ETV Bharat / sports

ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ಕ್ರಿಕೆಟಿಗ ಶ್ರೀಶಾಂತ್‌ಗೆ ಅವಕಾಶ - ಕೇರಳ ಕ್ರಿಕೆಟ್​ ಸಂಸ್ಥೆಯಲ್ಲಿ ಶ್ರೀಶಾಂತ್​ಗೆ ಸ್ಥಾನ

ನನಗೆ ಅವಕಾಶ ನೀಡಿದ ಕೇರಳ ಕ್ರಿಕೆಟ್ ಅಕಾಡೆಮಿಗೆ (ಕೆಸಿಎ) ನಾನು ಋಣಿಯಾಗಿದ್ದೇನೆ. ನನ್ನ ಫಿಟ್ನೆಸ್ ಮತ್ತು ವೇಗವನ್ನು ಆಟದಲ್ಲಿ ಸಾಬೀತುಪಡಿಸುತ್ತೇನೆ. ನನ್ನ ವಿರುದ್ಧ ಎಲ್ಲಾ ವಿವಾದಗಳು ಕೊನೆಗೊಳ್ಳುವ ಸಮಯವಿದು ಎಂದು ಶ್ರೀಶಾಂತ್​​ ಹೇಳಿದ್ದಾರೆ.

sreesanth
ಶ್ರೀಶಾಂತ್
author img

By

Published : Jun 18, 2020, 3:11 PM IST

ಕೊಚ್ಚಿ: ಟೀಂ ಇಂಡಿಯಾದ ವೇಗಿ ಎಸ್.ಶ್ರೀಶಾಂತ್ ಮೇಲೆ ಬಿಸಿಸಿಐ ಹೇರಿದ್ದ ಸ್ಪಾಟ್ ಫಿಕ್ಸಿಂಗ್ ಪ್ರಕರಣದ 7 ವರ್ಷದ ನಿಷೇಧಿತ ಅವಧಿ ಮುಗಿಯುವ ಹಂತ ತಲುಪಿದೆ. ಈ ಹೊತ್ತಲ್ಲಿ ಅವರಿಗೆ ರಣಜಿ ಕ್ರಿಕೆಟ್​ ತಂಡದಲ್ಲಿ ಸ್ಥಾನ ನೀಡಲು ಕೇರಳ ಕ್ರಿಕೆಟ್​ ಸಂಸ್ಥೆ ನಿರ್ಧರಿಸಿದೆ.

ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದ ಉರುಳು:

ಸ್ಪಾಟ್ ಫಿಕ್ಸಿಂಗ್ ಆರೋಪದಿಂದಾಗಿ ಶ್ರೀಶಾಂತ್ ಮತ್ತು ಅವರು ಪ್ರತಿನಿಧಿಸುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಸಹ ಆಟಗಾರರಾದ ಅಜಿತ್ ಚಾಂಡೇಲಾ ಮತ್ತು ಅಂಕಿತ್ ಚವಾಣ್​ ಅವರನ್ನು ದೆಹಲಿ ಪೊಲೀಸರು 2013 ರ ಮೇ ತಿಂಗಳಲ್ಲಿ ಬಂಧಿಸಿದ್ದರು. ಬಳಿಕ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ವೇಗಿ ಮೇಲೆ ಆಜೀವ ನಿಷೇಧ ಶಿಕ್ಷೆ ಹೇರಿತ್ತು.

ನ್ಯಾಯಾಲಯದಲ್ಲಿ ಹೋರಾಟ:

ಈ ಕುರಿತು ನ್ಯಾಯಾಲಯದಲ್ಲಿ ಶ್ರೀಶಾಂತ್ ಸಾಕಷ್ಟು ಹೋರಾಟ ನಡೆಸಿದ್ದರು. 2015 ರಲ್ಲಿ ದೆಹಲಿಯ ವಿಶೇಷ ನ್ಯಾಯಾಲಯವು ಎಲ್ಲಾ ಆರೋಪಗಳಿಂದ ಅವರನ್ನು ಮುಕ್ತರನ್ನಾಗಿಸಿತ್ತು. ಆದರೆ ಬಿಸಿಸಿಐನಿಂದ ಹೇರಿದ್ದ ನಿಷೇಧ ಮುಂದುವರೆದಿತ್ತು.

ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ 2019ರಲ್ಲಿ ಆರೋಪಿಯ ತಪ್ಪನ್ನು ಎತ್ತಿ ಹಿಡಿಯಿತಾದರೂ, ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡುವಂತೆ ಬಿಸಿಸಿಐಗೆ ಸೂಚಿಸಿತ್ತು. ನ್ಯಾಯಾಲಯದ ಆದೇಶದ ನಂತರ, ಬಿಸಿಸಿಐ ಶ್ರೀಶಾಂತ್ ಶಿಕ್ಷೆಯನ್ನು ಜೀವಾವಧಿ ನಿಷೇಧದಿಂದ ಏಳು ವರ್ಷಕ್ಕೆ ಸೀಮಿತಗೊಳಿಸಿದೆ. ಈ ಅವಧಿ ಮುಂಬರುವ ಸೆಪ್ಟೆಂಬರ್‌ಗೆ ಕೊನೆಗೊಳ್ಳಲಿದೆ.

ಕೇರಳ ಕ್ರಿಕೆಟ್‌ ಅಕಾಡೆಮಿಗೆ ಶ್ರೀಶಾಂತ್ ಧನ್ಯವಾದ:

ನನಗೆ ಅವಕಾಶ ನೀಡಿದ ಕೆಸಿಎಗೆ ನಾನು ಋಣಿಯಾಗಿದ್ದೇನೆ. ನನ್ನ ಫಿಟ್ನೆಸ್‌ ಮತ್ತು ವೇಗವನ್ನು ಆಟದಲ್ಲಿ ಸಾಬೀತುಪಡಿಸುತ್ತೇನೆ. ಎಲ್ಲಾ ವಿವಾದಗಳು ಕೊನೆಗೊಳ್ಳುವ ಸಮಯವಿದು ಎಂದು ಶ್ರೀಶಾಂತ್​​ ಸಂತಸ ವ್ಯಕ್ತಪಡಿಸಿದ್ದಾರೆ.

ನಿಷೇಧಪೂರ್ವ ಶ್ರೀಶಾಂತ್‌ ಸಾಧನೆ:

ನಿಷೇಧಕ್ಕೂ ಮುನ್ನ ಶ್ರೀಶಾಂತ್ 27 ಟೆಸ್ಟ್ ಪಂದ್ಯಗಳಲ್ಲಿ 87 ವಿಕೆಟ್ ಮತ್ತು ಏಕದಿನ ಪಂದ್ಯಗಳಲ್ಲಿ 75 ವಿಕೆಟ್ ಪಡೆದಿದ್ದರು. ಮೈದಾನದಲ್ಲಿ ವಿಭಿನ್ನ ಆಟದಿಂದ ಹೆಸರುವಾಸಿಯಾಗಿದ್ದ ಇವರು 2011 ರಲ್ಲಿ ವಿಶ್ವಕಪ್ ಕ್ರಿಕೆಟ್ ವಿಜೇತ ತಂಡದ ಸದಸ್ಯರೂ ಆಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.