ETV Bharat / sports

35 ಎಸೆತ 11 ಸಿಕ್ಸರ್​, 94 ರನ್! ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ ಆರ್ಭಟಕ್ಕೆ ಮುಂಬೈ ಇಂಡಿಯನ್ಸ್​ ಖುಷ್

author img

By

Published : Dec 22, 2019, 3:46 PM IST

ಬ್ರಿಸ್ಬೇನ್​ ಹೀಟ್​ ತಂಡದ ನಾಯಕ ಕ್ರಿಸ್​ ಲಿನ್​ ಮೊದಲೆರಡು ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ​ ಆಗಮಿಸಿ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ. ಆದರೆ 3ನೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್​ ತಂಡದ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದು ಕೇವಲ 35 ಎಸೆತಗಳಲ್ಲಿ ಬರೋಬ್ಬರಿ 11 ಸಿಕ್ಸರ್​ ಹಾಗೂ 4 ಬೌಂಡರಿ ಸಹಿತ 94 ರನ್​ಗಳಿಸಿ ಔಟಾದರು. ಇವರ ಅಬ್ಬರದಿಂದ ಕೇವಲ ಒಂಭತ್ತೇ ಓವರ್​ಗಳಲ್ಲೇ ತಂಡ 100 ರ ಗಡಿ ದಾಟಿತು!

Chris Lynn 94
Chris Lynn 94

ಮುಂಬೈ: 2020ರ ಐಪಿಎಲ್​ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಸೇರಿರುವ ಆಸೀಸ್‌ನ ಕ್ರಿಸ್‌ ಲಿನ್​ ಭಾನುವಾರದ ಬಿಗ್​ಬ್ಯಾಶ್​ ಲೀಗ್​ನಲ್ಲಿ ಬೌಂಡರಿ, ಸಿಕ್ಸರ್​ಗಳ ಸುರಿಮಳೆಗೈದರು.

ಬ್ರಿಸ್ಬೇನ್​ ಹೀಟ್​ ತಂಡದ ನಾಯಕ ಕ್ರಿಸ್​ ಲಿನ್​ ಮೊದಲೆರಡು ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ್ದು ಹೇಳಿಕೊಳ್ಳುವ ರನ್‌ಗಳು ಅವರ ಬ್ಯಾಟ್‌ನಿಂದ ಹರಿದು ಬರಲಿಲ್ಲ. ಆದರೆ ಮೂರನೇ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್​ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದ ಅವರು ಲೀಲಾಜಾಲವಾಗಿ ಬ್ಯಾಟಿಂಗ್‌ ಮಾಡಿದ್ರು. ತಾನು ಎದುರಿಸಿದ ಕೇವಲ 35 ಎಸೆತಗಳಲ್ಲಿ ಬರೋಬ್ಬರಿ 11 ಸಿಕ್ಸರ್​ ಹಾಗೂ 4 ಬೌಂಡರಿ ಸಹಿತ 94 ರನ್ ​ಗಳಿಸಿ ಸಿಕ್ಸರ್ಸ್‌ ತಂಡವನ್ನು ತೀವ್ರವಾಗಿ ಕಾಡಿದ್ರು. ಇವರ ಅಬ್ಬರದಿಂದ ತಂಡ ಕೇವಲ 9 ಓವರ್​ಗಳಲ್ಲೇ 100 ರನ್‌ಗಳ ಗಡಿ ದಾಟಿತ್ತು.

ಕ್ರಿಸ್​ ಲಿನ್​ರನ್ನು ಹರಾಜಿನಲ್ಲಿ 2 ಕೋಟಿ ರೂಗೆ ಖರೀದಿಸಿರುವ ಮುಂಬೈ ಇಂಡಿಯನ್ಸ್​ ತನ್ನ ಟ್ವಿಟರ್ ಖಾತೆಯಲ್ಲಿ ಸ್ಫೋಟಕ ಇನ್ನಿಂಗ್ಸ್​ ಫೋಟೋ ಶೇರ್​ ಮಾಡಿಕೊಂಡಿದೆ. ಇದೇ ಇನ್ನಿಂಗ್ಸನ್ನು ಮುಂಬೈ ಇಂಡಿಯನ್ಸ್​ ಪರ ಆಡಲು ಯಾರು ಕಾತುರದಿಂದ ಕಾಯುತ್ತಿದ್ದೀರಾ? ಎಂದು ಬರೆದುಕೊಂಡಿದೆ.

ಲಿನ್‌ ಅಬ್ಬರದ ಬ್ಯಾಟಿಂಗ್​ ವೈಖರಿ ಸದ್ಯ ಟ್ವಿಟರ್​ನಲ್ಲಿ ಟ್ರೆಂಡ್​ ಆಗಿದ್ದು, ಐಪಿಎಲ್​ನಲ್ಲೂ ಇಂಥ ಸೊಗಸಾದ ಆಟವನ್ನು ನೋಡಲು ಕಾಯುತ್ತಿದ್ದೇವೆ ಎಂದು ಭಾರತದ ಅಭಿಮಾನಿಗಳು ಟ್ವೀಟಿಸಿದ್ದಾರೆ. ಇನ್ನೂ ಕೆಲವರು ಲಿನ್ ಅವರಂಥ ಪ್ರತಿಭಾವಂತ ಬ್ಯಾಟ್ಸ್​ಮನ್​ಗೆ ಕೇವಲ 2 ಕೋಟಿ ರೂ ಸಿಕ್ಕಿರುವುದಕ್ಕೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.