ಇಸ್ಲಾಮಾಬಾದ್: ಸತತ ಸೋಲುಗಳಿಂದ ಬಸವಳಿದಿರುವ ಪಾಕಿಸ್ತಾನ ತಂಡವನ್ನ ಜಯದ ಹಳಿಗೆ ತರಲು ತಂಡದ ಮುಖ್ಯ ಕೋಚ್ ಹರಸಾಹಸ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊದಲ ಹೆಜ್ಜೆಯಾಗಿ ತಂಡದ ಆಟಗಾರರ ಫಿಟ್ನೆಸ್ ಕಡೆ ಹೆಚ್ಚಿನ ಗಮನ ಹರಿಸಲು ಅವರು ನಿರ್ಧರಿಸಿದ್ದಾರೆ.
ತಂಡದ ಆಟಗಾರರು ಬಿರಿಯಾನಿ, ಮಾಂಸದೂಟ, ಕೊಬ್ಬಿನಾಂಶ ಹೆಚ್ಚಿರುವ ಸಿಹಿ ಪದಾರ್ಥ ತಿನ್ನದಂತೆ ಆಟಗಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗೆ ಆಟಗಾರರಿಗೆ ಖಡಕ್ ಸೂಚನೆ ಕೊಟ್ಟಿರೋದು ಪಾಕ್‌ನ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್.. ಪಾಕ್ ತಂಡದ ಮುಖ್ಯ ಕೋಚ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥರನ್ನಾಗಿ ಇತ್ತೀಚೆಗೆ ಪಾಕ್ ಕ್ರಿಕೆಟ್ ಮಂಡಳಿ ಮಿಸ್ಬಾ ಉಲ್ ಹಕ್‌ರನ್ನ ನೇಮಕ ಮಾಡಿತ್ತು.
![cuts out oily food and sweets for the team](https://etvbharatimages.akamaized.net/etvbharat/prod-images/4466575_pkk.jpg)
ತಂಡದ ಕೋಚ್ ಹಾಗೂ ಆಯ್ಕೆ ಸಮಿತಿ ಹೊಣೆ ಹೊತ್ತ ಬಳಿ ಹಕ್ ಆಟಗಾರರ ಊಟದ ಮೆನು ಸರಿ ಮಾಡಲು ಮುಂದಾಗಿದ್ದಾರೆ. ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಭಾರಿ ಮೊತ್ತದಿಂದ ಸೋಲನುಭವಿಸಿದ ಹಿನ್ನೆಲೆಯಲ್ಲಿ ಪಾಕ್ ಅಭಿಮಾನಿಗಳು ಬೆಂಬಲಿಗರಿಂದ ಟೀಕೆಗೆ ಒಳಗಾಗಿತ್ತು. ನಾಯಕ ಹಾಗೂ ಆಟಗಾರರ ಮೇಲೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಪಂದ್ಯದ ಹಿಂದಿನ ದಿನ ನಾಯಕ ಸರ್ಫರಾಜ್ ಅಹ್ಮದ್ ಪಿಜ್ಜಾ-ಬರ್ಗರ್ ಸೇವನೆ ಮಾಡಿದ್ದು ವಿವಾದಕ್ಕೆ ಒಳಗಾಗಿತ್ತು. ಈ ಎಲ್ಲ ಕಾರಣಗಳನ್ನ ಮುಂದಿಟ್ಟುಕೊಂಡು ತಂಡದ ಆಟಗಾರರ ಫಿಟ್ನಸ್ಗೆ ಮುಖ್ಯ ಕೋಚ್ ಹೆಚ್ಚು ಒತ್ತು ನೀಡಲು ಸೂಚಿಸಿದ್ದಾರೆ. ಇನ್ನು, ಬೌಲಿಂಗ್ ಕೋಚ್ ಹೊಣೆಯನ್ನ ವಕಾರ್ ಯೂನಿಸ್ ವಹಿಸಿಕೊಂಡಿದ್ದಾರೆ.