ETV Bharat / sports

ಮುಂದಿನ ಎರಡು ವಾರಗಳಲ್ಲಿ 2021ರ ಮಹಿಳಾ ವಿಶ್ವಕಪ್​ ಕುರಿತು ಅಂತಿಮ ನಿರ್ಧಾರ - 2021 ಮಹಿಳೆಯರ ಏಕದಿನ ವಿಶ್ವಕಪ್​

ಮುಂದಿನ 2 ವಾರಗಳಲ್ಲಿ ವಿಶ್ವಕಪ್​ ಕುರಿತ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ವಿಶ್ವಕಪ್​ ಮುಂದೂಡುವ ಅವಶ್ಯಕತೆಯಿದೆಯೇ ಎನ್ನುವುದನ್ನು ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ..

2021ರ ಮಹಿಳಾ ವಿಶ್ವಕಪ್​
2021ರ ಮಹಿಳಾ ವಿಶ್ವಕಪ್​
author img

By

Published : Jul 21, 2020, 5:01 PM IST

ಆಕ್ಲೆಂಡ್ ​: ಐಸಿಸಿ ಸೋಮವಾರ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್​ ಕೂಟವನ್ನು ಕೊರೊನಾ ವೈರಸ್​ ಭೀತಿಯಿಂದ ಮುಂದೂಡಿದೆ. ಇದೀಗ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ 2021ರ ಮಹಿಳಾ ಏಕದಿನ ವಿಶ್ವಕಪ್‌ನ ಭವಿಷ್ಯವನ್ನು ಮುಂದಿನ ಎರಡು ವಾರಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಗ್ರೇಗ್ ಬಾರ್ಕ್ಲೇ ತಿಳಿಸಿದ್ದಾರೆ.

ಮುಂದಿನ 2 ವಾರಗಳಲ್ಲಿ ವಿಶ್ವಕಪ್​ ಕುರಿತ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ವಿಶ್ವಕಪ್​ ಮುಂದೂಡುವ ಅವಶ್ಯಕತೆಯಿದೆಯೇ ಅನ್ನೋದನ್ನು ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ. 'ವಿಶ್ವಕಪ್​ ಕುರಿತು ಮುಂದುವರಿಯಬೇಕಾದ್ರೆ, ನಾವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಯಾಕೆಂದರೆ, ಫೆಬ್ರವರಿಯಲ್ಲಿ ವಿಶ್ವಮಟ್ಟದ ಟೂರ್ನಾಮೆಂಟ್​ ನಡೆಸಲು ಸಾಧ್ಯವಿದೆ ಎಂದಾದ್ರೆ, ನಾವು ಅಗತ್ಯವಾದ ಎಲ್ಲಾ ಸಂಪನ್ಮೂಲಗಳನ್ನು ಪಡೆಯಬೇಕಾಗಿರುತ್ತದೆ' ಎಂದಿದ್ದಾರೆ.

50 ಓವರ್​ಗಳ ಟೂರ್ನಾಮೆಂಟ್​ನಲ್ಲಿ 8 ತಂಡಗಳು ಭಾಗವಹಿಸಲಿದ್ದು, ಫೆಬ್ರವರಿ 6 ರಿಂದ ಮಾರ್ಚ್ 7ರವರೆಗೆ 6 ಸ್ಥಳಗಳಾದ ಹ್ಯಾಮಿಲ್ಟನ್​, ಟೌರಂಗ, ಡೆಲ್ಲಿಂಗ್ಟನ್​, ಆಕ್ಲೆಂಡ್​,ಕ್ರೈಸ್ಟ್‌​ಚರ್ಚ್​ ಹಾಗೂ ಡುನೇದಿನ್‌ನಲ್ಲಿ ನಡೆಯಲಿದೆ.

ಸೋಮವಾರ ವರ್ಚುವಲ್ ಸಭೆ ಸೇರಿದ್ದ ಐಸಿಸಿ ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ವರ್ಷ ನಡೆಯಬೇಕಿದ್ದ ಪುರುಷರ ಟಿ20 ವಿಶ್ವಕಪ್​ ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದರು. ಆದರೆ, ಮುಂದಿನ ವರ್ಷ ಫೆಬ್ರವರಿ 6ರಿಂದ ಮಾರ್ಚ್ 7ರವರೆಗೆ ನಿಗದಿಯಾಗಿರುವ ಮಹಿಳಾ ವಿಶ್ವಕಪ್ ವೇಳಾಪಟ್ಟಿಯಂತೆಯೇ ನಡೆಯಲಿದೆ ಎಂದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.