ETV Bharat / sports

ಆಗಸ್ಟ್ 18 ರಿಂದ ಸಿಪಿಎಲ್ 2020 ಆರಂಭ: ಈ ಟಾಪ್​​ 5 ಆಟಗಾರರ ಮೇಲೆ ಹೆಚ್ಚಿದ ನಿರೀಕ್ಷೆ

ಸಿಪಿಎಲ್ - 2020 ರ ಮೊದಲ ಪಂದ್ಯ ಕಳೆದ ವರ್ಷದ ರನ್ನರ್ ಅಪ್ ಆಗಿದ್ದ ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಟ್ರಿನ್‌ಬಾಗೊ ನೈಟ್ ರೈಡರ್ಸ್ ನಡುವೆ ನಡೆಯಲಿದೆ.

ಕೆರಿಬಿಯನ್ ಪ್ರೀಮಿಯರ್ ಲೀಗ್
ಕೆರಿಬಿಯನ್ ಪ್ರೀಮಿಯರ್ ಲೀಗ್
author img

By

Published : Aug 11, 2020, 12:25 PM IST

ನವದೆಹಲಿ: ಆಗಸ್ಟ್ 18 ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್ 2020) ಆರಂಭಗೊಳ್ಳಲಿದೆ. ಕೋವಿಡ್​ -19 ನಂತರ ನಡೆಯುವ ಮೊದಲ ಪ್ರಮುಖ ಟಿ 20 ಲೀಗ್ ಇದಾಗಿದೆ. 33 ಪಂದ್ಯಗಳ ಟೂರ್ನಿಯನ್ನು ಟ್ರಿನಿಡಾಡ್ ಮತ್ತು ಟೊಬಾಗೊ ಸ್ಟೇಡಿಯಂನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಎರಡು ಕ್ರೀಡಾಂಗಣಗಳಲ್ಲಿ ಇಡೀ ಕ್ರೀಡಾಕೂಟವನ್ನ ಆಯೋಜಿಸಲಾಗಿದೆ.

ಸಿಪಿಎಲ್ - 2020 ರ ಮೊದಲ ಪಂದ್ಯ ಕಳೆದ ವರ್ಷದ ರನ್ನರ್ ಅಪ್ ಆಗಿದ್ದ ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಟ್ರಿನ್‌ಬಾಗೊ ನೈಟ್ ರೈಡರ್ಸ್ ನಡುವೆ ನಡೆಯಲಿದೆ. ಈ ಟೂರ್ನಿಯಲ್ಲಿ ಈ ಬಾರಿ ಈ ಐದು ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಕ್ರಿಸ್ ಲಿನ್ (ಸೇಂಟ್ ಕಿಟ್ಸ್ ಆ್ಯಂಡ್ ನೆವಿಸ್ ಪೆಟ್ರಾ ವೋಡ್ಸ್ ​)

ಕ್ರಿಸ್ ಲಿನ್
ಕ್ರಿಸ್ ಲಿನ್

ಟಿ-20 ಕ್ರಿಕೆಟ್​ನಲ್ಲಿ ಅಪಯಾಯಕಾರಿ ಬ್ಯಾಟ್ಸ್​​ಮನ್​ ಎಂದು ಗುರುತಿಸಿಕೊಂಡಿರುವ ಲಿನ್​ ಈ ಬಾರಿ ಮತ್ತೆ ಸಿಪಿಎಲ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ರಿಸ್ ಲಿನ್ ಈ ಹಿಂದೆ ಜಮೈಕಾ ತಲ್ಲವಾಸ್​, ಗಯಾನಾ ಅಮೆಜಾನ್ ವಾರಿಯರ್ಸ್ ಮತ್ತು ಟ್ರಿನ್‌ಬಾಗೊ ನೈಟ್ ರೈಡರ್ಸ್‌ ತಂಡದಲ್ಲಿ ಕಾಣಿಸಿಕೊಂಡಿದ್ದರು. ಈ ವರ್ಷದ ಒಂದು ರೀತಿಯ ವರ್ಚುವಲ್ ಸಿಪಿಎಲ್ 2020 ಡ್ರಾಫ್ಟ್‌ನಲ್ಲಿ ತಂಡಕ್ಕೆ ಮಾರಾಟವಾದ ನಂತರ ಈ ಬಾರಿ ಲಿನ್ ಸೇಂಟ್ ಕಿಟ್ಸ್ ಆ್ಯಂಡ್ ನೆವಿಸ್ ಪೆಟ್ರಾ ವೋಡ್ಸ್ ತಂಡದಲ್ಲಿ​ ಕಾಣಿಸಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾದ ಈ ಬ್ಯಾಟ್ಸ್‌ಮನ್ ಟಿ 20 ಗಳಲ್ಲಿ 144.15 ರ ಮಾರಕ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ತಂಡಕ್ಕೆ ಜಯ ತಂದುಕೊಡುವ ಸಾಮರ್ಥ್ಯ ಹೊಂದಿದ್ದಾರೆ.

