ನವದೆಹಲಿ: ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಹೆಸರನ್ನು 'ಅರ್ಜುನ ಪ್ರಶಸ್ತಿ'ಗೆ ನಾಮನಿರ್ದೇಶನ ಮಾಡಲಾಗಿದೆ.
ಮೂರು ಮಾದರಿಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾಗಿರುವ ಶರ್ಮಾ ಪ್ರತಿಷ್ಟಿತ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಅವರನ್ನೊಳಗೊಂಡ ಸಮಿತಿ ಈ ವರ್ಷದ 'ಅರ್ಜುನ ಪ್ರಶಸ್ತಿ'ಗೆ 29 ಮಂದಿಯ ಕ್ರೀಡಾಳುಗಳ ಹೆಸರನ್ನು ಕ್ರೀಡಾ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿದೆ.
ಈ ಪಟ್ಟಿಯಲ್ಲಿ ಬಿಲ್ಲುಗಾರಿಗೆ ಪಟು ಅತನು ದಾಸ್, ಮಹಿಳಾ ಹಾಕಿ ತಂಡದ ಆಟಗಾರ್ತಿ ದೀಪಿಕಾ ಠಾಕೂರ್, ಕ್ರಿಕೆಟಿಗ ದೀಪಕ್ ಹೂಡಾ ಮತ್ತು ಟೆನಿಸ್ ಆಟಗಾರ್ತಿ ದಿವಿಜ್ ಶರಣ್ ಹೆಸರನ್ನು ಶಿಫಾರಸು ಮಾಡಲಾಗಿದೆ.
ಇಶಾಂತ್ ಶರ್ಮಾ ಭಾರತ ತಂಡದ ಪರ 97 ಟೆಸ್ಟ್ನಲ್ಲಿ 297 ವಿಕೆಟ್, 80 ಏಕದಿನ ಪಂದ್ಯಗಳಲ್ಲಿ 115 ಹಾಗೂ 14 ಪಂದ್ಯಗಳಲ್ಲಿ 8 ವಿಕೆಟ್ ಸಾಧನೆ ಮಾಡಿದ್ದಾರೆ.