ETV Bharat / sports

ಭಾರತದ ವಿರುದ್ಧ ಸರಣಿ ಅನುಮಾನ.. ನಷ್ಟ ತುಂಬಿಕೊಳ್ಳಲು ₹380 ಕೋಟಿ ಸಾಲ ಪಡೆದ ಕ್ರಿಕೆಟ್​ ಆಸ್ಟ್ರೇಲಿಯಾ..

ಕ್ರಿಕೆಟ್ ಆಸ್ಟ್ರೇಲಿಯಾ ಸಿಇಒ ಕೆವಿನ್​ ರಾಬರ್ಟ್​ ಸ್ವತಃ ಶೇ80 ರಷ್ಟನ್ನು ಮಾತ್ರ ವೇತನ ಪಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಕ್ರಿಕೆಟ್​ ಅಸೋಸಿಯೇಸನ್​ ಜೊತೆಗೆ ಮಾತುಕತೆ ನಡೆಸಿ ಶೇ20 ರಷ್ಟಿರುವ ಕಡಿತವನ್ನು 25ಕ್ಕೆ ಏರಿಸುವ ಚಿಂತನೆ ನಡೆಸಿದ್ದಾರೆ.

ಕ್ರಿಕೆಟ್​ ಆಸ್ಟ್ರೇಲಿಯಾ
ಕ್ರಿಕೆಟ್​ ಆಸ್ಟ್ರೇಲಿಯಾ
author img

By

Published : May 4, 2020, 9:32 AM IST

Updated : May 4, 2020, 10:00 AM IST

ಮೆಲ್ಬೋರ್ನ್​ : ಕೋವಿಡ್​-19 ಭೀತಿಯಿಂದ ಈ ವರ್ಷದ ಕೊನೆಯಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲು ಸಾಧ್ಯವಾಗದಿದ್ರೆ, ಇದರಿಂದಾಗುವ ನಷ್ಟವನ್ನ ತುಂಬುವುದಕ್ಕಾಗಿ ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ 50 ಮಿಲಿಯನ್​ ಅಮೆರಿಕನ್​ ಡಾಲರ್​( ₹ 380 ಕೋಟಿ )ಸಾಲ ಪಡೆದಿದೆ.

ಆಸ್ಟ್ರೇಲಿಯಾದ ದಿನಪತ್ರಿಕೆ ವರದಿಯ ಪ್ರಕಾರ ಕಾಮನ್​ವೆಲ್ತ್​ ಬ್ಯಾಂಕ್​ನಿಂದ ಕ್ರಿಕೆಟ್​ ಆಸ್ಟ್ರೇಲಿಯಾ ₹380 ಕೋಟಿ ಮೊತ್ತದ ಸಾಲವನ್ನು ಪಡೆದುಕೊಂಡಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಳೆದ ತಿಂಗಳು ತನ್ನ ಶೇ .80 ರಷ್ಟು ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕುವ ಆಡಳಿತ ಮಂಡಳಿಯ ನಿರ್ಧಾರ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿಯಲ್ಲಿ 200ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೂನ್​ ಅಂತ್ಯದವರೆಗೆ ಶೇ.20ರಷ್ಟು ವೇತನವನ್ನು ಕಡಿತಗೊಳಿಸಿದ್ದರು. ಅಗಸ್ಟ್ ವೇಳೆ ಮಂಡಳಿಯ ಹಣವೆಲ್ಲಾ ಕಾಲಿಯಾಗಬಹದು ಎಂಬ ಭಯದಿಂದ ವೇತನ ಕಡಿತ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈ ನಿರ್ಧಾರದಿಂದ ಆಸ್ಟ್ರೇಲಿಯಾ ಕ್ರಿಕೆಟ್​ ಬೋರ್ಡ್​ 3 ಮಿಲಿಯನ್​ ಯುಎಸ್​ಡಿ(22.7 ಕೋಟಿ ರೂ) ಹಣ ಉಳಿತಾಯ ಮಾಡಿತ್ತು. ಇದೀಗ ಮುಂಜಾಗ್ರತಾ ಕ್ರಮವಾಗಿ ಮಂಡಳಿ 50 ಮಿಲಿಯನ್​ ಯುಎಸ್​ಡಿ(380 ಕೋಟಿ) ಸಾಲ ಪಡೆದುಕೊಂಡಿದೆ.

ಸಿಎ ಸಿಇಒ ಕೆವಿನ್​ ರಾಬರ್ಟ್​ ಸ್ವತಃ ಶೇ80ರಷ್ಟನ್ನು ಮಾತ್ರ ವೇತನ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕ್ರಿಕೆಟ್​ ಅಸೋಸಿಯೇಷನ್​ ಜೊತೆಗೆ ಮಾತುಕತೆ ನಡೆಸಿ ಶೇ.20 ರಷ್ಟಿರುವ ಕಡಿತವನ್ನು 25ಕ್ಕೆ ಏರಿಸುವ ಚಿಂತನೆ ನಡೆಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ ಕೋವಿಡ್-19 ಹಿನ್ನೆಲೆ 300 ಮಿಲಿಯನ್​ ಆಸ್ಟ್ರೇಲಿಯನ್​ ಡಾಲರ್​ ಮೊತ್ತ ಕಳೆದುಕೊಂಡಿದೆ. ಭಾರತ ಡಿಸೆಂಬರ್​ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರೆ ಹಣವಿಲ್ಲದೆ ನರಳಾಡುತ್ತಿರುವ ಸಿಎ ಬೋರ್ಡ್​ಗೆ ಪರಿಹಾರ ಸಿಕ್ಕಂತಾಗುತ್ತದೆ.

Last Updated : May 4, 2020, 10:00 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.