ಮುಂಬೈ: ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ 2022ರ ಐಪಿಎಲ್ವರೆಗೂ ಉಳಿಯುವ ಸಾಧ್ಯತೆಯಿದೆ ಎಂದು ಸಿಇಒ ಕಾಶಿ ವಿಶ್ವನಾಥ್ ಸುಳಿವು ನೀಡಿದ್ದಾರೆ. ಜೊತೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಗೊಂಡಿದ್ದ ರವೀಂದ್ರ ಜಡೇಜಾ ಅತ್ಯುತ್ತಮವಾಗಿ ಕಾಣುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
"ಇದು ಅವರ(ಧೋನಿ) ಕೊನೆಯ ವರ್ಷವಾಗಲಿದೆ ಎಂದು ನಾನು ಭಾವಿಸುವುದಿಲ್ಲ. ಇದು ನನ್ನ ವೈಯಕ್ತಿಕ ದೃಷ್ಟಿಕೋನ. ಅಲ್ಲದೆ ಅವರ ಸ್ಥಾನಕ್ಕೆ ಸಿಎಸ್ಕೆ ಯಾರನ್ನಾದರೂ ನೋಡುತ್ತಿದೆ ಎಂದು ನಾನು ಭಾವಿಸುವುದಿಲ್ಲ" ಎಂದು ಸಂದರ್ಶನವೊಂದರಲ್ಲಿ ವಿಶ್ವನಾಥ್ ತಿಳಿಸಿದ್ದಾರೆ.
ವಿಶ್ವನಾಥ್, ಧೋನಿ ಕುರಿತು ಈ ರೀತಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. 2019ರ ವಿಶ್ವಕಪ್ ನಂತರ ಧೋನಿ ಭವಿಷ್ಯದ ಬಗ್ಗೆ ಹಲವು ಊಹಾಪೋಹಗಳು ಬಂದರೂ ವಿಶ್ವನಾಥ್ ಮಾತ್ರ "ನಾವು ಎಂ.ಎಸ್.ಧೋನಿ 2020 ಮತ್ತು 2021ನೇ ಆವೃತ್ತಿಗಳ ಭಾಗವಾಗುತ್ತಾರೆ ಎಂದು ನಿರೀಕ್ಷಿಸುತ್ತಿದ್ದೇವೆ. ಬಹುಶಃ ಅದರ ಮುಂದಿನ ವರ್ಷ 2022 ಕೂಡ ಎಂದಿದ್ದರು.
ಜಡೇಜಾ ಉತ್ತಮವಾಗಿ ಕಾಣುತ್ತಿದ್ದಾರೆ
ಇನ್ನು ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಪಂದ್ಯದ ಐತಿಹಾಸಿಕ ಡ್ರಾ ಪಂದ್ಯದಲ್ಲಿ ಹೆಬ್ಬೆರಳು ಗಾಯಕ್ಕೆ ಒಳಗಾಗಿ ಕಳದ 3 ತಿಂಗಳಿನಿಂದ ವಿಶ್ರಾಂತಿಯಲ್ಲಿದ್ದ ರವೀಂದ್ರ ಜಡೇಜಾ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.
ಜಡೇಜಾ ಎನ್ಸಿಎನಲ್ಲಿ ಫಿಟ್ನೆಸ್ ಸಾಬೀತುಪಡಿಸಿದ್ದಾರೆ. ಅವರು ಈಗಾಗಲೇ ನಮ್ಮ ತಂಡದೊಂದಿಗೆ ತರಬೇತಿಗೆ ಸೇರಿಕೊಂಡಿದ್ದಾರೆ. ಅವರು ಉತ್ತಮವಾಗಿ ಕಾಣುತ್ತಿದ್ದಾರೆ ಮತ್ತು ಅವರು ತುಂಬಾ ಕಠಿಣ ಪರಿಶ್ರಮಿಯಾಗಿದ್ದಾರೆ. ಐಪಿಎಲ್ ಪ್ರಾರಂಭವಾಗುವ ಸಮಯಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳಲಿದ್ದಾರೆ ಎಂದು ಕಾಶಿ ತಿಳಿಸಿದ್ದಾರೆ.
ಇದನ್ನು ಓದಿ:ಸಿಎಸ್ಕೆ ಸೇರಿದ ' ಫ್ರೆಶರ್ಸ್'ಗೆ ಈ ರೀತಿ ವೆಲ್ಕಮ್ ಮಾಡಿಕೊಂಡ್ರು ಧೋನಿ!