ನವದೆಹಲಿ: ದೇಶದಾದ್ಯಂತ ಕೊರೊನಾ ಮಹಾಮಾರಿಗೆ ಜನ ತತ್ತರಿಸಿದ್ದಾರೆ. ಈಗಾಗಲೇ ವ್ಯಾಪಾರ-ವಹಿವಾಟು ಸೇರಿ ಜನ-ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇನ್ನು ಕೊರೊನಾ ವೈರಸ್ ಕ್ರೀಡಾ ಲೋಕದಲ್ಲೂ ತಲ್ಲಣ ಸೃಷ್ಟಿಸಿದ್ದು, ಎಲ್ಲಾ ಕ್ರೀಡೆಗಳಿಗೂ ಬ್ರೇಕ್ ಬಿದ್ದಿದೆ.
-
The need of the hour is to absolutely respect and follow the government's directive. Stay home. Stay safe. Stay healthy. 🙏🏻 https://t.co/p1NDo0E9YL
— Virat Kohli (@imVkohli) March 20, 2020 " class="align-text-top noRightClick twitterSection" data="
">The need of the hour is to absolutely respect and follow the government's directive. Stay home. Stay safe. Stay healthy. 🙏🏻 https://t.co/p1NDo0E9YL
— Virat Kohli (@imVkohli) March 20, 2020The need of the hour is to absolutely respect and follow the government's directive. Stay home. Stay safe. Stay healthy. 🙏🏻 https://t.co/p1NDo0E9YL
— Virat Kohli (@imVkohli) March 20, 2020
ಈ ನಡುವೆ ದೇಶದಲ್ಲಿ ತಲೆದೂರಿರುವ ಕೊರೊನಾ ವೈರಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಈ ಹಿನ್ನೆಲೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತನ್ನ ಪತ್ನಿ ಅನುಷ್ಕಾ ಶರ್ಮಾ ಇಬ್ಬರೂ ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಈ ಬಗ್ಗೆ ಟ್ವಿಟರ್ನಲ್ಲಿ ವಿಡಿಯೋವೊಂದನ್ನೂ ಹಂಚಿಕೊಂಡಿರುವ ವಿರಾಟ್ ಕೊಹ್ಲಿ, ಸುರಕ್ಷತೆಯ ದೃಷ್ಟಿಯಿಂದ ಜನರಿಗೆ ಮನೆಯಲ್ಲಿಯೇ ಇರುವಂತೆ ಮನವಿ ಮಾಡಿದ್ದಾರೆ.
ಈಗ ನಾವು ಬಹಳ ಕಷ್ಟದ ದಿನಗಳನ್ನು ಎದುರಿಸುತ್ತಿದ್ದೇವೆ. ಕೊರೊನಾ ವೈರಸ್ ಹರಡದಂತೆ ತಡೆಯಲು ಇರುವ ಒಂದೇ ಒಂದು ದಾರಿಯೆಂದರೆ ಎಲ್ಲರು ಒಗ್ಗಟ್ಟಾಗಿರುವುದು. ವೈರಸ್ ಇತರರಿಗೆ ಹರಡದಂತೆ ತಡೆಯಲು ಸುರಕ್ಷತೆಯ ದೃಷ್ಟಿಯಿಂದ ಮನೆಯಲ್ಲಿಯೇ ಇರುವುದು. ಮನೆಯಲ್ಲಿಯೇ ಇರಿ ಆರೋಗ್ಯದಿಂದಿರಿ ಎಂದು ಬರೆದುಕೊಂಡಿದ್ದಾರೆ.