ETV Bharat / sports

ನನ್ನ ಹೇಳಿಕೆ ತಿರುಚಲಾಗುತ್ತಿದೆ, ಸಿಎಸ್​ಕೆ ಸದಾ ರೈನಾ ಜತೆ ನಿಲ್ಲುತ್ತೆ : ಉಲ್ಟಾ ಹೊಡೆದ ಶ್ರೀನಿ

2008ರಲ್ಲಿ ಸಿಎಸ್​ಕೆ ತಂಡ ಸೇರಿಕೊಂಡಿದ್ದ ಸುರೇಶ್​ ರೈನಾ ನಿಷೇಧವಾಗಿದ್ದ 2 ವರ್ಷಗಳನ್ನು ಹೊರೆತುಪಡಿಸಿ ಎಲ್ಲಾ ಆವೃತ್ತಿಗಳಲ್ಲೂ ಸಿಎಸ್​ಕೆ ಪರ ಆಡಿದ್ದಾರೆ. ಅಲ್ಲದೆ ಸಿಎಸ್​ಕೆ ತಂಡದ ಯಶಸ್ಸಿನಲ್ಲಿ ಸಿಂಹಪಾಲನ್ನು ರೈನಾ ಪಡೆದಿದ್ದಾರೆ..

ಸಿಎಸ್​ಕೆ -ಸುರೇಶ್​ ರೈನಾ
ಸಿಎಸ್​ಕೆ -ಸುರೇಶ್​ ರೈನಾ
author img

By

Published : Aug 31, 2020, 7:18 PM IST

ದುಬೈ : ಐಪಿಎಲ್​ನಿಂದ ಹೊರಬಂದಿದ್ದಕ್ಕೆ ಪರೋಕ್ಷವಾಗಿ ಕಿಡಿಕಾರಿದ್ದ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಸಿಎಸ್​ಕೆ ಮಾಲೀಕ ತಮ್ಮ ಹೇಳಿಕೆಯನ್ನು ವಿಷಯದಿಂದಾಚೆಗೆ ಕೊಂಡೊಯ್ದು ಅರ್ಥೈಸಲಾಗುತ್ತಿದೆ. ಸಿಎಸ್​ಕೆ ಯಾವಾಗಲೂ ರೈನಾರೊಂದಿಗೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ.

ರೈನಾ ಕುರಿತು ಹಿಂದೆ ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಟೈಮ್ಸ್​ ಆಫ್​ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ "ನನ್ನ ಹೇಳಿಕೆಯನ್ನು ಸಂದರ್ಭದಿಂದ ಹೊರತೆಗೆದು ಋಣಾತ್ಮಕವಾಗಿ ಅರ್ಥೈಸಲಾಗುತ್ತಿದೆ" ಎಂದಿದ್ದಾರೆ.

ಸುರೇಶ್​ ರೈನಾ
ಸುರೇಶ್​ ರೈನಾ

"ರೈನಾ ಚೆನ್ನೈ ಸೂಪರ್ ಕಿಂಗ್ಸ್​ ಪ್ರಾಂಚೈಸಿಗೆ ಅಪಾರ ಕೊಡುಗೆ ನೀಡಿದ್ದಾರೆ. 2008ರಿಂದಲೂ ಅವರ ಸಾಧನೆ ಅತ್ಯುತ್ತಮವಾಗಿದೆ. ಕಳೆದ 10 ವರ್ಷಗಳಿಂದ ಈ ಹುಡುಗರೆಲ್ಲಾ ಕುಟುಂಬದವರಂತೆ ಇದ್ದಾರೆ. ಈಗ ಅವರ(ರೈನಾ) ವೈಯಕ್ತಿಕ ನಿರ್ಧಾರವನ್ನು ಪ್ರಾಂಚೈಸಿ ಗೌರವಿಸಲಿದೆ. ಅಲ್ಲದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಎಸ್​ಕೆ ಕುಟುಂಬ ರೈನಾ ಬೆಂಬಲಕ್ಕೆ ನಿಲ್ಲಲಿದೆ. ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಸಮಯವನ್ನು ನೀಡಬೇಕಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮೊದಲು,"ಪ್ರಸ್ತುತ ವ್ಯವಸ್ಥೆಗೆ ಬಗ್ಗೆ ಅಸಮಾಧಾನವಿರುವವರು ತಂಡದಿಂದ ಹೊರ ಹೋಗಬಹುದು. ಕೆಲವೊಮ್ಮೆ ಯಶಸ್ಸು ತಲೆಗೆ ಹತ್ತಿದರೆ ಈ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದಿದ್ದ ಶ್ರೀನಿವಾಸನ್​, ರೈನಾ ತಂಡಕ್ಕೆ ಮರಳದಿದ್ದರೆ, ಅವರ ಬದಲು ಯುವ ಆಟಗಾರ ಋತುರಾಜ್​ ಗಾಯಕ್ವಾಡ್​ರನ್ನು ತಂಡದಲ್ಲಿ ಆಡಿಸುವುದಾಗಿ ಹಾಗೂ ಈ ಬಾರಿ ರೈನಾ ಸಿಎಸ್​ಕೆಯಿಂದ ಪಡೆಯಬೇಕಿರುವ 11 ಕೋಟಿ ರೂ. ವೇತನವನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದರು.

2008ರಲ್ಲಿ ಸಿಎಸ್​ಕೆ ತಂಡ ಸೇರಿಕೊಂಡಿದ್ದ ಸುರೇಶ್​ ರೈನಾ ನಿಷೇಧವಾಗಿದ್ದ 2 ವರ್ಷಗಳನ್ನು ಹೊರೆತುಪಡಿಸಿ ಎಲ್ಲಾ ಆವೃತ್ತಿಗಳಲ್ಲೂ ಸಿಎಸ್​ಕೆ ಪರ ಆಡಿದ್ದಾರೆ. ಅಲ್ಲದೆ ಸಿಎಸ್​ಕೆ ತಂಡದ ಯಶಸ್ಸಿನಲ್ಲಿ ಸಿಂಹಪಾಲನ್ನು ರೈನಾ ಪಡೆದಿದ್ದಾರೆ. ಮಿಸ್ಟರ್ ಐಪಿಎಲ್​ ಖ್ಯಾತಿಯ ರೈನಾ ಅತಿ ಹೆಚ್ಚು(193) ಪಂದ್ಯಗಳನ್ನಾಡಿರುವ ಆಟಗಾರನಾಗಿದ್ದು, 38 ಅರ್ಧಶತಕಗಳ ಸಹಿತ 5368 ರನ್​ಗಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.