ದುಬೈ: ಟೂರ್ನಿಯಲ್ಲಿ ಅಮೋಘ ಪ್ರದರ್ಶನದಿಂದ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಪಂಜಾಬ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
14 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರುವ ಡೆಲ್ಲಿ ತಂಡಕ್ಕೆ ಈ ಪಂದ್ಯ ತನ್ನ ಗೆಲುವಿನ ಓಟವನ್ನು ಮುಂದುವರಿಸಿ ಅಗ್ರಸ್ಥಾನವನ್ನು ಕಾಪಾಡಿಕೊಳ್ಳುವತ್ತಾ ಗಮನ ಹರಿಸಿದೆ.ಈ ಪಂದ್ಯದಲ್ಲಿ ಮೂರು ಬದಲಾವಣೆಗಳೊಂದಿಗೆ ಡೆಲ್ಲಿ ಕಣಕ್ಕಿಳಿಯುತ್ತಿದೆ. ಗಾಯದಿಂದ ಚೇತರಿಸಿಕೊಂಡಿರುವ ಪಂತ್ ಹಾಗೂ ಹೆಟ್ಮೈರ್ , ರಹಾನೆ ಮತ್ತು ಕ್ಯಾರಿ ಜಾಗಕ್ಕೆ ಮರಳಿದ್ದರೆ, ನಾರ್ಜ್ ಬದಲಿಗೆ ಡೇನಿಯಲ್ ಸ್ಯಾಮ್ಸ್ ಐಪಿಎಲ್ಗೆ ಪದಾರ್ಪಣೆ ಮಾಡುತ್ತಿದ್ದಾರೆ.
-
Shreyas Iyer wins the toss and #DC will bat first against #KXIP.#KXIPvDC #Dream11IPL pic.twitter.com/88SVAE5LHP
— IndianPremierLeague (@IPL) October 20, 2020 " class="align-text-top noRightClick twitterSection" data="
">Shreyas Iyer wins the toss and #DC will bat first against #KXIP.#KXIPvDC #Dream11IPL pic.twitter.com/88SVAE5LHP
— IndianPremierLeague (@IPL) October 20, 2020Shreyas Iyer wins the toss and #DC will bat first against #KXIP.#KXIPvDC #Dream11IPL pic.twitter.com/88SVAE5LHP
— IndianPremierLeague (@IPL) October 20, 2020
ಇತ್ತ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 3 ಗೆಲುವು ಹಾಗೂ 6 ಸೋಲು ಕಂಡಿರುವ ರಾಹುಲ್ ನೇತೃತ್ವದ ತಂಡ ಕಳೆದ 2 ಪಂದ್ಯಗಳ ಗೆಲುವಿನ ಆತ್ಮವಿಶ್ವಾಸದಿಂದ ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ. ಈ ಹಿಂದಿನ ಮುಖಾಮುಖಿಯಲ್ಲಿ ಡೆಲ್ಲಿ ತಂಡದ ವಿರುದ್ಧ ಪ್ರಬಲ ಪೈಪೋಟಿಯ ಹೊರೆತಾಗಿಯೂ ಸೂಪರ್ ಓವರ್ನಲ್ಲಿ ಸೋಲು ಕಂಡು ನಿರಾಶೆಯನುಭವಿಸಿತ್ತು.
ಪಂಜಾಬ್ ತಂಡ ಇಂದು ಒಂದು ಬದಲಾವಣೆ ಮಾಡಿಕೊಂಡಿದ್ದು, ಜೋರ್ಡಾನ್ ಬದಲಿಗೆ ಕಿವೀಸ್ ಆಲ್ರೌಂಡರ್ ಜಿಮ್ಮಿ ನಿಶಾಮ್ರನ್ನು ಕಣಕ್ಕಿಳಿಸುತ್ತಿದೆ.
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಶಿಖರ್ ಧವನ್, ರಿಷಭ್ ಪಂತ್, ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋಯ್ನಿಸ್, ಹೆಟ್ಮೈರ್, ಅಕ್ಷರ್ ಪಟೇಲ್, ಆರ್. ಅಶ್ವಿನ್, ತುಷಾರ್ ದೇಶ್‌ಪಾಂಡೆ, ಕಗಿಸೊ ರಬಾಡ, ಡೇನಿಯಲ್ ಸ್ಯಾಮ್ಸ್
ಕಿಂಗ್ಸ್ ಇಲೆವವೆನ್ ಪಂಜಾಬ್: ಕೆ ಎಲ್ ರಾಹುಲ್ (ನಾಯಕ), ಮಯಾಂಕ್ ಅಗರ್‌ವಾಲ್, ಕ್ರಿಸ್ ಗೇಲ್, ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್‌ವೆಲ್, ದೀಪಕ್ ಹೂಡಾ, ಜಿಮ್ಮಿ ನಿಶಾಮ್, ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯಿ, ಆರ್ಶ್‌ದೀಪ್ ಸಿಂಗ್.