ಅಬುಧಾಬಿ: ಶಿಖರ್ ಧವನ್ ಅರ್ಧಶತಕ ಹಾಗೂ ರಬಾಡ ಮತ್ತು ಸ್ಟೋಯ್ನಿಸ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಸನ್ರೈಸರ್ಸ್ ವಿರುದ್ಧ 17 ರನ್ಗಳ ಜಯದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.
ಅಬುಧಾಬಿಯಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಶ್ರೇಯಸ್ ಪಡೆ, ಶಿಖರ್ ಧವನ್(78), ಹೆಟ್ಮೈರ್ (42)ಹಾಗೂ ಸ್ಟೋಯ್ನಿಸ್ ಅವರ (38) ಬ್ಯಾಟಿಂಗ್ ನೆರವಿನಿಂದ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 189 ರನ್ಗಳಿಸಿತ್ತು
-
Here it is! @DelhiCapitals win by 17 runs and march into the finals of #Dream11IPL 2020. pic.twitter.com/RRL8Ez8x1h
— IndianPremierLeague (@IPL) November 8, 2020 " class="align-text-top noRightClick twitterSection" data="
">Here it is! @DelhiCapitals win by 17 runs and march into the finals of #Dream11IPL 2020. pic.twitter.com/RRL8Ez8x1h
— IndianPremierLeague (@IPL) November 8, 2020Here it is! @DelhiCapitals win by 17 runs and march into the finals of #Dream11IPL 2020. pic.twitter.com/RRL8Ez8x1h
— IndianPremierLeague (@IPL) November 8, 2020
190 ರನ್ಗಳ ಗುರಿ ಪಡೆದ ಹೈದರಾಬಾದ್ ಕೇನ್ ವಿಲಿಯಮ್ಸನ್ ಅವರ ಹೋರಾಟದ ಅರ್ಧಶತಕದ(67) ಹೊರೆತಾಗಿಯೂ 17 ರನ್ಗಳಿಂದ ಸೋಲೊಪ್ಪಿಕೊಂಡಿತು. ಇತ್ತ ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಮಿಂಚಿದ ಡೆಲ್ಲಿ 13ನೇ ಐಪಿಎಲ್ನಲ್ಲಿ ಫೈನಲ್ಗೆ ಅರ್ಹತೆಗಿಟ್ಟಿಸಿತು.
ಕೇನ್ ವಿಲಿಯಮ್ಸನ್ 45 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ 67, ಅಬ್ಧುಲ್ ಸಮದ್ 16 ಎಸೆತಗಳಲ್ಲಿ ತಲಾ 2 ಬೌಂಡರಿ ಹಾಗೂ ಸಿಕ್ಸರ್ ಸಹಿತ 33 ರನ್ಗಳಿಸಿ ಡೆಲ್ಲಿ ತಂಡಕ್ಕೆ ಭಯ ತರಿಸಿದ್ದರು. ಆದರೆ ನಿರ್ಣಾಯಕ ಹಂತದಲ್ಲಿ ವಿಕೆಟ್ ಕಳೆದುಕೊಂಡಿದ್ದರಿಂದ ಪಂದ್ಯ ಸೋಲಬೇಕಾಯಿತು.
ಇನ್ನು ನಾಯಕ ವಾರ್ನರ್ 2, ಪ್ರಿಯಂ ಗರ್ಗ್ 17, ಪಾಂಡೆ 21, ಹೋಲ್ಡರ್ 11, ಗೋಸ್ವಾಮ(0) ರಶೀದ್ ಖಾನ್ 11 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.
ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಮಿಂಚಿದ ಸ್ಟೋಯ್ನಿಸ್ 3 ಓವರ್ಗಳಲ್ಲಿ 26 ರನ್ ನೀಡಿ 3 ವಿಕೆಟ್ ಪಡೆದರೆ, ರಬಾಡ 29ರನ್ ನೀಡಿ 4 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಡೆಲ್ಲಿ ಕ್ಯಾಪಿಟಲ್ಸ್ ನವೆಂಬರ್ 10ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.