ETV Bharat / sports

ಕೋವಿಡ್​ 19: ಜಿಂಬಾಬ್ವೆ-ಆಸ್ಟ್ರೇಲಿಯಾ ಏಕದಿನ ಸರಣಿ ಮುಂದೂಡಿಕೆ

ಆಗಸ್ಟ್​ 9,12, 15ರಂದು ನಡೆಯಬೇಕಿದ್ದ ಆಸ್ಟ್ರೇಲಿಯಾ ಹಾಗೂ ಜಿಂಬಾಂಬ್ವೆ ನಡುವಿನ ಏಕದಿನ ಸರಣಿ ಕೋವಿಡ್​ 19 ಕಾರಣ ಮುಂದೂಡಲ್ಪಟ್ಟಿದೆ.

Australia & Zimbabwe
ಜಿಂಬಾಬ್ವೆ-ಆಸ್ಟ್ರೇಲಿಯಾ
author img

By

Published : Jun 30, 2020, 5:50 PM IST

ಮೆಲ್ಬೋರ್ನ್​: ಜಿಂಬಾಬ್ವೆ ಹಾಗೂ ಆಸ್ಟ್ರೇಲಿಯಾ ನಡುವೆ ಆಗಸ್ಟ್​ನಲ್ಲಿ ನಡೆಯಬೇಕಿದ್ದ ಮೂರು ಪಂದ್ಯಗಳ ಏಕದಿನ ಸರಣಿ ಕೋವಿಡ್​ ಸಾಂಕ್ರಾಮಿಕ ರೋಗದ ಭೀತಿಯಿಂದ ಮುಂದೂಡಲ್ಪಟ್ಟಿದೆ.

ಎರಡು ರಾಷ್ಟ್ರಗಳ ನಡುವೆ ಆಗಸ್ಟ್​ 9,12, ಹಾಗೂ 15 ರಂದು ಏಕದಿನ ಪಂದ್ಯಗಳು ಆಯೋಜನೆಗೊಂಡಿದ್ದವು.

"ಎರಡು ಕ್ರಿಕೆಟ್​ ಸಂಸ್ಥೆಗಳ ಪರಸ್ಪರ ಮಾತುಕತೆಯ ನಂತರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಯೋ ಸೆಕ್ಯೂರ್​ ತಾಣದಲ್ಲಿ ಸರೆಣಿ ಆಯೋಜಿಸುವುದು ಕಷ್ಟವಾಗಿದೆ. ಜೊತೆಗೆ ಆಟಗಾರರು, ಸಿಬ್ಬಂದಿ ಹಾಗೂ ಇತರ ಅಧಿಕಾರಿಗಳ ಸುರಕ್ಷತೆಗೂ ಒತ್ತು ನೋಡಬೇಕಿದೆ ಹೀಗಾಗಿ ಸರಣಿಯನ್ನು ಮುಂದೂಡಲಾಗಿದೆ" ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ಪ್ರಟಣೆ ಹೊರಡಿಸಿದೆ.

ಕಳೆದ ಬಾರಿ ಆಸ್ಟ್ರೇಲಿಯಾ 2003-04ರಲ್ಲಿ ಜಿಂಬಾಬ್ವೆ ವಿರುದ್ಧ ದ್ವಿಪಕ್ಷೀಯ ಸರಣಿ ಆಯೋಜಿಸಿತ್ತು. ಎರಡು ಪಂದ್ಯಗಳ ಟೆಸ್ಟ್​ ಸರಣಿ ಹಾಗೂ ಭಾರತ ಒಳಗೊಂಡಂತೆ ತ್ರಿಕೋನ ಏಕದಿನ ಸರಣಿಯಲ್ಲಿ ಜಿಂಬಾಬ್ವೆ ಆಸ್ಟ್ರೇಲಿಯಾ ನೆಲದಲ್ಲಿ ಆಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.