ETV Bharat / sports

ನ್ಯೂಜಿಲ್ಯಾಂಡ್ ಎದುರಿನ ವಿಶ್ವಕಪ್​ ಸೆಮಿಫೈನಲ್ ಸೋಲು ಇಂದಿಗೂ ಕಾಡುತ್ತಿದೆ: ಕೆಎಲ್ ರಾಹುಲ್​ - ವಿಶ್ವಕಪ್​ ಸೆಮಿಫೈನಲ್ ಸೋಲು

ಟೂರ್ನಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಭಾರತ ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್ ನೀಡಿದ 240ರನ್​ಗಳನ್ನು ಚೇಸ್​ ಮಾಡಲಾಗದೆ 221 ರನ್​ಗಳಿಗೆ ಆಲೌಟ್​ ಆಗುವ ಮೂಲಕ 18 ರನ್​ಗಳಿಂದ ಸೋಲನುಭವಿಸಿತ್ತು. ಆರಂಭಿಕರಾದ ರಾಹುಲ್​(1), ರೋಹಿತ್​(1) ಹಾಗೂ ಕೊಹ್ಲಿ(1) ರನ್​ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದ್ದರು.

ಕೆಎಲ್ ರಾಹುಲ್​
2019 ವಿಶ್ವಕಪ್​
author img

By

Published : Apr 26, 2020, 8:56 AM IST

ಮುಂಬೈ: ಟೂರ್ನಿಯಲ್ಲಿ ಅದ್ಭುತವಾಗಿ ಆಡಿದರೂ ಸೆಮಿ ಫೈನಲ್​ನಲ್ಲಿ ಅನುಭವಿಸಿದ ಆಘಾತಕಾರಿ ಸೋಲು ನನ್ನನ್ನು ಹಾಗೂ ತಂಡದ ಆಟಗಾರರನ್ನು ಇನ್ನೂ ಕಾಡುತ್ತಿದೆ ಎಂದು ಕನ್ನಡಿಗ ಕೆಎಲ್​ ರಾಹುಲ್​ ತಿಳಿಸಿದ್ದಾರೆ.

ಟೂರ್ನಿಯಲ್ಲಿ ಅಗ್ರಸ್ಥಾನ ಪಡೆದಿದ್ದ ಭಾರತ ಸೆಮಿಫೈನಲ್​ನಲ್ಲಿ ನ್ಯೂಜಿಲ್ಯಾಂಡ್ ನೀಡಿದ 240ರನ್​ಗಳನ್ನು ಚೇಸ್​ ಮಾಡಲಾಗದೆ 221 ರನ್​ಗಳಿಗೆ ಆಲೌಟ್​ ಆಗುವ ಮೂಲಕ 18 ರನ್​ಗಳಿಂದ ಸೋಲನುಭವಿಸಿತ್ತು. ಆರಂಭಿಕರಾದ ರಾಹುಲ್​(1), ರೋಹಿತ್​(1) ಹಾಗೂ ಕೊಹ್ಲಿ(1) ರನ್​ಗೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದ್ದರು.

ಈ ಕುರಿತು ಚಾಟ್​ ಶೋ ದಿ ಮೈಂಡ್‌ ಬಿಹೈಂಡ್‌ ನಲ್ಲಿ ಮಾತನಾಡಿರುವ ರಾಹುಲ್​, ಈ ಹಿಂದೆ ಮುಗಿದು ಹೋಗಿರುವ ಪಂದ್ಯಗಳಲ್ಲಿ ಫಲಿತಾಂಶ ಬದಲಾಯಿಸುವ ಅವಕಾಶ ಒದಗಿ ಬಂದರೆ, ಯಾವುದೇ ಅನುಮಾನವಿಲ್ಲದೆ ಹೇಳುವೆ, ಅದು 2019ರ ವಿಶ್ವಕಪ್​ ಸೆಮಿಫೈನಲ್ ಪಂದ್ಯ ಎಂದಿದ್ದಾರೆ.

" ಆ ಸೋಲು ತಂಡದ ಬಹುತೇಕ ಆಟಗಾರರಿಗೆ ಇಂದಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಈಗಲೂ ಕೆಲ ಸಂದರ್ಭಗಳಲ್ಲಿ ಅದು ನಮ್ಮನ್ನು ಕಾಡುತ್ತಿರುತ್ತದೆ" ಎಂದು ಅವರು ಹೇಳಿದ್ದಾರೆ.

"ಈ ಕುರಿತು ಹಿರಿಯ ಆಟಗಾರರು ಏನನಭವಿಸಿದ್ದಾರೊ ನನಗೆ ಊಹಿಸಲು ಸಾಧ್ಯವಿಲ್ಲ. ಆದರೆ ವಿಶ್ವಕಪ್​ ಟೂರ್ನಮೆಂಟ್​ ಉದ್ದಕ್ಕೂ ನಾವು ಚೆನ್ನಾಗಿ ಆಡಿದ್ದೇವೆ ಎಂದು ತಿಳಿದುಕೊಳ್ಳುವುದು ಕಷ್ಟಕರವಾಗುತ್ತದೆ. ನಾನು ಇಂದಿಗೂ ಕೆಲವೊಮ್ಮೆ ಆ ದುಸ್ವಪ್ನಕ್ಕೆ ನಿದ್ದೆಯಿಂದ ಕೆಲವೊಮ್ಮೆ ಎಚ್ಚರಗೊಳ್ಳುತ್ತಿದ್ದೇನೆ "ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.