ETV Bharat / sports

ಧೋನಿ 1 ವರ್ಷದಿಂದ ಕ್ರಿಕೆಟ್​ ಆಡಿಲ್ಲ, ಫಿನಿಷರ್​ ಆಗಿ ನೋಡಲು ಸಮಯ ಬೇಕು: ಫ್ಲೆಮಿಂಗ್​ - RR beat CSK by 16 runs

ಮಂಗಳವಾರ ನಡೆದ ಪಂದ್ಯದಲ್ಲಿ ಸ್ಯಾಮ್ಸನ್​ 74, ಸ್ಟಿವ್ ಸ್ಮಿತ್​ 69 ಹಾಗೂ ಜೋಫ್ರಾ ಆರ್ಚರ್ 27 ರನ್​ಗಳ ನೆರವಿನಿಂದ ರಾಜಸ್ಥಾನ್​ ರಾಯಲ್ಸ್​ 216 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ್ದ ಸಿಎಸ್​ಕೆ 6 ವಿಕೆಟ್​ ನಷ್ಟಕ್ಕೆ 200 ರನ್​ಗಳಿಸಲಷ್ಟೆ ಶಕ್ತವಾಗಿ 16 ರನ್​ಗಳ ಸೋಲು ಕಂಡಿತು. ಆದರೆ ಫ್ಲೆಸಿಸ್​ 37 ಎಸೆತಗಳಲ್ಲಿ 72 ರನ್​ಗಳಿಸಿ ಗೆಲುವಿಗಾಗಿ ನಡೆಸಿದ ಪ್ರಯತ್ನ ವಿಫಲವಾಯಿತು.

ಸ್ಟೀಫನ್​ ಫ್ಲಮಿಂಗ್​ -ದೋನಿ
ಸ್ಟೀಫನ್​ ಫ್ಲಮಿಂಗ್​ -ದೋನಿ
author img

By

Published : Sep 23, 2020, 6:29 PM IST

ಶಾರ್ಜಾ: ಧೋನಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯದಿಂದ ಕ್ರಿಕೆಟ್​ ಆಡಿಲ್ಲ. ಹಾಗಾಗಿ ಅವರು ತಮ್ಮ ಫಿನಿಷರ್​ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು ಎಂದು ಹೇಳುವ ಮೂಲಕ ಸಿಎಸ್​ಕೆ ಕೋಚ್​ ಸ್ಟೀಪನ್ ಫ್ಲೆಮಿಂಗ್ ತಮ್ಮ ತಂಡದ ನಾಯಕನ ಬೆನ್ನಿಗೆ ನಿಂತಿದ್ದಾರೆ.

ಮಂಗಳವಾರ ನಡೆದ ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಧೋನಿ ನಿಧಾನಗತಿ ಹಾಗೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದಕ್ಕೆ ಕೆಲವು ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಅವರನ್ನು ಕಳೆದ 12 ವರ್ಷಗಳಿಂದ ನೋಡಿಕೊಂಡು ಬರುತ್ತಿರುವ ಕಿವೀಸ್​ ಮಾಜಿ ನಾಯಕ ಹಾಗೂ ಕೋಚ್​ ಫ್ಲೆಮಿಂಗ್ ಧೋನಿಯ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟಿದ್ದಾರೆ.

"ನಾವು ಈ ಪ್ರಶ್ನೆಯನ್ನು ಪ್ರತೀ ವರ್ಷ ಕೇಳುತ್ತಲೇ ಇರುತ್ತೇವೆ. ಧೋನಿ 14ನೇ ಓವರ್‌ನಲ್ಲಿ ಮೈದಾನಕ್ಕೆ ಆಗಮಿಸಿದರು. ಅದು ಬಹುಮಟ್ಟಿಗೆ ಸೂಕ್ತ ಸಮಯವಾಗಿತ್ತು. ಅದರೆ ಅದಕ್ಕೆ ಅನುಗುಣವಾಗಿ ಮಾಡುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಅವರು ಸುದೀರ್ಘ ಕಾಲದಿಂದ ಕ್ರಿಕೆಟ್​ ಆಡಿಲ್ಲ. ಹಾಗಾಗಿ ಅವರ ಮೇಲಿರುವ ನಿರೀಕ್ಷೆಗೆ ತಕ್ಕಂತೆ ಆಡಲು ಕೆಲವು ಸಮಯ ತೆಗೆದುಕೊಳ್ಳಬಹುದು.

ಆದರೆ, ಪಂದ್ಯದ ಕೊನೆಯ ಘಟ್ಟದಲ್ಲಿ ಅವರನ್ನು ನೀವು ನೋಡಿರಬಹುದು. ಅವರು ಅತ್ಯುತ್ತಮವಾಗಿ ಆಡಿದರು. ಫಾಫ್ ಡು ಪ್ಲೆಸಿಸ್​ ತಮ್ಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಹಾಗಾಗಿ ನಾವು ಬ್ಯಾಟಿಂಗ್ ವಿಚಾರದಲ್ಲಿ ತುಂಬಾ ದೂರ ಹೋಗಿಲ್ಲ, ಜೊತೆಗೆ ಈ ವಿಚಾರವಾಗಿ ಖಂಡಿತವಾಗಿಯೂ ತಂಡದಲ್ಲಿ ಚಿಂತಿಸುವ ಸಂದರ್ಭ ಬಂದಿಲ್ಲ " ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಡೆದ ಪಂದ್ಯದಲ್ಲಿ ಸ್ಯಾಮ್ಸನ್​ 74, ಸ್ಟಿವ್ ಸ್ಮಿತ್​ 69 ಹಾಗೂ ಜೋಫ್ರಾ ಆರ್ಚರ್ 27 ರನ್​ಗಳ ನೆರವಿನಿಂದ ರಾಜಸ್ಥಾನ್​ ರಾಯಲ್ಸ್​ 216 ರನ್​ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಸಿಎಸ್​ಕೆ 6 ವಿಕೆಟ್​ ನಷ್ಟಕ್ಕೆ 200 ರನ್​ಗಳಿಸಲಷ್ಟೆ ಶಕ್ತವಾಗಿ 16 ರನ್​ಗಳ ಸೋಲು ಕಂಡಿತು. ಆದರೆ ಫ್ಲೆಸಿಸ್​ 37 ಎಸೆತಗಳಲ್ಲಿ 72 ರನ್​ಗಳಿಸಿ ಗೆಲುವಿಗಾಗಿ ನಡೆಸಿದ ಪ್ರಯತ್ನ ವಿಫಲವಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.