.