ETV Bharat / sports

ಹೋಟೆಲ್​ನಲ್ಲಿ ಮಹಿಳಾ ಸಿಬ್ಬಂದಿ ಜೊತೆ ಅನುಚಿತ ವರ್ತನೆ: ಇಬ್ಬರು ಕ್ರಿಕೆಟಿಗರಿಗೆ ಸಂಕಷ್ಟ

ನವದೆಹಲಿ ತಂಡದ ಇಬ್ಬರು ಅಂಡರ್-23 ಆಟಗಾರರು ಹೋಟೆಲ್‌ನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದೆ.

ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್,Delhi U-23 players in trouble
ಇಬ್ಬರು ಕ್ರಿಕೆಟಿಗರಿಗೆ ಸಂಕಷ್ಟ
author img

By

Published : Dec 28, 2019, 9:11 AM IST

ಕೋಲ್ಕತ್ತಾ: ಬಂಗಾಳ ವಿರುದ್ಧದ ಸಿ.ಕೆ.ನಾಯ್ಡು ಟ್ರೋಫಿ ಪಂದ್ಯದ ಹಿಂದಿನ ದಿನ ನಗರದ ಹೋಟೆಲ್‌ನ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಇಬ್ಬರು ದೆಹಲಿ ಅಂಡರ್-23 ಆಟಗಾರರನ್ನು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ​​(ಡಿಡಿಸಿಎ) ವಾಪಸ್ ಕರೆಸಿಕೊಂಡಿದೆ.

ಕುಲ್ದೀಪ್ ಯಾದವ್ ಮತ್ತು ಲಕ್ಷಯ್ ತಾರೆಜ ಎಂಬ ಇಬ್ಬರು ಕ್ರಿಕೆಟಿಗರ ಮೇಲೆ ಈ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾತನಾಡಿರುವ ಡಿಡಿಸಿಎ ಕಾರ್ಯದರ್ಶಿ ವಿನೋದ್ ತಿಹರಾ, ಘಟನೆ ನಡೆದಾಗ ನಾನು ಅಲ್ಲಿ ಇರಲಿಲ್ಲ, ಆದರೆ ಸಂಜಯ್ ಭರದ್ವಾಜ್ ಅಲ್ಲಿದ್ದರು. ಅವರು ದೆಹಲಿಗೆ ಹಿಂದಿರುಗಿದ ನಂತರ ಏನಾಗಿದೆ ಎಂದು ತಿಳಿಯಲಿದೆ. ಸದ್ಯ ಇಬ್ಬರು ಕ್ರಿಕೆಟಿಗರನ್ನ ವಾಪಸ್ ಕರೆಸಿಕೊಳ್ಳಲಾಗಿದ್ದು, ಈ ವಿಷಯವನ್ನು ಶಿಸ್ತು ಸಮಿತಿಯು ಪರಿಶೀಲಿಸಲಿದೆ ಎಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮತ್ತೊಬ್ಬ ಅಧಿಕಾರಿ, ಹೋಟೆಲ್‌ನಲ್ಲಿ ಮಹಿಳೆಯರೊಂದಿಗೆ ಇಬ್ಬರು ಆಟಗಾರರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆಟಗಾರರು ಕಾರಿಡಾರ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದರು. ತಮಾಷೆಗಾಗಿ ಒಂದೆರಡು ರೂಮ್​ಗಳ ಬಾಗಿಲುಗಳನ್ನು ತಟ್ಟಿದ್ದಾರೆ. ಇದಕ್ಕಿಂತ ಹೆಚ್ಚೇನು ನಡೆದಿಲ್ಲ. ತನಿಖೆ ನಡೆದ ನಂತರ ಆಟಗಾರರನ್ನು ದೀರ್ಘಕಾಲದವರೆಗೆ ಅಮಾನತುಗೊಳಿಸಬಹುದು ಎಂದಿದ್ದಾರೆ.

Intro:Body:

dd

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.