ETV Bharat / sports

ಸಿಎಸ್​ಕೆ ತಂಡದ ಋತುರಾಜ್​ ಗಾಯಕ್ವಾಡ್​ಗೆ ಮತ್ತೆ ಕೋವಿಡ್​ 19 ದೃಢ - Ruturaj Gaikwad's stay in the quarantine

ಈಗಾಗಲೆ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹಿಂದೆ ಸರಿದಿರುವ ಸುರೇಶ್​ ರೈನಾ ಅವರ ಜಾಗಕ್ಕೆ ಸೂಕ್ತ ಎನ್ನಲಾಗಿತ್ತು. ಆದರೆ ಈ ಬೆಳವಣಿಗೆಯಿಂದ ಸಿಎಸ್​ಕೆ ಬೇರೆ ಆಲೋಚನೆ ಮಾಡಬೇಕಿದೆ. ರೈನಾ ಜಾಗಕ್ಕೆ ಅಂಬಾಟಿ ರಾಯುಡು ಆಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಋತುರಾಜ್​ ಗಾಯಕ್ವಾಡ್​
ಋತುರಾಜ್​ ಗಾಯಕ್ವಾಡ್​
author img

By

Published : Sep 15, 2020, 5:05 PM IST

ದುಬೈ: ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಆಡಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್​ ಅವರಿಗೆ ಕೊರೊನಾ ಪರೀಕ್ಷೆ ಮತ್ತೆ ಪಾಸಿಟಿವ್ ದೃಢಪಟ್ಟಿರುವುದರಿಂದ ಅವರು ಕ್ವಾರಂಟೈನ್‌ನಲ್ಲಿಯೇ ಮುಂದುವರಿಯಬೇಕಾಗಿದೆ.

ಎರಡು ವಾರಗಳ ಹಿಂದೆಯಷ್ಟೆ ಸಿಎಸ್​​ಕೆ ತಂಡದ ದೀಪಕ್ ಚಹಾರ್​ ಹಾಗೂ ಋತುರಾಜ್ ಗಾಯಕ್ವಾಡ್​ ಸೇರಿದಂತೆ 13 ಸಿಎಸ್​ಕೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟಿತ್ತು. ಆದರೆ ಎಲ್ಲರಿಗೂ ಕ್ವಾರಂಟೈನ್​ ಅವಧಿಯಲ್ಲಿ ನೆಗೆಟಿವ್​ ಪಡೆದು ಚೇತರಿಕೆ ಕಂಡಿದ್ದರು.

ತಂಡದ ಸಹ ಆಟಗಾರ ದೀಪಕ್​ ಚಹಾರ್​ ಕೂಡ ಕೋವಿಡ್​ 19ನಲ್ಲಿ ಪಾಸಿಟಿವ್​ ಪಡೆದು ಈಗಾಗಲೆ ಬಯೋಬಬಲ್​ ಪ್ರವೇಶಿಸಿದ್ದಾರೆ. ಸಿಎಸ್​ಕೆ ಕೂಡ ಋತುರಾಜ್​ ಗಾಯಕ್ವಾಡ್​ ಆರಂಭಿಕ ಪಂದ್ಯಕ್ಕೆ ಲಭ್ಯರಾಗುತ್ತಾರೆ ಎಂದು ಭಾವಿಸಿತ್ತು. ಆದರೆ ಇತ್ತೀಚಿನ ಕೋವಿಡ್​ ವರದಿ ಫ್ರಾಂಚೈಸಿ ಆಸೆಗೆ ತಣ್ಣೀರೆರಚಿದೆ. ಆದರೆ ಋತುರಾಜ್​ ಅವರಿಗೆ ರೋಗದ ಯಾವುದೇ ಲಕ್ಷಣಗಳಿಲ್ಲ ಎಂದು ಸಿಎಸ್​ಕೆ ಮೂಲಗಳಿಂದ ತಿಳಿದುಬಂದಿದೆ.

ಈಗಾಗಲೆ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹಿಂದೆ ಸರಿದಿರುವ ಸುರೇಶ್​ ರೈನಾ ಅವರ ಜಾಗಕ್ಕೆ ಸೂಕ್ತ ಎನ್ನಲಾಗಿತ್ತು. ಆದರೆ ಈ ಬೆಳವಣಿಗೆಯಿಂದ ಸಿಎಸ್​ಕೆ ಬೇರೆ ಆಲೋಚನೆ ಮಾಡಬೇಕಿದೆ. ರೈನಾ ಜಾಗಕ್ಕೆ ಅಂಬಾಟಿ ರಾಯುಡು ಆಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಐಪಿಎಲ್​ ಸೆಪ್ಟೆಂಬರ್​ 19ರಿಂದ ಆರಂಭವಾಗಲಿದೆ. ನವೆಂಬರ್​ 10ರಂದು ಫೈನಲ್​ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಸೆಣೆಸಾಡಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.