ETV Bharat / sports

ಭಾರತದ ವಿರುದ್ಧ 4ರ ಬದಲು 5 ಪಂದ್ಯಗಳ ಟೆಸ್ಟ್​ ಸರಣಿ ನಡೆಸಲು ಕ್ರಿಕೆಟ್​ ಆಸ್ಟ್ರೇಲಿಯಾ ಚಿಂತನೆ

ಭಾರತ ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಹಾಗೂ ಏಕದಿನ ಸರಣಿಗಳನ್ನಾಡಲು ಪ್ರವಾಸ ಕೈಗೊಳ್ಳಲಿದೆ. ಈ ವೇಳೆ 4 ಟೆಸ್ಟ್​ ಹಾಗೂ 3 ಏಕದಿನ ಪಂದ್ಯ ನಿಗದಿಯಾಗಿದೆ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ 5 ಟೆಸ್ಟ್ ಪಂದ್ಯಗಳನ್ನಾಡಿಸಲು ಮುಂದಾಗಿದೆ.

ಭಾರತ- ಆಸ್ಟ್ರೇಲಿಯಾ
ಭಾರತ- ಆಸ್ಟ್ರೇಲಿಯಾ
author img

By

Published : Apr 21, 2020, 11:03 PM IST

ಸಿಡ್ನಿ: ಇಡೀ ಪ್ರಪಂಚವೇ ಕೊರೊನಾ ದಾಳಿಗೆ ತತ್ತರಿಸಿ ಮನೆಯಲ್ಲಿ ಸೆರೆವಾಸ ಅನುಭವಿಸಬೇಕಾಗಿರುವುದು ಅನಿವಾರ್ಯವಾಗಿದೆ. ಇದರಿಂದ ಹಲವು ಕ್ರೀಡಾಕೂಟಗಳು ಈಗಾಗಲೇ ಮುಂದೂಡಲ್ಪಟ್ಟಿವೆ. ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವುದರಿಂದ ಕೆಲವು ಸರಣಿಯಲ್ಲಿ ಬದಲಾವಣೆ ಕಂಡುಬರುವ ಸಾಧ್ಯತೆಯಿದೆ.

ಭಾರತ ವರ್ಷಾಂತ್ಯಕ್ಕೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಹಾಗೂ ಏಕದಿನ ಸರಣಿಗಳನ್ನಾಡಲು ಪ್ರವಾಸ ಕೈಗೊಳ್ಳಲಿದೆ. ಈ ವೇಳೆ, 4 ಟೆಸ್ಟ್​ ಹಾಗೂ 3 ಏಕದಿನ ಪಂದ್ಯ ನಿಗದಿಯಾಗಿದೆ. ಆದರೆ, ಆಸ್ಟ್ರೇಲಿಯಾ ಕ್ರಿಕೆಟ್​ ಮಂಡಳಿ 5 ಟೆಸ್ಟ್ ಪಂದ್ಯಗಳನ್ನಾಡಿಸಲು ಮುಂದಾಗಿದೆ.

ಕ್ರಿಕೆಟ್‌ ಆಸ್ಟ್ರೇಲಿಯಾದ ಸಿಇಒ ಕೆವಿನ್ ರೋಬರ್ಟ್ಸ್ ಈ ವಿಚಾರದ ಬಗ್ಗೆ ಮಾತನಾಡಿದ್ದು, 4 ಟೆಸ್ಟ್​ಗಳ ಬದಲು ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಸುವುದಕ್ಕೆ ಬಿಸಿಸಿಐ ಜೊತೆಗೆ ಮಾತುಕತೆಗೆ ಮುಂದಾಗಿದ್ದಾರೆ.

ಕೊರೊನಾವೈರಸ್ ಸೋಂಕು ಹತೋಟಿಗೆ ಬಂದರೆ ಆಸ್ಟ್ರೇಲಿಯಾ ಪ್ರವಾಸ ಸರಣಿಗಾಗಿ ವಿರಾಟ್ ಕೊಹ್ಲಿ ಪಡೆ ನವೆಂಬರ್‌ನಲ್ಲಿ ಪ್ರಯಾಣ ಬೆಳೆಸಲಿದೆ. ಈ ವೇಳೆ, ವಿನ್ ರೋಬರ್ಟ್ಸ್ ಯೋಜನೆಯಂತಾದರೆ ಟೆಸ್ಟ್ ಸರಣಿಗೆ ಮತ್ತೊಂದು ಪಂದ್ಯ ಸೇರಲಿದೆ. ಅಂದರೆ ನಾಲ್ಕರ ಬದಲು ಐದು ಪಂದ್ಯಗಳು ಟೆಸ್ಟ್ ಸರಣಿಯಲ್ಲಿ ಇರಲಿವೆ.

'ಮುಂಬರುವ ಭಾರತ- ಆಸ್ಟ್ರೇಲಿಯಾ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯುವ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆದರೆ ಬಿಸಿಸಿಐ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಬಾಂಧವ್ಯ ಚೆನ್ನಾಗಿರುವುದರಿಂದ ಇದು ನೆರವೇರಬಹುದು. ನಾವು ಈ ಬಗ್ಗೆ ನಿರ್ಧಾರಕ್ಕೆ ಎರಡೂ ಬೋರ್ಡ್‌ ಬಿಡುತ್ತೇವೆ ' ಎಂದು ರೋಬರ್ಟ್ಸ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.