ಓಶೇನ್ ಥಾಮಸ್ (ಜಮೈಕಾ ತಲ್ಲವಾಸ್)

ಓಶೇನ್ ಥಾಮಸ್
ಓಶೇನ್ ಥಾಮಸ್

ಈ ಸೀಸನ್​ನಲ್ಲಿ ಜಮೈಕಾ ತಲ್ಲವಾಸ್ ಉಳಿಸಿಕೊಂಡ 5 ಆಟಗಾರರಲ್ಲಿ 23 ವರ್ಷದ ಓಶೇನ್ ಥಾಮಸ್ ಸೇರಿದ್ದಾರೆ. 2017 ರಲ್ಲಿ ಸಿಪಿಎಲ್ ಗೆ ಕಾಲಿಟ್ಟ ಥಾಮಸ್ 2018ರ ಆವೃತ್ತಿಯಲ್ಲಿ 10 ಪಂದ್ಯಗಳಲ್ಲಿ 18 ವಿಕೆಟ್​ ಪಡೆದು ಆ ಸೀಸನ್​ ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​​ ಎನಿಸಿಕೊಂಡರು. ಈ ವರ್ಷ ಕಾರು ಅಪಘಾತದಲ್ಲಿ ಸಿಲುಕಿ ಗಂಭೀರ ಗಾಯದಿಂದ ಪಾರಾಗಿದ್ದರು. ಈ ಬಾರಿಯ ಟೂರ್ನಿಯಲ್ಲಿ ಇವರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಜೇಸನ್ ಹೋಲ್ಡರ್ (ಬಾರ್ಬಡೋಸ್ ಟ್ರೈಡೆಂಟ್)

ಜೇಸನ್ ಹೋಲ್ಡರ್
ಜೇಸನ್ ಹೋಲ್ಡರ್

ವೆಸ್ಟ್ ಇಂಡೀಸ್ ಕ್ರಿಕೆಟ್‌ನ ಅದ್ಭುತ ಆಲ್​ ರೌಂಡರ್​​. ಬ್ಯಾಟಿಂಗ್​ ಮತ್ತು ಬೌಲಿಂಗ್​​ನಲ್ಲಿ ತಮ್ಮ ಸಾಮರ್ಥ್ಯ ಏನು ಎಂಬುದನ್ನ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಸರಣಿಯಲ್ಲಿ ತೋರಿಸಿದ್ದಾರೆ. 28 ರ ಹರೆಯದ ಜೇಸನ್ ಹೋಲ್ಡರ್ ಬಾರ್ಬಡೋಸ್ ಟ್ರೈಡೆಂಟ್ ತಂಡದ ಪ್ರಬಲ ಅಸ್ತ್ರವಾಗಿದ್ದಾರೆ.

ರಾಸ್ ಟೇಲರ್ (ಗಯಾನಾ ಅಮೆಜಾನ್ ವಾರಿಯರ್ಸ್)

ರಾಸ್ ಟೇಲರ್
ರಾಸ್ ಟೇಲರ್

ಸಿಪಿಎಲ್‌ನ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರಾದ ರಾಸ್ ಟೇಲರ್ ಕಳೆದ ವರ್ಷ ಸಿಪಿಎಲ್​​ನಿಂದ ವಿರಾಮ ತೆಗೆದುಕೊಂಡಿದ್ದರು. ಈಗ ಮತ್ತೆ ಗಯಾನಾ ಅಮೆಜಾನ್ ವಾರಿಯರ್ಸ್‌ ತಂಡಕ್ಕೆ ಮರಳಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್​ನಲ್ಲಿ ಅಗಾಧ ಅನುಭವ ಹೊಂದಿರುವ ಟೇಲರ್​ ತಂಡಕ್ಕೆ ತಮ್ಮ ಅನುಭವದ ಮೂಲಕ ನೇರವಾಗುವುದರಲ್ಲಿ ಸಂಶಯವೆ ಇಲ್ಲಾ. ಸಿಪಿಎಲ್​​ ನಲ್ಲಿ ಟೇಲರ್ ನಾಲ್ಕು ಸೀಸನ್​ ಆಡಿದ್ದು 31.5 ಸರಾಸರಿಯಲ್ಲಿ, 36 ಪಂದ್ಯಗಳಿಂದ 724 ರನ್ ಗಳಿಸಿದ್ದಾರೆ.

ಪ್ರವೀಣ್ ತಾಂಬೆ (ಟ್ರಿನ್‌ಬಾಗೊ ನೈಟ್ ರೈಡರ್ಸ್)

ಪ್ರವೀಣ್ ತಾಂಬೆ
ಪ್ರವೀಣ್ ತಾಂಬೆ

ಭಾರತೀಯ ಮೂಲದ 48 ನೇ ವಯಸ್ಸಿನ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ ಈ ಬಾರಿ ಮೊದಲ ಬಾರಿಗೆ ಸಿಪಿಎಲ್​​​ನಲ್ಲಿ ಆಡಲಿದ್ದಾರೆ. ಸಿಪಿಎಲ್ ಒಪ್ಪಂದವನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ತಾಂಬೆ ಪಾತ್ರರಾಗಿದ್ದಾರೆ. 2013 ರಿಂದ ಐಪಿಎಲ್​​ನಲ್ಲಿ ಆಡಿದ್ದ ತಾಂಬೆ ಉತ್ತಮ ಪ್ರದರ್ಶನ ನೀಡಿದ್ದರು. ಈ ಹಿಂದೆ ನಡೆದ ಟಿ-10 ಲೀಗ್​ನಲ್ಲಿ ಐದು ವಿಕೆಟ್​ ಪಡೆದು ಸಾಧನೆ ಮಾಡಿದ್ದ, ಪ್ರವೀಣ್​ ತಾಂಬೆ ಮೇಲೆ ಈ ಬಾರಿ ಸಿಪಿಎಲ್​​ನಲ್ಲಿ ಹೆಚ್ಚಿನ ನಿರೀಕ್ಷೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.