ಚೆನ್ನೈ: ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ತಂಡದ ಪ್ಲೇಯರ್ ಚೇತೇಶ್ವರ್ ಪೂಜಾರಾ ಬರೋಬ್ಬರಿ ಏಳು ವರ್ಷಗಳ ನಂತರ ಇದೇ ಮೊದಲ ಸಲ ಐಪಿಎಲ್ ಆಡುವ ಅವಕಾಶ ಪಡೆದುಕೊಂಡಿದ್ದು, ಮೂಲ ಬೆಲೆ 2 ಕೋಟಿ ರೂ.ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದರು.
ಬರುವ ಏಪ್ರಿಲ್ 9ರಿಂದ ಟೂರ್ನಿ ಆರಂಭಗೊಳ್ಳಲಿರುವ ಕಾರಣ ಎಲ್ಲ ಫ್ರಾಂಚೈಸಿಗಳು ಇದೀಗ ತರಬೇತಿ ಶಿಬಿರ ಆರಂಭಿಸಿದ್ದು, ಪ್ಲೇಯರ್ಸ್ ನೆಟ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಚೇತೇಶ್ವರ್ ಪೂಜಾರಾ ಕೂಡಾ ನೆಟ್ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಸಿಕ್ಸರ್ಗಳ ಸುರಿಮಳೆಗೈದಿದ್ದಾರೆ.
-
Puji was on fire 🔥@cheteshwar1 #csk pic.twitter.com/CNbPXi786q
— Ravi Desai 🇮🇳 Champion CSK 💛🏆 (@its_DRP) March 30, 2021 " class="align-text-top noRightClick twitterSection" data="
">Puji was on fire 🔥@cheteshwar1 #csk pic.twitter.com/CNbPXi786q
— Ravi Desai 🇮🇳 Champion CSK 💛🏆 (@its_DRP) March 30, 2021Puji was on fire 🔥@cheteshwar1 #csk pic.twitter.com/CNbPXi786q
— Ravi Desai 🇮🇳 Champion CSK 💛🏆 (@its_DRP) March 30, 2021
ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟರ್ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದು, ಅಗ್ರೆಸ್ಸಿವ್ ಆಗಿ ಬ್ಯಾಟ್ ಮಾಡಿರುವ ಪೂಜಾರಾ ಉತ್ತಮ ಹೊಡೆತ ಹೊಡೆದಿದ್ದಾರೆ. ಇದರ ಮೂಲಕ ತಾವೂ ಕೂಡ ಹೊಡಿಬಡಿ ಆಟಕ್ಕೂ ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಇದನ್ನೂ ಓದಿ: 2014ರ ನಂತರ ಐಪಿಎಲ್ನಲ್ಲಿ ಪೂಜಾರಾ ಸೇಲ್... ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು ಎಂದ ಚೇತೇಶ್ವರ್!
ಚೇತೇಶ್ವರ್ ಬ್ಯಾಟಿಂಗ್ ವೈಖರಿಗೆ ಕ್ರಿಕೆಟ್ ಅಭಿಮಾನಿಗಳು ಮನಸೋತಿದ್ದಾರೆ. ಈ ಹಿಂದೆ 2014ರಲ್ಲಿ ಪೂಜಾರಾ ಕೊನೆಯ ಸಲ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು.
ಚೆನ್ನೈ ತಂಡ ಏಪ್ರಿಲ್ 10ರಂದು ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿದೆ.