ETV Bharat / sports

ವಿಶ್ವ ರಸ್ತೆ ಸುರಕ್ಷತಾ ಕ್ರಿಕೆಟ್​​ ಪಂದ್ಯಾವಳಿಯಲ್ಲಿ ಆಡಲಿದ್ದಾರೆ ಸಚಿನ್, ಲಾರಾ, ಬ್ರೆಟ್ ಲೀ

author img

By

Published : Jan 25, 2021, 10:29 AM IST

ಭಾರತದಲ್ಲಿ ರಸ್ತೆ ಸುರಕ್ಷತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ಪಂದ್ಯಾವಳಿಯ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಅನುಮೋದನೆ ನೀಡಿದೆ. ಅಲ್ಲದೇ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಬೆಂಬಲದೊಂದಿಗೆ ಗವಾಸ್ಕರ್ ಕಂಪನಿಯ ಪ್ರೊಫೆಷನಲ್ ಮ್ಯಾನೇಜ್ಮೆಂಟ್ ಗ್ರೂಪ್ ಈ ಕಾರ್ಯಕ್ರಮ ಆಯೋಜಿಸುತ್ತಿದೆ.

Sachin Tendulkar, Brian Lara and brettley to play tournament
ವಿಶ್ವ ರಸ್ತೆ ಸುರಕ್ಷತಾ ಕ್ರಿಕೆಟ್​​ ಪಂದ್ಯಾವಳಿಯಲ್ಲಿ ಆಡಲಿದ್ದಾರೆ ಸಚಿನ್, ಲಾರಾ, ಬ್ರೆಟ್ ಲೀ

ರಾಯಪುರ: ವಿಶ್ವ ರಸ್ತೆ ಸುರಕ್ಷತಾ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲು ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಒಪ್ಪಿಗೆ ನೀಡಿದ್ದಾರೆ. ಈ ಪಂದ್ಯಾವಳಿ ಮಾರ್ಚ್ 2 ರಿಂದ ಮಾರ್ಚ್ 21 ರವರೆಗೆ ರಾಯಪುರದಲ್ಲಿ ನಡೆಯಲಿದ್ದು, ಈ ಕ್ರಿಕೆಟ್​​ ಟೂರ್ನಿಯಲ್ಲಿ ಪ್ರಸಿದ್ಧ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಜಾಂಟಿ ರೋಡ್ಸ್, ಬ್ರೆಟ್​​ ಲೀ, ಬ್ರಿಯಾನ್ ಲಾರಾ, ಮುತ್ತಯ್ಯ ಮುರಳೀಧರನ್ ಭಾಗವಹಿಸಲಿದ್ದಾರೆ.

ಪಂದ್ಯಾವಳಿಯ ಆಯುಕ್ತ ಮತ್ತು ಖ್ಯಾತ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ವಿಶ್ವ ರಸ್ತೆ ಸುರಕ್ಷತಾ ಸರಣಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಕುರಿತು ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಅವರೊಂದಿಗೆ ಚರ್ಚೆ ನಡೆಸಿದ್ದರು. ಗವಾಸ್ಕರ್ ಅವರ ಕೋರಿಕೆಯ ಮೇರೆಗೆ ಈ ಪಂದ್ಯಾವಳಿಯನ್ನು ಆಯೋಜಿಸಲು ಸಿಎಂ ಅನುಮತಿ ನೀಡಿದ್ದಾರೆ. ಈ ಪಂದ್ಯಾವಳಿಯಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಸೇರಿದಂತೆ ಶ್ರೀಲಂಕಾ ತಂಡಗಳು ಭಾಗವಹಿಸಲಿವೆ.

ಓದಿ : ಆಸ್ಟ್ರೇಲಿಯಾ ಆಟಗಾರರು ನಮ್ಮನ್ನು ಲಿಫ್ಟ್ ಒಳಕ್ಕೆ ಸೇರಿಸುತ್ತಿರಲಿಲ್ಲ: ಅಶ್ವಿನ್

ಭಾರತದಲ್ಲಿ ರಸ್ತೆ ಸುರಕ್ಷತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ಪಂದ್ಯಾವಳಿಯ ಮುಖ್ಯ ಉದ್ದೇಶವಾಗಿದೆ. ಈ ಕಾರ್ಯಕ್ರಮಕ್ಕೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಅನುಮೋದನೆ ನೀಡಿದೆ. ಅಲ್ಲದೇ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಬೆಂಬಲದೊಂದಿಗೆ ಗವಾಸ್ಕರ್ ಕಂಪನಿಯ ಪ್ರೊಫೆಷನಲ್ ಮ್ಯಾನೇಜ್ಮೆಂಟ್ ಗ್ರೂಪ್ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.