ಲಾಹೋರ್ : ಅನನುಭವಿಗಳ ತಂಡದ ನೇತೃತ್ವವಹಿಸಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾದ ತಂಡದ ದಸುನ್ ಶನಕಾ ನಾಯಕನಾಗಿ ಪದಾರ್ಪಣೆ ಮಾಡಿದ ಸರಣಿಯಲ್ಲೇ ಪಾಕ್ ತಂಡದ ವಿರುದ್ಧ 3-0ಯಲ್ಲಿ ಕ್ಲೀನ್ಸ್ವೀಪ್ ಸಾಧಿಸಿ, ಧೋನಿ, ಮೈಕಲ್ ಕ್ಲಾರ್ಕ್ ದಾಖಲೆ ಸರಿಗಟ್ಟಿದ್ದಾರೆ.
ಟಿ20 ತಂಡದ ನಾಯಕ ಮಲಿಂಗಾ ಭದ್ರತೆಯ ಕಾರಣ ಪಾಕ್ ಪ್ರವಾಸದಿಂದ ಹೊರಗುಳಿದಿದ್ದರಿಂದ ಯುವ ಆಲ್ರೌಂಡರ್ ದಸುನ್ ಶನಕಾರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಲಂಕಾ ಯುವ ತಂಡ ಟಿ20 ಕ್ರಿಕೆಟ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಬಲಿಷ್ಠ ಪಾಕಿಸ್ತಾನವನ್ನು ಅವರ ನೆಲದಲ್ಲೆ 3-0ಯಲ್ಲಿ ಸೋಲಿಸಿ ಇತಿಹಾಸ ಬರೆದಿತ್ತು.
-
And that's a 3-0 whitewash! Sri Lanka have created history by clean-sweeping world number-one ranked, Pakistan!
— Sri Lanka Cricket 🇱🇰 (@OfficialSLC) October 9, 2019 " class="align-text-top noRightClick twitterSection" data="
Pakistan 133/6 (Lahiru Kumara 2/24, Wanindu Hasaranga 3/21, K Rajitha 1/17) vs Sri Lanka 147/7 - Sri Lanka won by 13 runs. #PAKvSL pic.twitter.com/VC56zzeXjg
">And that's a 3-0 whitewash! Sri Lanka have created history by clean-sweeping world number-one ranked, Pakistan!
— Sri Lanka Cricket 🇱🇰 (@OfficialSLC) October 9, 2019
Pakistan 133/6 (Lahiru Kumara 2/24, Wanindu Hasaranga 3/21, K Rajitha 1/17) vs Sri Lanka 147/7 - Sri Lanka won by 13 runs. #PAKvSL pic.twitter.com/VC56zzeXjgAnd that's a 3-0 whitewash! Sri Lanka have created history by clean-sweeping world number-one ranked, Pakistan!
— Sri Lanka Cricket 🇱🇰 (@OfficialSLC) October 9, 2019
Pakistan 133/6 (Lahiru Kumara 2/24, Wanindu Hasaranga 3/21, K Rajitha 1/17) vs Sri Lanka 147/7 - Sri Lanka won by 13 runs. #PAKvSL pic.twitter.com/VC56zzeXjg
ಪಾಕಿಸ್ತಾನದಲ್ಲಿ ಟಿ20 ಸರಣಿ ಗೆದ್ದ ಮೊದಲ ತಂಡ ಎಂಬ ಕಿರೀಟದ ಜೊತೆಗೆ ಶನಕಾ ಕೂಡ ಎಂಎಸ್ ಧೋನಿ ಮತ್ತು ಮೈಕಲ್ ಕ್ಲಾರ್ಕ್ರೊಂದಿಗೆ ಸತತ 3 ಪಂದ್ಯ ಗೆದ್ದ ನಾಯಕ ಎಂದೆನಿಸಿಕೊಂಡರು.
ಧೋನಿ ಟಿ20 ವಿಶ್ವಕಪ್ ವೇಳೆ ಸತತ ಮೂರು ಟಿ20 ಪಂದ್ಯ ಗೆದ್ದಿದ್ದರು. ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ಕೂಡ ತಮ್ಮ ನಾಯಕತ್ವದ ಮೂರು ಪಂದ್ಯಗಳನ್ನು ಗೆದ್ದ ಶ್ರೇಯ ಹೊಂದಿದ್ದಾರೆ.