ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಾಡಿಹೊಗಳಿದೆ.
ಡೆಲ್ಲಿ ಕ್ಯಾಪಿಟಲ್ಸ್ ಅಧಿಕೃತ ಟ್ವಿಟರ್ನಿಂದ ಟ್ವೀಟ್ ಮಾಡಲಾಗಿದ್ದು, 'ಈ ಸೀಸನ್ನಲ್ಲಿ, ಮೈದಾನದಲ್ಲಿ ನೀವು ನಮ್ಮೆದುರು ತೋರಿಸಿದ ಕೆಚ್ಚೆದೆಯ ಆಟಕ್ಕೆ ಮತ್ತು ದಿಟ್ಟ ಹೋರಾಟಕ್ಕೆ ಒಂದು ಸಲ್ಯೂಟ್' ಆರ್ಸಿಬಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಇದರ ಜೊತೆಗೆ ಎರಡೂ ತಂಡದ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರು ಜೊತೆಯಾಗಿರುವ ಫೋಟೋ ಶೇರ್ ಮಾಡಲಾಗಿದೆ. ಇನ್ನು ಕನ್ನಡದಲ್ಲಿ ಮಾಡಿರುವ ಟ್ವೀಟ್ ಬಗ್ಗೆ, ಅದರಲ್ಲೂ ಬೆಂಗಳೂರು ತಂಡವನ್ನು ಹೊಗಳಿರುವುದು ಕನ್ನಡಿಗರಿಗೆ ಸಖತ್ ಖುಷಿ ನೀಡಿದೆ.
ಟ್ವೀಟ್ನಿಂದ ಸಂತಸಗೊಂಡಿರುವ ಕನ್ನಡಿಗರು ರಿಟ್ವೀಟ್ ಮೂಲಕ 'ನಿಮ್ಮ ಕನ್ನಡದ ಅಭಿಮಾನಕ್ಕೆ ಧನ್ಯವಾದಗಳು, ನಿಮ್ಮ ಕನ್ನಡ ಪ್ರೇಮಕ್ಕೆ ನಾವು ಸದಾ ಚಿರಋಣಿ' ಎಂದೆಲ್ಲಾ ಹೇಳುವ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಆರ್ಸಿಬಿ ವಿರುದ್ಧ ಐಪಿಲ್ ಲೀಗ್ ಹಂತದಲ್ಲಿ ಆಡಿದ್ದ ಎರಡೂ ಪಂದ್ಯಗಳಲ್ಲಿ ದೆಹಲಿ ಭರ್ಜರಿ ಜಯ ಸಾಧಿಸಿತ್ತು. ಇನ್ನು ಈ ಬಾರಿಯ ಐಪಿಎಲ್ನಲ್ಲಿ ಮೊದಲ ಬಾರಿಗೆ ಪ್ಲೇ ಆಪ್ ಹಂತ ತಲುಪಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.
-
ಈ ಸೀಸನ್ ನಲ್ಲಿ, ಮೈದಾನದಲ್ಲಿ ನೀವು ನಮ್ಮೆದುರು ತೋರಿಸಿದ ಕೆಚ್ಚೆದೆಯ ಆಟಕ್ಕೆ ಮತ್ತು ದಿಟ್ಟ ಹೋರಾಟಕ್ಕೆ ಒಂದು ಸಲ್ಯೂಟ್, @RCBTweets! 💪
— Delhi Capitals (@DelhiCapitals) May 16, 2019 " class="align-text-top noRightClick twitterSection" data="
2 Games. Countless memories. #ThankYouRCB for the bold, challenging fights shown against us this season ❤️#ThisIsNewDelhi #DelhiCapitals pic.twitter.com/KRqsBvR41s
">ಈ ಸೀಸನ್ ನಲ್ಲಿ, ಮೈದಾನದಲ್ಲಿ ನೀವು ನಮ್ಮೆದುರು ತೋರಿಸಿದ ಕೆಚ್ಚೆದೆಯ ಆಟಕ್ಕೆ ಮತ್ತು ದಿಟ್ಟ ಹೋರಾಟಕ್ಕೆ ಒಂದು ಸಲ್ಯೂಟ್, @RCBTweets! 💪
— Delhi Capitals (@DelhiCapitals) May 16, 2019
2 Games. Countless memories. #ThankYouRCB for the bold, challenging fights shown against us this season ❤️#ThisIsNewDelhi #DelhiCapitals pic.twitter.com/KRqsBvR41sಈ ಸೀಸನ್ ನಲ್ಲಿ, ಮೈದಾನದಲ್ಲಿ ನೀವು ನಮ್ಮೆದುರು ತೋರಿಸಿದ ಕೆಚ್ಚೆದೆಯ ಆಟಕ್ಕೆ ಮತ್ತು ದಿಟ್ಟ ಹೋರಾಟಕ್ಕೆ ಒಂದು ಸಲ್ಯೂಟ್, @RCBTweets! 💪
— Delhi Capitals (@DelhiCapitals) May 16, 2019
2 Games. Countless memories. #ThankYouRCB for the bold, challenging fights shown against us this season ❤️#ThisIsNewDelhi #DelhiCapitals pic.twitter.com/KRqsBvR41s