ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ಮುಂದುವರೆದಿದ್ದು, ಏಪ್ರಿಲ್ 30ರವರೆಗೆ ಲಾಕ್ಡೌನ್ ಮುಂದುವರಿಯುವುದು ಬಹುತೇಕ ಕನ್ಫರ್ಮ್ ಆಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಟೀಂ ಇಂಡಿಯಾ ಲೆಗ್ ಸ್ಪೀನ್ನರ್ ಯಜುವೇಂದ್ರ ಚಹಾಲ್, ದೇಶದಲ್ಲಿ ಒಂದು ವೇಳೆ ಲಾಕ್ಡೌನ್ ಓಪನ್ ಆದರೆ, ಬರೋಬ್ಬರಿ ಮೂರು ವರ್ಷಗಳ ಕಾಲ ಮನೆಯಿಂದ ಹೊರಗಡೆ ಇರಬಹುದು ಎಂದಿದ್ದಾರೆ.
ಮನೆಯಲ್ಲೇ ಲಾಕ್ ಆಗಿರುವ ನಾನು, ಲಾಕ್ಡೌನ್ ಓಪನ್ ಆದ್ರೆ ಯಾವುದೇ ಕಾರಣಕ್ಕೂ ಮನೆಗೆ ಬರಲ್ಲ. ತುಂಬಾ ದಿನಗಳ ಕಾಲ ಮನೆಯಲ್ಲಿರಲ್ಲ. ಮನೆಯಲ್ಲಿ ಈಗ ಉಳಿದಿರುವ ದಿನಗಳು ಮುಂದೆ ಅನೇಕ ವರ್ಷಗಳ ಕಾಲ ವಾಪಸ್ ಮನೆಗೆ ಬರದಂತೆ ಮಾಡಿವೆ ಎಂದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಬೌಲಿಂಗ್ ಮಾಡುವ ಈ ಪ್ಲೇಯರ್, ಮೈದಾನಕ್ಕೆ ಹೋಗಿ ಬೌಲಿಂಗ್ ಮಾಡಬೇಕು ಎಂದು ಅನಿಸುತ್ತದೆ. ತುಂಬಾ ಕ್ರಿಕೆಟ್ ನನ್ನಲ್ಲಿ ಬಾಕಿ ಉಳಿದಿದೆ ಎಂದಿದ್ದಾರೆ.