ನವದೆಹಲಿ: ವಿಶ್ವದಾಖಲೆಯ ಓಟಗಾರ ಉಸೇನ್ ಬೋಲ್ಟ್ಗೆ ಕೋವಿಡ್ 19 ಪಾಸಿಟಿವ್ ಬಂದಿದೆ. ಆದರೆ, ಬೋಲ್ಟ್ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಕ್ರಿಸ್ ಗೇಲ್ ಕೋವಿಡ್ 19 ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿರುವುದು ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಅಭಿಮಾನಿಗಳಿಗೆ ಸಮಾಧಾನ ತಂದಿದೆ.
ಮಾಜಿ ಒಲಿಂಪಿಯನ್ ಚಾಂಪಿಯನ್ ಜಮೈಕಾದ ಉಸೈನ್ ಬೋಲ್ಟ್ ಕಳೆದ ವಾರ ತಮ್ಮ 34 ಹುಟ್ಟಿದ ಹಬ್ಬ ಆಚರಿಸಿಕೊಂಡಿದ್ದರು. ನಂತರ ನಡೆಸಿದ ಕೋವಿಡ್ 19 ಟೆಸ್ಟ್ನಲ್ಲಿ ಅವರಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು. ಈ ಹಿನ್ನೆಲೆ ಬೋಲ್ಟ್ ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಕ್ರಿಕೆಟಿಗ ವೆಸ್ಟ್ ಇಂಡೀಸ್ನ ಕ್ರೀಸ್ ಗೇಲ್ಗೂ ಕೋವಿಡ್ 19 ಸೋಂಕು ತಗುಲಿರುವ ಆತಂಕ ಎದುರಾಗಿತ್ತು.
ಆದರೆ, ಗೇಲ್ ಕೋವಿಡ್ 19 ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿರುವುದು ತಿಳಿದು ಬಂದಿದೆ. ಯುಎಇಗೂ ಬರುವ ಮೊದಲು ನಡೆಸಿರುವ ಎರಡೂ ಕೋವಿಡ್ 19 ಪರೀಕ್ಷೆಯಲ್ಲೂ ಗೇಲ್ ನೆಗಟಿವ್ ವರದಿ ಪಡೆದಿದ್ದು, ಕಿಂಗ್ಸ್ ಇಲೆವೆನ್ ತಂಡಕ್ಕೆ ನೆಮ್ಮದಿ ತಂದಿದೆ.
ಬೋಲ್ಟ್ ಬರ್ತಡೇ ಪಾರ್ಟಿಯಲ್ಲಿ ಕ್ರೀಸ್ ಗೇಲ್ ಅಲ್ಲದೇ ಮ್ಯಾಂಚೆಸ್ಟರ್ ಹಾಗೂ ಇಂಗ್ಲೆಂಡ್ ಫುಟ್ಬಾಲ್ ತಾರೆ ಬೇಯರ್ ಲೆವೆರುಕ್ಸನ್, ಮತ್ತೋರ್ವ ಫುಟ್ಬಾಲಿಗ ಲೆಯೊನ್ ಬೈಲಿ ಕೂಡ ಪಾಲ್ಗೊಂಡಿದ್ದರು. ಇವರೆಲ್ಲರೂ ಪಾರ್ಟಿಯಲ್ಲಿ ನೃತ್ಯ ಮಾಡುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
ವೈಯಕ್ತಿಕ ಕಾರಣಗಳಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿದಿರುವ ಕ್ರಿಸ್ಗೇಲ್ ಶೀಘ್ರದಲ್ಲೇ ಐಪಿಎಲ್ನಲ್ಲಿ ಪಾಲ್ಗೊಳ್ಳಲು ಯುಎಇಗೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.