ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಟಾರ್ ಪ್ಲೇಯರ್ ಕ್ರಿಸ್ ಗೇಲ್ ಕ್ರೀಡಾಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದು, ಐಪಿಎಲ್ ಟೂರ್ನಿ ನೋಡುವುದು ನಿಲ್ಲಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಐಪಿಎಲ್ನಲ್ಲಿ 7 ಪಂದ್ಯಗಳ ನಂತರ ಕಣಕ್ಕಿಳಿದು ಅರ್ಭಟಿಸಿದ ಗೇಲ್, ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ರನ್ ಗಳಿಸುವಲ್ಲಿ ವಿಫಲವಾಗಿದ್ದರು. ಹೀಗಾಗಿ ತಂಡ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರ ಬಿದ್ದಿದೆ. ಇದರ ಬೆನ್ನಲ್ಲೇ ಕ್ರೀಡಾಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿರುವ ಗೇಲ್, ಉಳಿದ ಐಪಿಎಲ್ ಪಂದ್ಯಗಳನ್ನು ವೀಕ್ಷಣೆ ಮಾಡಿ ಎಂದಿದ್ದಾರೆ.
-
Plz continue to watch @IPL even though my season has come to an end. Thank you 😊 #UniverseBoss
— Chris Gayle (@henrygayle) November 2, 2020 " class="align-text-top noRightClick twitterSection" data="
">Plz continue to watch @IPL even though my season has come to an end. Thank you 😊 #UniverseBoss
— Chris Gayle (@henrygayle) November 2, 2020Plz continue to watch @IPL even though my season has come to an end. Thank you 😊 #UniverseBoss
— Chris Gayle (@henrygayle) November 2, 2020
ಗೇಲ್ ಟ್ವೀಟ್ ಇಂತಿದೆ
ನಮಗೆ ಸಪೋರ್ಟ್ ಮಾಡಿದ್ದಕ್ಕಾಗಿ ಧನ್ಯವಾದಗಳು. ಐಪಿಎಲ್ನ ಉಳಿದ ಪಂದ್ಯಗಳ ವೀಕ್ಷಣೆ ಮಾಡಿ ಎಂದಿರುವ ಗೇಲ್, ಈ ಸೀಸನ್ನಲ್ಲಿ ನನ್ನ ಆಟ ಮುಕ್ತಾಯಗೊಂಡಿದೆ. ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಪಂಜಾಬ್ ಪರ 8ನೇ ಪಂದ್ಯದಲ್ಲಿ ಕಣಕ್ಕಿಳಿದು ಅಬ್ಬರಿಸಿರುವ ಗೇಲ್ 3 ಅರ್ಧಶತಕ ಸಿಡಿಸಿದ್ದು, 288 ರನ್ ಗಳಿಕೆ ಮಾಡಿದ್ದಾರೆ. ಜತೆಗೆ ತಂಡ ಸತತ 5 ಪಂದ್ಯ ಗೆಲ್ಲುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.