ETV Bharat / sports

ಪೆಟ್ಟು ತಿಂದು ಜರ್ಜರಿತರಾದ ಪೂಜಾರ ಗೋಡೆಯಂತೆ ನಿಂತು ಗೆಲುವಿನ ರೂವಾರಿ ಎನಿಸಿದರು - ಭಾರತ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ

ಅಂತಿಮ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಗಿಲ್ ಜೊತೆ 91 ರನ್ ಮತ್ತು ಪಂತ್ ಜೊತೆ 61 ರನ್​ಗಳ ಜೊತೆಯಾಟವಾಡಿದ ಪೂಜಾರ, ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

Cheteshwar Pujara
ಚೇತೇಶ್ವರ್ ಪೂಜಾರ
author img

By

Published : Jan 22, 2021, 10:40 AM IST

ಹೈದರಾಬಾದ್: ಬ್ರಿಸ್ಬೇನ್‌ನಲ್ಲಿ ನಡೆದ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಭಾರತದ ಐತಿಹಾಸಿಕ ಗೆಲುವಿನಲ್ಲಿ ರಿಷಭ್ ಪಂತ್ ಮತ್ತು ಶುಬ್ಮನ್ ಗಿಲ್ ಮತ್ತು ಹೊಸ 'ವಾಲ್' ಚೇತೇಶ್ವರ್ ಪೂಜಾರ ಅವರ ಕಾಣಿಕೆ ಮತ್ತು ನಿರ್ಭೀತ ಬ್ಯಾಟಿಂಗ್ ಬಗ್ಗೆ ಬಹುತೇಕ ಎಲ್ಲ ಭಾರತೀಯ ಅಭಿಮಾನಿಗಳು ಮತ್ತು ಪಂಡಿತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಸಮಯದಲ್ಲಿ, ಪೂಜಾರ ಒಟ್ಟು 928 ಎಸೆತಗಳನ್ನು ಎದುರಿಸಿದ್ದಾರೆ. 29 ಬೌಂಡರಿಗಳ ಸಹಾಯದಿಂದ 33.88 ಸ್ಟ್ರೈಕ್ ದರದಲ್ಲಿ ಒಟ್ಟು 271 ರನ್ ಗಳಿಸಿದರು. 562 ಚೆಂಡು ಎದುರಿಸುವ ರಹಾನೆ 268 ರನ್ ಗಳಿಸಿ ಹೆಚ್ಚಿನ ಎಸೆತಗಳನ್ನು ಎದುರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಶುಬ್ಮನ್ ಗಿಲ್ 427 ಎಸೆತ ಎದುರಿಸಿ 259 ರನ್ ಗಳಿಸಿದ್ದಾರೆ. ಸರಣಿಯಲ್ಲಿ ಭಾರತದ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದ ಪಂತ್ 392 ಎಸೆತಗಳಲ್ಲಿ 274 ರನ್ ಗಳಿಸಿದ್ದಾರೆ.

Cheteshwar Pujara
ಚೇತೇಶ್ವರ್ ಪೂಜಾರ

ಆಸ್ಟ್ರೇಲಿಯಾದಲ್ಲಿ ನಡೆದ 2018-19 ಸರಣಿಯ ಅವಧಿಯಲ್ಲಿ, ಪೂಜಾರ ಒಟ್ಟು 1,258 ಎಸೆತಗಳನ್ನು ಎದುರಿಸಿದ್ದರು ಮತ್ತು 74.43 ರ ಸರಾಸರಿಯಲ್ಲಿ 50 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 41.21 ಸ್ಟ್ರೈಕ್ ರೇಟ್​ನಲ್ಲಿ 521 ರನ್ ಗಳಿಸಿದ್ದರು.

ಜನವರಿ 19 ರಂದು ಗಬ್ಬಾದಲ್ಲಿ ನಡೆದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಅಂತಿಮ ದಿನದಂದು ಭಾರತ ಗೆಲ್ಲಲು 324 ರನ್ ​ಬೇಕಾದಾಗ, ತಂಡದ ಎರಡನೇ ಅತ್ಯಂತ ಹಿರಿಯ ಬ್ಯಾಟ್ಸ್‌ಮನ್ ಪೂಜಾರ ಮತ್ತೊಮ್ಮೆ ಗೋಡೆಯಂತೆ ನಿಂತರು. ಎದುರಿಸಿದ 211 ಎಸೆತಗಳಲ್ಲಿ 11 ಚೆಂಡುಗಳು ಅವರ ದೇಹಕ್ಕೆ ಬಡಿದವು. ಎರಡು ಬಾರಿ ಮಾತ್ರ ತಮ್ಮ ನೋವು ತೋರಿಸಿಕೊಂಡ ಪೂಜಾರ, ಉಳಿದ 9 ಬಾರಿ ಹೆಲ್ಮೆಟ್, ಕೈ, ತೊಡೆ, ಎದೆಗೆ ಚೆಂಡು ಬಡಿದಾಗಲೆಲ್ಲ ದೀರ್ಘವಾದ ಉಸಿರು ತೆಗೆದುಕೊಂಡು ಮುಂದಿನ ಚೆಂಡು ಎದುರಿಸಲು ಸಿದ್ಧರಾಗುತ್ತಿದ್ದರು.

Cheteshwar Pujara
ಚೇತೇಶ್ವರ್ ಪೂಜಾರ

ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ನಿಧಾನವಾಗಿ ಬ್ಯಾಟಿಂಗ್ ಮಾಡಿದ್ದಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದ ಪೂಜಾರ, ಮಾಜಿ ಕ್ರಿಕೆಟಿಗರ ಟೀಕೆ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಲು ಎಂದಿಗೂ ಅವಕಾಶ ನೀಡಲಿಲ್ಲ. ಸೌರಾಷ್ಟ್ರ ಬ್ಯಾಟ್ಸ್‌ಮನ್ ಪೂಜಾರ ತಮ್ಮದೇ ಶೈಲಿಯಲ್ಲಿ ಬ್ಯಾಟಿಂಗ್ ಮಾಡುತ್ತಲೇ ಇದ್ದರು.

Cheteshwar Pujara
ಚೇತೇಶ್ವರ್ ಪೂಜಾರ

ಅಂತಿಮ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಗಿಲ್ ಜೊತೆ 91 ರನ್ ಮತ್ತು ಪಂತ್ ಜೊತೆ 61 ರನ್​ಗಳ ಜೊತೆಯಾಟವಾಡಿದ ಪೂಜಾರ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.