ದುಬೈ: 13ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪ್ಲೇ ಆಫ್ ಹಂತಕ್ಕೆ ಲಗ್ಗೆ ಹಾಕಬೇಕಾದರೆ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಾಗಿದ್ದ ಕೆಕೆಆರ್ ಆಸೆಗೆ ಧೋನಿ ಬಳಗ ತಣ್ಣೀರೆರಚಿದೆ. ನಿನ್ನೆಯ ಪಂದ್ಯದಲ್ಲಿ ಇಯಾನ್ ಮಾರ್ಗನ್ ನೇತೃತ್ವದ ಕೋಲ್ಕತ್ತಾ ವಿರುದ್ಧ ಸಿಎಸ್ಕೆ 6 ವಿಕೆಟ್ಗಳ ಜಯ ಸಾಧಿಸಿ, ಕೆಕೆಆರ್ ಪಾಲಿಗೆ ವಿಲನ್ ಆಗಿದೆ.
![CSK Beat KKR](https://etvbharatimages.akamaized.net/etvbharat/prod-images/elg10o5u0aa3e9h_3010newsroom_1603996745_795.jpg)
ಈಗಾಗಲೇ ಪ್ಲೇ-ಆಫ್ ಹಂತದಿಂದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊರಬಿದ್ದಿದ್ದು, ಇದರ ಮಧ್ಯೆ ಇದೀಗ ಕೋಲ್ಕತ್ತಾ ತಂಡಕ್ಕೂ ಪ್ಲೇ-ಆಫ್ ರೇಸ್ನಿಂದ ಹೊರಗಡೆ ಕರೆದುಕೊಂಡು ಹೋಗಿದೆ. ಈ ಮೂಲಕ ಕೆಕೆಆರ್ 13 ಪಂದ್ಯಗಳಿಂದ 12 ಪಾಯಿಂಟ್ಗಳಿಕೆ ಮಾಡಿ 5ನೇ ಸ್ಥಾನದಲ್ಲಿ ಮುಂದುವರೆದಿದೆ.
-
#MumbaiIndians qualifies for the playoffs after Match 49 of #Dream11IPL pic.twitter.com/50w5mOZA7y
— IndianPremierLeague (@IPL) October 29, 2020 " class="align-text-top noRightClick twitterSection" data="
">#MumbaiIndians qualifies for the playoffs after Match 49 of #Dream11IPL pic.twitter.com/50w5mOZA7y
— IndianPremierLeague (@IPL) October 29, 2020#MumbaiIndians qualifies for the playoffs after Match 49 of #Dream11IPL pic.twitter.com/50w5mOZA7y
— IndianPremierLeague (@IPL) October 29, 2020
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಈಗಾಗಲೇ ಮುಂಬೈ ಇಂಡಿಯನ್ಸ್ 16 ಅಂಕಗಳೊಂದಿಗೆ ಪ್ಲೇ-ಆಫ್ ಹಂತಕ್ಕೆ ಲಗ್ಗೆ ಹಾಕಿದ್ದು, ಉಳಿದಿರುವ ಎರಡು ಪಂದ್ಯಗಳಲ್ಲಿ ತಲಾ 1 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ ಡೆಲ್ಲಿ ಹಾಗೂ ಬೆಂಗಳೂರು ತಂಡ ಮುಂದಿನ ಹಂತಕ್ಕೆ ಲಗ್ಗೆ ಹಾಕಲಿವೆ. ಆದರೆ ನಾಲ್ಕನೇ ಸ್ಥಾನಕ್ಕಾಗಿ ಕೆಕೆಆರ್, ಪಂಜಾಬ್, ಹೈದರಾಬಾದ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತು. ಮುಂದಿನ ಹಂತಕ್ಕೆ ಹೋಗಬೇಕಾದರೆ ಕೆಕೆಆರ್ ತಂಡಕ್ಕೆ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ಆದರೆ ಸಿಎಸ್ಕೆ ವಿರುದ್ಧ ಸೋಲು ಕಂಡಿರುವ ಕೋಲ್ಕತ್ತಾ ರೇಸ್ನಿಂದ ಹೊರಬಿದ್ದಿದೆ. ಇದೀಗ ಪಂಜಾಬ್ ತಂಡಕ್ಕೆ ಮುಂದಿನ ಹಾದಿ ಮತ್ತಷ್ಟು ಸುಲಭವಾಗಿದೆ.
![CSK Beat KKR](https://etvbharatimages.akamaized.net/etvbharat/prod-images/elwfws9u0aifpxa_3010newsroom_1603996745_949.jpg)
ಈ ಹಿಂದಿನ ಪಂದ್ಯದಲ್ಲೂ ಸಿಎಸ್ಕೆ ತಂಡ ಆರ್ಸಿಬಿ ಮೇಲೆ ಸವಾರಿ ನಡೆಸಿ, ಮುಂದಿನ ಹಂತಕ್ಕೆ ದಾಪುಗಾಲು ಹಾಕುವುದನ್ನ ತಡೆದಿತ್ತು. ಇದೀಗ ಕೆಕೆಆರ್ ತಂಡಕ್ಕೂ ಸೋಲಿನ ಬರೆ ಎಳೆದಿದೆ. ಇದರ ಜತೆಗೆ ಪಂಜಾಬ್ ತಂಡಕ್ಕೆ ನಾಲ್ಕನೇ ತಂಡವಾಗಿ ಮುಂದಿನ ಹಂತಕ್ಕೆ ದಾಪುಗಾಲು ಹಾಕಲು ಅನುವು ಮಾಡಿಕೊಟ್ಟಿದೆ.