ಅಡಿಲೇಡ್: ಶ್ರೀಲಂಕಾ- ಆಸ್ಟ್ರೇಲಿಯಾ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಆಸೀಸ್ನ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶತಕ ಸಿಡಿಸಿ ಮಿಂಚಿದ್ದಾರೆ.
ಅಡಿಲೇಡ್ ಮೈದಾನದಲ್ಲಿ ನಡೆಯುತ್ತಿರುವ ಚುಟುಕು ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ವಾರ್ನರ್ ಶತಕದ ಕೊಡುಗೆ ನೀಡುವ ಮೂಲಕ ಬೃಹತ್ ಮೊತ್ತ ದಾಖಲಿಸಲು ನೆರವಾದರು.
56 ಎಸೆತಗಳನ್ನು ಎದುರಿಸಿದ ವಾರ್ನರ್, 4 ಸಿಕ್ಸರ್ ಹಾಗೂ 10 ಬೌಂಡರಿಗಳ ಸಹಾಯದಿಂದ 100 ರನ್ ಗಳಿಸಿದರು. ಅಂತಾರಾಷ್ಟ್ರೀಯ ಟಿ-20ಯಲ್ಲಿ ವಾರ್ನರ್ ಮೊದಲ ಬಾರಿಗೆ ಮೂರಂಕಿ ಮೊತ್ತ ಗಳಿಸಿದ್ದಾರೆ.
ವಾರ್ನರ್ 100, ಆರೋನ್ ಫಿಂಚ್ 64 ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ 62 ರನ್ಗಳ ನೆರವಿನಿಂದ ಆಸ್ಟ್ರೇಲಿಯಾ ನಿಗದಿತ 20 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 233 ರನ್ ಕಲೆಹಾಕಿದೆ.
-
His first T20I 100, and off only 56 balls!
— cricket.com.au (@cricketcomau) October 27, 2019 " class="align-text-top noRightClick twitterSection" data="
Well played to the birthday boy, David Warner! 🔥#AUSvSL pic.twitter.com/scf4ATaDP4
">His first T20I 100, and off only 56 balls!
— cricket.com.au (@cricketcomau) October 27, 2019
Well played to the birthday boy, David Warner! 🔥#AUSvSL pic.twitter.com/scf4ATaDP4His first T20I 100, and off only 56 balls!
— cricket.com.au (@cricketcomau) October 27, 2019
Well played to the birthday boy, David Warner! 🔥#AUSvSL pic.twitter.com/scf4ATaDP4
ಅತಿ ಹೆಚ್ಚು ಇನ್ನಿಂಗ್ಸ್ ಬಳಿಕ ಮೊದಲ ಶತಕ:
- ಕೆವಿನ್ ಓಬ್ರಿಯಾನ್(ಐರ್ಲೆಂಡ್) - 74 ಇನ್ನಿಂಗ್ಸ್
- ಡೇವಿಡ್ ವಾರ್ನರ್(ಆಸ್ಟ್ರೇಲಿಯಾ) - 71 ಇನ್ನಿಂಗ್ಸ್
- ಶೇನ್ ವ್ಯಾಟ್ಸನ್(ಆಸ್ಟ್ರೇಲಿಯಾ) - 50 ಇನ್ನಿಂಗ್ಸ್