ETV Bharat / sports

ಸಿರಾಜ್​ ಸಾಧನೆ ಹಿಂದಿನ ಗುಟ್ಟು ಬಿಚ್ಚಿಟ್ಟ ಬೌಲಿಂಗ್ ಕೋಚ್ ಭರತ್ ಅರುಣ್ - ವೇಗಿ ಮೊಹಮ್ಮದ್ ಸಿರಾಜ್ ಇತ್ತೀಚಿನ ಸುದ್ದಿ

ವೇಗಿ ಮೊಹಮ್ಮದ್ ಸಿರಾಜ್ 13 ವಿಕೆಟ್‌ ಪಡೆದು ಆಸ್ಟ್ರೇಲಿಯಾ ಪ್ರವಾಸವನ್ನು ಯಶಸ್ವಿಯಾಗಿಸಿದರು. ಆತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲು ಸಂಕಷ್ಟ ಮತ್ತು ಕರ್ತವ್ಯ ನಿಷ್ಠೆ ಎರಡು ಪ್ರಮುಖ ಪಾತ್ರ ವಹಿಸಿವೆ ಎಂದು ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ.

author img

By

Published : Jan 28, 2021, 10:13 AM IST

ಹೈದರಾಬಾದ್: ವೇಗಿ ಮೊಹಮ್ಮದ್ ಸಿರಾಜ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಲು ಸಂಕಷ್ಟ ಮತ್ತು ಕರ್ತವ್ಯ ನಿಷ್ಠೆ ಎರಡು ಪ್ರಮುಖ ಪಾತ್ರ ವಹಿಸಿವೆ ಎಂದು ಭಾರತದ ಬೌಲಿಂಗ್ ಕೋಚ್ ಭರತ್ ಅರುಣ್ ಹೇಳಿದ್ದಾರೆ.

"ಗಬ್ಬಾದಲ್ಲಿ ನಡೆದ ಟೆಸ್ಟ್‌ಗಳಲ್ಲಿ 13 ವಿಕೆಟ್‌ ಪಡೆದ ಸಿರಾಜ್‌ ಆಸ್ಟ್ರೇಲಿಯಾ ಪ್ರವಾಸವನ್ನು ಯಶಸ್ವಿಯಾಗಿಸಿದ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಪ್ರಾರಂಭವಾಗುವ ಮೊದಲು, ಸಿರಾಜ್ ತನ್ನ ತಂದೆಯನ್ನು ಕಳೆದುಕೊಂಡ. ಆದರೆ ಅವನು ತನ್ನ ತಂದೆಯ ಕನಸನ್ನು ಈಡೇರಿಸಲು ಆಸ್ಟ್ರೇಲಿಯಾದಲ್ಲಿಯೇ ಇರಲು ನಿರ್ಧರಿಸಿದ. ಸಿರಾಜ್ ಅವರು ಹಸಿವು ಮತ್ತು ಕೋಪ ಎರಡನ್ನೂ ಹೊಂದಿದ್ದಾರೆ. ನಾನು ಅವನನ್ನು ಹೈದರಾಬಾದ್​ನಲ್ಲಿ ನೆಟ್​ನಲ್ಲಿ ಅಭ್ಯಾಸ ಮಾಡುವಾಗ ನೋಡಿದ್ದೆ. ಆ ಸಮಯದಲ್ಲಿ, ನಾನು ವಿವಿಎಸ್ ಲಕ್ಷ್ಮಣ್ ಅವರಿಗೆ ಹೇಳಿದೆ, ಸಿರಾಜ್​ ಉತ್ತಮ ಪ್ರದರ್ಶನ ತೋರುತ್ತಿದ್ದಾನೆ. ಇನ್ನೂ ಹೈದರಾಬಾದ್ ಪರ ಆಡಲಿಲ್ಲವೇ? ನೀವು ಅವನನ್ನು ಬಳಸಬಹುದು? ಎಂದೆ. ಅದಕ್ಕೆ ಅವರು ತಲೆಯಾಡಿಸಿದರು. ಆದರೆ ಆ ವರ್ಷ ಅವನು ಹೆಚ್ಚು ಆಡಲಿಲ್ಲ" ಎಂದರು.

"ನಾನು ಹೈದರಾಬಾದ್ ತರಬೇತುದಾರನಾಗಿ ಹೋದಾಗ, ಮತ್ತೆ ಸಿರಾಜ್‌ನನ್ನು ಕಂಡಿದ್ದೇನೆ. ಆತನ ಬೌಲಿಂಗ್ ನೋಡಿದಾಗ, ಇನ್ನಷ್ಟು ಪ್ರಭಾವಶಾಲಿಯಾಗಿದೆ ಎಂದೆನಿಸಿತು. ನಾನು ಅವನನ್ನು ಮತ್ತೆ ಕರೆದಾಗ ಅವನಿಗೆ ಅದೇ ಉತ್ಸಾಹ, ಉದ್ದೇಶವಿತ್ತು. ಆಗ ನಿರ್ಧರಿಸಿದೆ ಈತ ಟೀಂ ಇಂಡಿಯಾಗೆ ಖಂಡಿತವಾಗಿಯೂ ಆಡಬೇಕು ಎಂದು" ಅಂತಾ ಹೇಳಿದರು.

"ಸಿರಾಜ್ ಅವರಲ್ಲಿ ಮತ್ತೊಂದು ಗಮನಾರ್ಹ ಲಕ್ಷಣವೆಂದರೆ, ನಾವು ಅವನಿಗೆ ಏನನ್ನಾದರೂ ಮಾಡಬೇಕೆಂದು ಹೇಳಿದರೆ, ಅವನು ನಾವು ಕೇಳಿದ ರೀತಿಯಲ್ಲಿಯೇ ಮಾಡುತ್ತಾನೆ. ಅದರೊಂದಿಗೆ ಆತ ತನ್ನದೇ ಆದ ಪ್ರಯೋಗಗಳನ್ನು ಸಹ ಮಾಡುತ್ತಾನೆ" ಎಂದು ಭರತ್​ ಅರುಣ್​ ಸಿರಾಜ್​ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.