ETV Bharat / sports

ಲಂಕಾ ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯ: ಒಂದು ಪಂದ್ಯ ಉಳಿದಂತೆ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ

2020 ರ ಟಿ20 ವಿಶ್ವಕಪ್​ ಆಸ್ಟ್ರೇಲಿಯಾದಲ್ಲಿ ನಡೆಯುವುದರಿಂದ ಫಿಂಚ್​ ಪಡೆ ತವರಿನಲ್ಲಿ ನಡೆದ ಮೊದಲ ಸರಣಿಯನ್ನು ಕೈವಶ ಮಾಡಿಕೊಂಡು ವಿಶ್ವಕಪ್​ಗೆ ಮುನ್ನ ಭರ್ಜರಿ ಆರಂಭ ಪಡೆದಿದೆ.

author img

By

Published : Oct 30, 2019, 6:03 PM IST

David Warner

ಬ್ರಿಸ್ಬೇನ್​: ಶ್ರೀಲಂಕಾ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ 9 ವಿಕೆಟ್​ಗಳ ಜಯ ಸಾಧಿಸಿದ ಆಸ್ಟ್ರೇಲಿಯಾ ಇನ್ನೂ ಒಂದು ಪಂದ್ಯವಿರುವಂತೆಯೇ ಟಿ20 ಸರಣಿ ಕೈವಶ ಮಾಡಿಕೊಂಡಿದೆ.

2020 ರ ಟಿ20 ವಿಶ್ವಕಪ್​ ಆಸ್ಟ್ರೇಲಿಯಾದಲ್ಲಿ ನಡೆಯುವುದರಿಂದ ಫಿಂಚ್​ ಪಡೆ ತವರಿನಲ್ಲಿ ನಡೆದ ಮೊದಲ ಸರಣಿಯಲ್ಲೇ ಭರ್ಜರಿ ಆರಂಭ ಪಡೆದಿದೆ.

ಬ್ರಿಸ್ಬೇನ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ ತಂಡ 19 ಓವರ್​ಗಳಲ್ಲಿ 117 ರನ್​ಗಳಿಗೆ ಆಲೌಟ್​ ಆಯಿತು. ಕುಶಾಲ್​ ಪೆರೆರಾ 27 ರನ್​ ಹಾಗೂ ಗುಣತಿಲಕ 21 ರನ್​ಗಳಿಸಿ ತಂಡದ ಮೊತ್ತವನ್ನು 100 ರ ಗಡಿದಾಟಿಸಿದರು.

ಆಸ್ಟ್ರೇಲಿಯಾ ಪರ ಬಿಲ್ಲಿ ಸ್ಟಾನ್ಲೇಕ್​ , ಕಮ್ಮಿನ್ಸ್​, ಅಶ್ಟನ್​ ಅಗರ್​ ಹಾಗೂ ಆ್ಯಡಂ ಜಂಪಾ ತಲಾ 2 ವಿಕೆಟ್​ ಪಡೆದರು.

118 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡದ ನಾಯಕ ಫಿಂಚ್​ ಗೋಲ್ಡನ್​ ಡಕ್‌ಗೆ​ ಬಲಿಯಾದರು. ಆದರೆ ಡೇವಿಡ್​ ವಾರ್ನರ್​ ಹಾಗೂ ಸ್ಟಿವ್​ ಸ್ಮಿತ್​ ಭರ್ಜರಿ ಅರ್ಧಶತಕ ಸಿಡಿಸಿ ಕೇವಲ 13 ಓವರ್​ಗಳಲ್ಲೇ ಗೆಲುವು ತಂದುಕೊಟ್ಟರು. ಡೇವಿಡ್​ ವಾರ್ನರ್​ 41 ಎಸೆತಗಳಲ್ಲಿ 9 ಬೌಂಡರಿ ಸಹಿತ 60 ರನ್​ಗಳಿಸಿದರೆ, ಸ್ಮಿತ್​ 56 ಎಸೆತಗಳಲ್ಲಿ 6 ಬೌಂಡರಿ ಸಹಿತ 53 ರನ್​ಗಳಿಸಿದರು.

ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಾರ್ನರ್​ ಈ ಪಂದ್ಯದಲ್ಲೂ ಅರ್ಧ ಶತಕ ದಾಖಲಿಸಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.